More

    ಅತಿಉದ್ದನೇ ಕೂದಲಿನ ಹಿರಿಮೆಯುಳ್ಳ ಯುವತಿಗೆ 12 ವರ್ಷಗಳಲ್ಲಿ ಮೊದಲನೇ ಹೇರ್​​ಕಟ್!

    ಗಾಂಧಿನಗರ : ಉದ್ದನೇ ಕೂದಲಿನ ರಾಜಕುಮಾರಿ ರಪುನ್​ಜೆಲ್​​ನ ಕಥೆ ಕೇಳಿದ್ದೀರಾ ? ಅಂಥದೇ ಒಬ್ಬ ನೀಳ ಕೂದಲ ಒಡತಿ ಗುಜರಾತಿನ ಮೋಡಾಸದಲ್ಲಿದ್ದಾಳೆ. ಅವಳ ಹೆಸರು ನೀಲಾಂಶಿ ಪಟೇಲ್. ಆಕೆಗೆ 18 ವರ್ಷ ತುಂಬುವ ಮುನ್ನ 2020 ರ ಜುಲೈನಲ್ಲಿ ಕೂದಲಿನ ಉದ್ದವನ್ನು ಅಳೆದಾಗ ಅದು 200 ಸೆಂಟಿಮೀಟರ್ ಉದ್ದವಾಗಿತ್ತು. ಅದಕ್ಕಾಗಿ ಅವಳು ಅತಿಉದ್ದ ಕೂದಲು ಹೊಂದಿದ ಹದಿಹರೆಯದ ಹುಡುಗಿಯಾಗಿ ಗಿನ್ನೀಸ್ ದಾಖಲೆ ಗೆದ್ದಿದ್ದಾಳೆ.

    ತನ್ನ ಆರನೇ ವಯಸ್ಸಿನಲ್ಲಿ ಹೇರ್​ ಸಲೂನಿನಲ್ಲಿ ಆದ ಕೆಟ್ಟ ಅನುಭವದ ನಂತರ ಪಟೇಲ್ ತನ್ನ ಕೂದಲಿಗೆ ಕತ್ತರಿ ತಾಗಿಸಲು ಬಿಟ್ಟಿರಲಿಲ್ಲವಂತೆ. ಆದರೆ ಇದೀಗ 12 ವರ್ಷಗಳ ನಂತರ ಹೇರ್​ಕಟ್​​ನ ಪ್ರಸಂಗ ಒದಗಿಬಂದಿದೆ. ತನಗೆ ನಿಜ ಜಗತ್ತಿನ ರಪುನ್​ಜೆಲ್ ಖ್ಯಾತಿಯನ್ನು ನೀಡಿದ ತನ್ನ ನೀಳ ಕೇಶವನ್ನು ನೀಲಾಂಶಿ ಪಟೇಲ್​, ಅಮೆರಿಕದ ಮ್ಯೂಸಿಯಂ ಒಂದರಲ್ಲಿ ಭದ್ರವಾಗಿರಿಸಲು ಬಯಸಿದ್ದೇ ಇದಕ್ಕೆ ಕಾರಣ.

    ಇದನ್ನೂ ಓದಿ: ಮುಟ್ಟೋರೇ ಇಲ್ಲ ಎಂದು ಕೊರಗ್ತಿರೋ ಸೋಂಕಿತರಿಗೆ ಹೀಗೆ ಬೆಚ್ಚಗಿನ ಸ್ವರ್ಶ ನೀಡಿದ್ತಾರೆ ಈ ನರ್ಸ್​!

    ಈ ಸಂದರ್ಭವನ್ನು ದಾಖಲುಗೊಳಿಸಲು ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್​ನವರು ಮಾಡಿರುವ ವಿಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನ ಉದ್ದನೇ ಕೂದಲನ್ನು ಪ್ರದರ್ಶಿಸಿ, ಅದಕ್ಕೆ ಬೈ ಬೈ ಹೇಳಿ, ಶಾರ್ಟ್​ ಆದ ಹೇರ್ ಕಟ್​ ಮಾಡಿಸಿಕೊಂಡಿದ್ದನ್ನು ಈ ವಿಡಿಯೋ ತೋರಿಸುತ್ತದೆ. “ನನ್ನ ಕೂದಲನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದರೆ ಅದು ಬೇರೆಯವರಿಗೆ ಸ್ಫೂರ್ತಿ ನೀಡಲಿ ಎಂಬ ಕಾರಣದಕ್ಕೆ ಮ್ಯೂಸಿಯಂಗೆ ನೀಡುತ್ತಿದ್ದೇನೆ” ಎಂದು ಪಟೇಲ್ ಹೇಳಿದ್ದಾಳೆ.

    ತನ್ನ ಕೂದಲಿನ ವಿಲೇವಾರಿಗೆ ಪಟೇಲ್​ಗೆ ಮೂರು ಆಯ್ಕೆಗಳಿದ್ದವಂತೆ – ಹರಾಜು ಹಾಕುವುದು, ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡುವುದು ಅಥವಾ ಮ್ಯೂಸಿಯಂಗೆ ನೀಡುವುದು. ಅವಳ ತಾಯಿ ಕಾಮಿನಿಬೇನ್​ ಅವರ ಸಲಹೆಯಂತೆ ನೀಲಾಂಶಿ, ಗಿನ್ನೀಸ್ ದಾಖಲೆ ಮಾಡಿದ್ದ ತನ್ನ ಕೂದಲು ಪ್ರೇರಣಾದಾಯಕವಾಗಿ ಮ್ಯೂಸಿಯಂನಲ್ಲಿರಲಿ ಎಂದು ತೀರ್ಮಾನಿಸಿದ್ದಾಳೆ. ಕತ್ತರಿಸಿದ ಕೂದಲನ್ನು ಅಮೆರಿಕದ ರಿಪ್ಲಿಸ್ ಬಿಲೀವ್ ಇಟ್​ ಆರ್ ನಾಟ್​ ಮ್ಯೂಸಿಯಂಗೆ ನೀಡಿದ್ದಾಳೆ. ಇದೇ ಸಂದರ್ಭದಲ್ಲಿ ಆಕೆಯ ತಾಯಿ ತಮ್ಮ ಉದ್ದ ಕೂದಲಿನಲ್ಲಿ ಸ್ವಲ್ಪವನ್ನು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಲಿದ್ದಾರೆ ಎಂದು ಪಟೇಲ್ ತಿಳಿಸಿದ್ದಾಳೆ. (ಏಜೆನ್ಸೀಸ್)

    ಇನ್ನು ರಾಜಧಾನಿಯಲ್ಲಿ ವೀಕೆಂಡ್​ ಕರ್ಫ್ಯೂ

    ‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts