More

    ಮಕ್ಕಳಿಗೆ ಶಿಕ್ಷಣ ಎಂಬ ಆಸ್ತಿ ನೀಡಿ

    ಅಳವಂಡಿ: ಮಕ್ಕಳಿಗೆ ಶಿಕ್ಷಣವೆಂಬ ಆಸ್ತಿ ನೀಡುವುದು ಪಾಲಕರ ಕರ್ತವ್ಯ. ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿರುವುದರಿಂದ ಚಿಣ್ಣರು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ಗ್ರಾಪಂ ಸದಸ್ಯ ವಿಷ್ಣು ಹಾಳಕೇರಿ ತಿಳಿಸಿದರು.

    ಇದನ್ನೂ ಓದಿ: ಆಫ್ಘಾನ್​​ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳೇ ಆಸರೆ! ಇದು ಕನ್ನಡಿಗರ ಹೆಮ್ಮೆ

    ಸಮೀಪದ ಬೆಳಗಟ್ಟಿಯಲ್ಲಿ ಹಟ್ಟಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ತಂಡ ಹಮ್ಮಿಕೊಂಡಿದ್ದ ಮರಳಿ ಶಾಲೆಗೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
    ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ ಜತೆಗೆ ಪಠ್ಯಪುಸ್ತಕ, ಶೂ, ಸಾಕ್ಸ್, ಬಿಸಿಯೂಟ, ಹಾಲು, ಮೊಟ್ಟೆ ಮುಂತಾದ ಸೌಲಭ್ಯ ನೀಡಿದೆ. ಮಕ್ಕಳು ಇವುಗಳನ್ನು ಬಳಸಿಕೊಂಡು ವಿದ್ಯೆ ಎಂಬ ಆಸ್ತಿ ಸಂಪಾದಿಸಬೇಕು. ಇದಕ್ಕೆ ಪಾಲಕರು ಮುತುವರ್ಜಿ ವಹಿಸಬೇಕು ಎಂದರು.

    ಮುಖ್ಯಶಿಕ್ಷಕ ವೀರಣ್ಣ ಮಟ್ಟಿ ಮಾತನಾಡಿ, ದುಡಿಯುವ ವಯಸ್ಸಿನಲ್ಲಿ ಓದಲು ಸಾಧ್ಯವಿಲ್ಲ. ಹೀಗಾಗಿ ಓದುವ ವಯಸ್ಸಿನಲ್ಲಿ ಅಭ್ಯಾಸಕ್ಕೆ ಒತ್ತು ನೀಡಬೇಕು. ಪಾಲಕರು ಮಕ್ಕಳನ್ನು ಕಲಿಕೆಯಿಂದ ವಿಮುಖರನ್ನಾಗಿಸದೆ ಶಾಲೆಗೆ ಕಳಿಸಿ ಸಕಲ ಸೌಲಭ್ಯಗಳೊಂದಿಗಿನ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
    ನಂತರ ಶಿಕ್ಷಕರ ತಂಡ, ಶಾಲಾ ಬಿಟ್ಟ ಮಕ್ಕಳ ಮನೆಗೆ ತೆರಳಿ ಪಾಲಕರಿಗೆ ಕಡ್ಡಾಯ ಶಿಕ್ಷಣದ ಅರಿವು ಮೂಡಿಸಿತು. ಮಕ್ಕಳನ್ನು ಮರಳಿ ಶಾಲೆಗೆ ಕಳಿಸುವಂತೆ ಮನವಿ ಮಾಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts