More

    ಮಂಜೇಶ್ವರ-ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕಕ್ಕೆ ಪ್ರವೇಶಿಸಲು ಕೋವಿಡ್​-19 ಟೆಸ್ಟ್ ವಿನಾಯಿತಿ ನೀಡಿ; ಸಿಎಂಗೆ ಮನವಿ

    ಬೆಂಗಳೂರು: ಕರ್ನಾಟಕ-ಕೇರಳ ಗಡಿಭಾಗದ ಮಂಜೇಶ್ವರ-ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕ ಪ್ರವೇಶಿಸಲು ಕಡ್ಡಾಯಗೊಳಿಸಲಾಗಿರುವ ಕೋವಿಡ್​-19 ಪರೀಕ್ಷೆ ವರದಿಯಿಂದ ವಿನಾಯಿತಿ ನೀಡಬೇಕು ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್​​ನ ಪದಾಧಿಕಾರಿಗಳು ಇಂದು ಸಿಎಂ ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಈ ಮನವಿ ಸಲ್ಲಿಸಿದರು.

    ಮನವಿ ಪತ್ರವನ್ನು ಸ್ವೀಕರಿಸಿದ ಮುಖ್ಯಮಂತ್ರಿಯವರು ಅದನ್ನು ತಮ್ಮ ಕಾರ್ಯದರ್ಶಿಯವರಿಗೆ ನೀಡಿ, ಸಂಬಂಧಿತ ವಿಷಯದ ಕುರಿತು ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆ ನೀಡಿದ್ದಾರೆ. ನಂತರ ನಿಯೋಗವು ಮುಖ್ಯಮಂತ್ರಿಗಳ ಕಾರ್ಯದರ್ಶಿಯವರನ್ನು ಭೇಟಿಯಾಗಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ಜನರಿಗಾಗುವ ತೊಂದರೆಯನ್ನು ವಿವರಿಸಿ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

    1. ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರು ಹೆಚ್ಚಾಗಿ ದಕ್ಷಿಣ ಕನ್ನಡವನ್ನು ಆಶ್ರಯಿಸಿರುವುದರಿಂದ ಮತ್ತು ಈ ಪ್ರದೇಶದಲ್ಲಿ ಕೋವಿಡ್ ಕನಿಷ್ಠ ಪ್ರಮಾಣದಲ್ಲಿರುವುದರಿಂದ ಈ ತಾಲೂಕುಗಳ ಜನರಿಗೆ ಕೋವಿಡ್-19 ಪರೀಕ್ಷೆಯಿಂದ ವಿನಾಯಿತಿ ನೀಡಬೇಕು. ಈ ಜನರ ವಾಸಸ್ಥಳ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ವಿಳಾಸ ಪರಿಗಣಿಸಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ಮೊಬೈಲ್​ ಫೋನ್​ ನಂಬರ್ ಪಡೆದು ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು.
    2. ಈಗಾಗಲೇ ಸಂಚಾರಕ್ಕೆ ಅನುಮತಿಸಿದ 4 ರಸ್ತೆಗಳಲ್ಲದೆ, ಮಂಜೇಶ್ವರ – ಪುತ್ತೂರು ರಸ್ತೆಯ ಆನೆಕಲ್ಲು, ಬಂದಡ್ಕ-ಸುಳ್ಯ ರಸ್ತೆಯ ಮಾಣಿಮೂಲೆ, ಉಪ್ಪಳ-ಪುತ್ತೂರು ರಸ್ತೆಯ ನೆಲ್ಲಿಕಟ್ಟೆ-ಮುಗುಳಿ ಹಾಗೂ ಪೆರ್ಲ-ಪಾಣಾಜೆ ರಸ್ತೆಯ ಸ್ವರ್ಗ ಚೆಕ್ ಪೋಸ್ಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು.
    3. ಇತರ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಇವುಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಮತವಿದೆ.

    ನಿಯೋಗದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ, ಕಾರ್ಯದರ್ಶಿ ನಿತಿನ್​ರಾಜ್ ನಾಯ್ಕ್, ಬಾ.ನಾ. ಸುಬ್ರಹ್ಮಣ್ಯ, ಗಿರೀಶ್, ಮಂಜು ಪ್ರಸಾದ್ ಮುಂತಾದವರಿದ್ದರು. ಟ್ರಸ್ಟ್​ ಪದಾಧಿಕಾರಿಗಳು ಇದೇ ವಿಷಯವಾಗಿ ಆರೋಗ್ಯ ಸಚಿವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪತಂಜಲಿಯ ಕೊರೊನಿಲ್ ಮಾತ್ರೆಯಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ರಾ ಕೇಂದ್ರ ಆರೋಗ್ಯ ಸಚಿವ!; ಸ್ಪಷ್ಟನೆ ಕೋರಿದ ಐಎಂಎ

    ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಜೊಲ್ಲು ಸುರಿಸಿದ ಗಣ್ಯರು! ಅದನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್​ ಗ್ಯಾಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts