More

    ಇನ್ನು ರಾಜಧಾನಿಯಲ್ಲಿ ವೀಕೆಂಡ್​ ಕರ್ಫ್ಯೂ

    ನವದೆಹಲಿ : ಕರೊನಾ ಸೋಂಕು ಉಲ್ಬಣವನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಆದಾಗ್ಯೂ ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿಆತಂಕ ಉಂಟಾಗುವುದಿಲ್ಲ ಎಂದಿದ್ದಾರೆ.

    ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರದಂದು ಜನಸಂಚಾರವನ್ನು ಮಿತಗೊಳಿಸಿ ಸೋಂಕನ್ನು ಹತೋಟಿಗೆ ತರಲು ಕರ್ಫ್ಯೂ ಆದೇಶ ಹೊರಡಿಸುತ್ತಿರುವುದಾಗಿ ತಿಳಿಸಿರುವ ಕೇಜ್ರಿವಾಲ್, ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗುವುದು ಮತ್ತು ಈಗಾಗಲೇ ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ವಿಶೇಷ ಪಾಸ್​ಗಳನ್ನು ನೀಡಲಾಗುವುದು ಎಂದಿದ್ದಾರೆ.

    ಇದನ್ನೂ ಓದಿ: ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಮಾಲ್, ಜಿಮ್​ ಮತ್ತು ಸ್ಪಾಗಳು ಮುಚ್ಚಬೇಕು. ರೆಸ್ಟೊರೆಂಟ್​ಗಳಲ್ಲಿ ಡೈನ್​ ಇನ್​ ಸೌಲಭ್ಯ ಇರುವುದಿಲ್ಲ, ಆದರೆ ಹೋಂ ಡೆಲಿವರಿಗೆ ಅವಕಾಶ ಇರುತ್ತದೆ. ಚಿತ್ರಮಂದಿರಗಳನ್ನೂ ಶೇ. 30 ರಷ್ಟು ಸೀಟುಗಳನ್ನು ಮಾತ್ರ ತುಂಬಿ ನಡೆಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ದೆಹಲಿ ನಗರದಲ್ಲಿ ಇತ್ತೀಚಿನ ಮಾಹಿತಿಯ ಪ್ರಕಾರ 5,000 ಬೆಡ್​ಗಳು ಲಭ್ಯವಿದೆ, ಜೊತೆಗೆ ಹೋಟೆಲ್ ಮತ್ತು ಬ್ಯಾಂಖೆಟ್ ಹಾಲ್​ಗಳನ್ನು ಕೋವಿಡ್ ಚಿಕಿತ್ಸೆಗಾಗಿ ಬಳಸುವ ಪ್ರಯತ್ನ ಸಾಗಿದೆ ಎಂದೂ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ. ನಿನ್ನೆಯ ದಿನ ದಾಖಲೆ ಏರಿಕೆಯಲ್ಲಿ ದೆಹಲಿಯಲ್ಲಿ 17,282 ಕರೊನಾ ಹೊಸ ಪ್ರಕರಣಗಳು ದಾಖಲಾಗಿದ್ದು, 104 ಸಾವುಗಳು ಸಂಭವಿಸಿವೆ. (ಏಜೆನ್ಸೀಸ್)

    ‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!

    ಸಿಬಿಎಸ್​ಇ : 12 ನೇ ತರಗತಿ ಪರೀಕ್ಷೆ ಮುಂದಕ್ಕೆ, 10ನೇ ತರಗತಿ ಪರೀಕ್ಷೆ ರದ್ದು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts