More

    ಪಾಶ್ಚಾತ್ಯ ಸಂಸ್ಕೃತಿ ಕೈಬಿಡಿ

    ತಾಳಿಕೋಟೆ: ನಿತ್ಯದ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತ ಪಾಶ್ಚಾತ್ಯ ಸಂಸ್ಕೃತಿ ಕಡೆಗೆ ವಾಲುತ್ತಿರುವ ನಾವುಗಳು ಅದನ್ನು ಕೈಬಿಡಬೇಕು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.

    ತಾಲೂಕಿನ ಅಸ್ಕಿ ಗ್ರಾಮದಲ್ಲಿ ಗೌರಿಶಂಕರ ರಥೋತ್ಸವ ಹಾಗೂ ಜಾತ್ರೋತ್ಸವ ನಿಮಿತ್ತ ಬುಧವಾರ 15 ದಿನಗಳ ಕಾಲ ನಡೆದು ಬಂದ ದಾನಮ್ಮ ದೇವಿ ಪುರಾಣ ಮಂಗಲ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

    ಇಂದಿನ ಜನರು ನಾಲಿಗೆ ಕೇಳುವ ರುಚಿಯನ್ನು ನಿತ್ಯ ಹುಡುಕಿಕೊಂಡು ಹೋಗುತ್ತಿದ್ದಾರೆ. ಆರೋಗ್ಯಕ್ಕೆ ಪೂರಕವಾದ ಆಹಾರ ತಿನ್ನುವ ಬದಲು ಆರೋಗ್ಯ ಹದಗೆಡಿಸುವ ಆಹಾರ ಪದ್ಧತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಇದರಿಂದ ಹೃದಯ ರೋಗ, ಮೂತ್ತಪಿಂಡ ಸಮಸ್ಯೆ, ರಕ್ತದೊತ್ತಡ, ಅಸ್ತಮಾದಂತಹ ಕಾಯಿಲೆಗಳು ಬರುತ್ತವೆ. ಹೀಗಾಗಿ ನಮ್ಮ ಆರೋಗ್ಯಕ್ಕೆ ಪೂರಕವಾಗುವ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

    ಮಾಗಣಗೇರಿ ಬೃಹನ್ಮಠದ ಡಾ.ವಿಶ್ವರಾಧ್ಯ ಶಿವಾಚಾರ್ಯರು, ಮಳಖೇಡ ದರ್ಗಾದ ಸಜ್ಜಾದೆ ನಸೀನ್ ಸೈಯದ್‌ಶಾ ಮುಸ್ತಾಾ ಖಾದ್ರಿ, ಅಸ್ಕಿ ಹಿರೇಮಠದ ವಿರುಪಾಕ್ಷೇಶ್ವರ ಶಿವಾಚಾರ್ಯರು, ಕಲಕೇರಿ ಮರಳಾದೇಶ್ವರ ಮಠದ ಸಿದ್ದರಾಮ ಶಿವಾಚಾರ್ಯರು, ಕಾಂಗ್ರೆಸ್ ಮುಖಂಡ ಬಿ.ಎಸ್.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಪ್ರಾಧ್ಯಾಪಕ ಬಸನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಸುರೇಶಬಾಬುಗೌಡ ಬಿರಾದಾರ, ಸಂತೋಷ ದೊಡಮನಿ, ಪ್ರಶಾಂತ ಹಾವರಗಿ, ಸಿದ್ದು ಬುಳ್ಳಾ, ಡಾ.ಪ್ರಭುಗೌಡ ಬಿರಾದಾರ, ಡಾ.ಸಂಗನಗೌಡ ವಣಿಕ್ಯಾಳ, ಗ್ರಾಂಪಂ ಅಧ್ಯಕ್ಷೆ ಹಳ್ಳೆಮ್ಮ ವಣಿಕ್ಯಾಳ, ಉಪಾಧ್ಯಕ್ಷ ಅಯ್ಯಪ್ಪ ಮುಗಳಿ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts