More

    ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ಸದೃಢ

    ಹುಬ್ಬಳ್ಳಿ : ರಥಸಪ್ತಮಿ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ಯ ಮಾಧ್ಯಮ ಸಹಯೋಗದೊಂದಿಗೆ ಯೋಗಸ್ಪರ್ಶ ಪ್ರತಿಷ್ಠಾನ, ಎಸ್​ಪಿವೈಎಸ್​ಎಸ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಹುಬ್ಬಳ್ಳಿ ಶಾಖೆಯ ಸಹಯೋಗದೊಂದಿಗೆ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರ ಅಭಿಯಾನವನ್ನು ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

    ಬೆಳಗ್ಗೆ 6 ಗಂಟೆಯಿಂದ ಪ್ರಾರಂಭಗೊಂಡ ಅಭಿಯಾನದಲ್ಲಿ ನೂರಾರು ಯೋಗಾಸಕ್ತರು ಪಾಲ್ಗೊಂಡಿದ್ದರು. ಸೂರ್ಯ ದೇವರ ಮಂತ್ರ ಪಠಿಸುತ್ತ ಯೋಗಾಸಕ್ತರು ಸೂರ್ಯ ನಮಸ್ಕಾರ ಮಾಡಿದರು.

    ನಂತರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕಿ ರಾಜಶ್ರೀ ಜಡಿ, ಸೂರ್ಯ ನಮಸ್ಕಾರದ ಮೂಲಕ ಸೂರ್ಯ ದೇವರ ಋಣ ತೀರಿಸುವ ಪ್ರಯತ್ನ ಇದು ಎಂದರು.

    ಪ್ರತಿಯೊಬ್ಬರೂ ನಿತ್ಯ ಯೋಗಾಸನ, ಸೂರ್ಯ ನಮಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗಾಭ್ಯಾಸದ ಉತ್ತಮ ಆರೋಗ್ಯದ ಜತೆಗೆ ಸಂಸ್ಕಾರವನ್ನೂ ನೀಡುತ್ತದೆ. ಮುಖ್ಯವಾಗಿ ಮಹಿಳೆಯರು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಕುಟುಂಬದವರೂ ಯೋಗ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

    ಇಂದಿನ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸುವುದು ಪಾಲಕರ ಜವಾಬ್ದಾರಿ. ಇದಕ್ಕಾಗಿ ಮೊದಲು ಪಾಲಕರನ್ನು ಜಾಗೃತಗೊಳಿಸಬೇಕು. ಇದು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಅಧ್ಯಕ್ಷತೆ ವಹಿಸಿದ್ದ ಎಸ್​ಪಿವೈಎಸ್​ಎಸ್ ಕೃಷ್ಣಾ ವಲಯ ಸಂಚಾಲಕ ಸುಧಾಕರ ದಿವಟೆ ಮಾತನಾಡಿ, ಸೂರ್ಯನಮಸ್ಕಾರದಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಯೋಗಾಭ್ಯಾಸವನ್ನು ಮುಂದಿನ ಪೀಳಿಗೆಯೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅತಿಥಿಯಾಗಿದ್ದ ಹರಿಶ್ಚಂದ್ರ ಘಾಟನ ದೇವದಾನಂ ಮಾತನಾಡಿದರು. ಯೋಗಸ್ಪರ್ಷ ಪ್ರತಿಷ್ಠಾನದ ಹುಬ್ಬಳ್ಳಿ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಗೋಪಾಲಕೃಷ್ಣ ಜೋಶಿಅಮರಾವತಿ ಗಾಣಿಗಿ ಹಾಗೂ ಇತರರು ಇದ್ದರು. ರಶ್ಮೀ ಬಿಳ್ಳೂರ ನಿರೂಪಿಸಿದರು. ವಿಶ್ವನಾಥ ಗುಡ್ಡದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts