More

    ದಿವಾಳಿ ಅಂಚಿನಲ್ಲಿದ್ದ ಅನಿಲ್​ ಅಂಬಾನಿಯ ರಿಲಯನ್ಸ್ ಕ್ಯಾಪಿಟಲ್​ ಷೇರುಗಳಿಗೆ ಬರಲಿದೆ ಡಿಮ್ಯಾಂಡು: ಈಗಷ್ಟೇ ಲಾಭ ಮಾಡಿದ ಕಂಪನಿ ಖರೀದಿಸುತ್ತಿದೆ ಹಿಂದುಜಾ ಗ್ರೂಪ್​

    ಮುಂಬೈ: ದಿವಾಳಿ ಅಂಚಿಗೆ ತಲುಪಿದ್ದ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್​ ಡಿಸೆಂಬರ್ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆ. ಅನಿಲ್​ ಅಂಬಾನಿ ನೇತೃತ್ವದ ಈ ಕಂಪನಿಯು ಈ ತ್ರೈಮಾಸಿಕದಲ್ಲಿ ಕಂಪನಿ 39.37 ಕೋಟಿ ರೂ. ಲಾಭ ಗಳಿಸುವ ಮೂಲಕ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಈ ಷೇರು ಬೆಲೆ ಸಾಕಷ್ಟು ಏರಿಕೆ ಕಾಣುವಂತಹ ಬೆಳವಣಿಗೆಗಳು ನಡೆಯುತ್ತಿವೆ.

    ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ ನಷ್ಟದಲ್ಲಿತ್ತು. ಆಗ ಕಂಪನಿಯ ನಷ್ಟ 70 ಲಕ್ಷ ರೂ. ನಷ್ಟ ಅನುಭವಿಸಿತ್ತು.

    ಈ ಡಿಸೆಂಬರ್​ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟವು 15.97% ರಷ್ಟು ಹೆಚ್ಚಾಗಿದ್ದು, ಆದಾಯವು 6097.17 ಕೋಟಿ ರೂ.ಗೆ ತಲುಪಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಆದಾಯವು 5257.68 ಇತ್ತು.

    ಏತನ್ಮಧ್ಯೆ, ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್​ಗಾಗಿ ಹಿಂದುಜಾ ಗ್ರೂಪ್ ಹಣಕಾಸು ಹುಡುಕಾಟದಲ್ಲಿ ತೊಡಗಿದೆ. ಇದಕ್ಕಾಗಿ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಾದ 360 ಒನ್ ಪ್ರೈಮ್ (ಈ ಹಿಂದೆ IIFL ವೆಲ್ತ್ ಪ್ರೈಮ್) ಜತೆ ಮಾತುಕತೆ ನಡೆಸುತ್ತಿದೆ. ಈ ಹಣವನ್ನು ರಿಲಯನ್ಸ್ ಕ್ಯಾಪಿಟಲ್ ಸ್ವಾಧೀನಕ್ಕೆ ಬಳಸಲಾಗುವುದು ಎಂದು ಹಿಂದೂಜಾ ಹೇಳಿದೆ.

    ಹಿಂದೂಜಾ ಗುಂಪಿನ ಮಾಲೀಕತ್ವದ ಇಂಡಸ್ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ (IIHL) ಕಂಪನಿಯು ರಿಲಯನ್ಸ್ ಕ್ಯಾಪಿಟಲ್ ಸ್ವಾಧೀನಪಡಿಸಿಕೊಳ್ಳಲು ಹೆಚ್ಚಿನ ಬಿಡ್ ಮಾಡಿದೆ. ಇದಕ್ಕಾಗಿ ಒಟ್ಟು 8,000 ಕೋಟಿ ರೂ. ಮೌಲ್ಯದ ನಿಧಿಯ ಅಗತ್ಯವಿದೆ ಎನ್ನಲಾಗಿದೆ.

    ರಿಲಯನ್ಸ್ ಕ್ಯಾಪಿಟಲ್ ಷೇರು ವಹಿವಾಟು ಕೆಲವು ದಿನಗಳವರೆಗೆ ಸ್ಥಗಿತವಾಗಿರಲಿದೆ. ಇದರರ್ಥ ಸಾಮಾನ್ಯ ಹೂಡಿಕೆದಾರರು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ರಿಲಯನ್ಸ್ ಕ್ಯಾಪಿಟಲ್ ಷೇರು ಬೆಲೆ 11.78 ರೂಪಾಯಿ ಇದೆ. ಜನವರಿ 2006 ರಲ್ಲಿ ಈ ಷೇರಿನ ಬೆಲೆ 2800 ರೂಪಾಯಿ ಇತ್ತು.

    ರಿಲಯನ್ಸ್ ಕ್ಯಾಪಿಟಲ್​ನಲ್ಲಿ ಅನಿಲ್ ಅಂಬಾನಿ ಕುಟುಂಬವು 2,91,961 ಷೇರುಗಳನ್ನು ಹೊಂದಿದೆ. ಅನಿಲ್​ ಅಂಬಾನಿ ಪತ್ನಿ ಟೀನಾ ಅಂಬಾನಿ 2,63,474 ಷೇರುಗಳನ್ನು ಹೊಂದಿದ್ದಾರೆ. ಮಗ ಜೈ ಅನ್ಮೋಲ್ ಅಂಬಾನಿ 28,487 ಷೇರುಗಳನ್ನು ಹೊಂದಿದ್ದಾರೆ. ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಸಾರ್ವಜನಿಕ ಷೇರುಗಳು ಶೇಕಡಾ 98.49 ರಷ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts