More

    ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿ


    ಬಾಗಲಕೋಟೆ: ಮಕ್ಕಳಲ್ಲಿ ಕಲೆ, ಸಾಹಿತ್ಯ, ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಬೇಕು. ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿದ್ಯಾಪ್ರಸಾರಕ ಮಂಡಳದ ಆಡಳಿತ ಮಂಡಳಿ ಸದಸ್ಯ, ಕಾನೂನು ಸಲಹೆಗಾರ ಕೆ.ಎಸ್.ದೇಶಪಾಂಡೆ ಹೇಳಿದರು.


    ಬಾಗಲಕೋಟೆ: ಮಕ್ಕಳಲ್ಲಿ ಕಲೆ, ಸಾಹಿತ್ಯ, ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಬೇಕು. ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿದ್ಯಾಪ್ರಸಾರಕ ಮಂಡಳದ ಆಡಳಿತ ಮಂಡಳಿ ಸದಸ್ಯ, ಕಾನೂನು ಸಲಹೆಗಾರ ಕೆ.ಎಸ್.ದೇಶಪಾಂಡೆ ಹೇಳಿದರು.

    ನಗರದ ವಿದ್ಯಾಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪ್ರೌಢಶಾಲೆ ವಿಭಾಗದಲ್ಲಿ ಮಂಗಳವಾರ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಗತಿ ಕುರಿತು ಸಭೆಯಲ್ಲಿ ಮಾತನಾಡಿದರು.

    ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳು ನಿಜವಾದ ಆಸ್ತಿ. ಅವರ ಹಿತವನ್ನು ಕಾಪಾಡಿ ಅವರ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕು ಎಂದರು.
    ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರಾದವರು ದೇವಸ್ಥಾನಕ್ಕೆ ಕಂಬಗಳು ಎಷ್ಟು ಮುಖ್ಯವೋ ಹಾಗೇ ಶಾಲೆಗಳಿಗೆ ಶಿಕ್ಷಕರು ಕಂಬಗಳಂತೆ ಆಗಬೇಕು. ದಾನಗಳಲ್ಲಿ ಅತಿ ದೊಡ್ಡ ದಾನ ಅನ್ನದಾನ ಆದರೆ ಅದು ಒಂದು ದಿನ ಮಾತ್ರ ಹಸಿವು ನೀಗಿಸಬಹುದು. ಆದರೆ ಅಕ್ಷರ ದಾನ ಇಡೀ ಜೀವನದ ಹಸಿವು ನೀಗಿಸುತ್ತದೆ ಎಂದರು.

    ಶಿಕ್ಷಕರಾದವರು ಪಾಠ ಬೋಧನೆ ಮಾಡುವ ಮೊದಲೇ ಮನೆಯಲ್ಲಿ ಅಭ್ಯಾಸ ಮಾಡಿಕೊಂಡು ಹೋಗಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಬೋಧನೆ ಮಾಡಿದರೆ ಅದು ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ. ಹಲವಾರು ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಬೇಕು. ಶ್ರದ್ಧೆ, ಪರಿಶ್ರಮ ಹಾಗೂ ಪ್ರಾಮಾಣಿಕತೆ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
    ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ. ಗಿರೀಶ ಮಾಸೂರಕರ, ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ಮಂಡಳಿ ಸದಸ್ಯರಾದ ಎಸ್.ಕೆ.ಕುಲಕರ್ಣಿ, ಸುಧೀರ ದೇವದಾಸ, ಪ್ರೌಢಶಾಲೆ ವಿಭಾಗದ ಉಪ ಸಮಿತಿ ಅಧ್ಯಕ್ಷ ಸಚಿನ ಸೇಡಂಕರ ಇದ್ದರು. ಬಿ.ಎಚ್.ಲಮಾಣಿ ಸ್ವಾಗತಿಸಿದರು. ಕೆ. ವಿಜಯಕುಮಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts