More

    ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು…?

    ನವದೆಹಲಿ: ಕರೊನಾ ಸಂಕಷ್ಟ ಏನೇ ಇರಲಿ, ರಾಜಕಾರಣಿಗಳಿಗೆ ಚುನಾವಣೆಗಿಂತ ಮುಖ್ಯವಾದ ಕೆಲಸ ಇನ್ನೇನಿದೆ ಹೇಳಿ…!
    ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳಷ್ಟೇ ಉಳಿದಿವೆ. ನಂತರ ಪಶ್ಚಿಮ ಬಂಗಾಳದ ಚುನಾವಣೆಗೆ ಸಜ್ಜಾಗಬೇಕು. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಆನ್​ಲೈನ್​ ಮೂಲಕ ಪ್ರಚಾರ ಶುರು ಮಾಡಿವೆ. ಸಾಮಾಜಿಕ ಜಾಲ ತಾಣಗಳ ಮೂಲಕ ವರ್ಚುವಲ್​ ಸಮಾವೇಶ ನಡೆಸುತ್ತಿವೆ.

    ಇದು ರಾಜಕಾರಣಿಗಳ ಕತೆಯಾದರೆ, ಅಧಿಕಾರಿಗಳು ಕೂಡ ಸಜ್ಜಾಗಬೇಕಲ್ಲ, ಚುನಾವಣೆಗೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಆರಂಭಿಸಿ ಒಟ್ಟಾರೆ ಚುನಾವಣೆ ಪ್ರಕ್ರಿಯೆಗೆ ಏನೆಲ್ಲ ಬೇಕು ಎಂಬುದರ ಪಟ್ಟಿ ಸಿದ್ಧಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಭಾರಿ ಹಿನ್ನಡೆ 

    ಬಿಹಾರದ ಅಧಿಕಾರಿಗಳು ಸಲ್ಲಿಸಿರುವ ಪಟ್ಟಿಯಲ್ಲಿ ಕೆಲ ಸಾಮಗ್ರಿಗಳ ಇಂತಿವೆ. ಟೂಥ್​ ಪಿಕ್​ನಂಥ ಬಿದಿರಿನ ಕಡ್ಡಿಗಳು, ಒಮ್ಮೆ ಬಳಸಿ ಬಿಸಾಡುವ ಸಿರಿಂಜ್​ಗಳು, ಚುನಾವಣಾಧಿಕಾರಿ, ಸಿಬ್ಬಂದಿ ಮೇಜಿನ ಸುತ್ತ ಗ್ಲಾಸ್​ ಶೀಲ್ಡ್​… ಹೀಗೆ ಸಾಗುತ್ತದೆ ಪಟ್ಟಿ.

    ಹೇಳಿ ಕೇಳಿ ಇದು ಕೋವಿಡ್​ ಕಾಲಮಾನದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೀಗಾಗಿ ವೈರಸ್​ ಹರಡುವುದನ್ನು ತಡೆಗಟ್ಟಲು ಆದಷ್ಟು ಮಾನವ ಸ್ಪರ್ಶರಹಿತ ವ್ಯವಸ್ಥೆಯನ್ನು ರೂಪಿಸಬೇಕಿದೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ಶೇ.98.8 ಉತ್ತೀರ್ಣ, ಶೇ.95 ಫಲಿತಾಂಶ ಪಡೆದರೂ ವಯನಾಡ್​ ಕನಿಷ್ಠ ಸಾಧನೆ

    ಮತಯಂತ್ರದಲ್ಲಿ ಗುಂಡಿಯನ್ನು ಅದುಮಲು ಬೆರಳಿನ ಬದಲಿನ ಬದಲು ಬಿದಿರಿನ ಕಡ್ಡಿಯನ್ನು ಬಳಸಬಹುದು. ಏಕೆಂದರೆ ಒಂದೊಂದು ಮತ ಚಲಾಯಿಸಿದಾಗ ಅದನ್ನು ಪ್ರತಿ ಬಾರಿಯೂ ಸ್ಯಾನಿಟೈಸ್​ ಮಾಡುವುದು ಕಷ್ಟವಾಗಲಿದೆ. ಇನ್ನು ಬೆರಳಿಗೆ ಶಾಯಿ ಬಳಿಯಲು ಕಡ್ಡಿಯ ಬದಲು ಒಮ್ಮೆ ಬಳಸುವ ಸಿರಿಂಜ್​ಗಳನ್ನು ಉಪಯೋಗಿಸಬಹುದು. ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ಜನರೊಂದಿಗೆ ಅಂತರ ಕಾಪಾಡಿಕೊಳ್ಳಲು ಮೇಜಿನ ಸುತ್ತ ಗಾಜಿನ ಅಥವಾ ಪಾರದರ್ಶಕ ಆವರಣ ಮಾಡಿಕೊಳ್ಳಬೇಕಾಗುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ

    ಅಂತೆಯೇ ಇವೆಲ್ಲ ವಸ್ತುಗಳು ಬೇಕಾಗುತ್ತವೆ ಎಂಬ ಯೋಜನೆ ಸಿದ್ಧಪಡಿಸಲಾಗಿದೆ. ಇದಲ್ಲದೇ, ಮಾಸ್ಕ್​, ಸ್ಯಾನಿಟೈಸರ್​ಗಳು ಬೇಕೆಬೇಕಲ್ಲ.
    ಅಲ್ಲಿಯವರೆಗೆ ಇನ್ನೂ ಯಾವೆಲ್ಲ ಬದಲಾವಣೆಗಳು ಆಗಬಹುದೋ ಯಾರಿಗೆ ಗೊತ್ತು. ಆದರೆ, ಸಿದ್ಧತೆಯನ್ನಂತೂ ಮಾಡಿಕೊಳ್ಳಲೇ ಬೇಕಲ್ಲ…!

    ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts