More

    ಎಲ್ಲಿದ್ದೀಯಮ್ಮ… ಪರೀಕ್ಷೆ ಬರೆಯಲು ಬಾರಮ್ಮ… ಮದುವೆ ಆಮೇಲೆ ಮಾಡ್ಕೊಳೀವಂತೆ!

    ಕಳಸ: ‘‘ಎಲ್ಲಿದ್ದರೂ ಬಾರಮ್ಮ, ಶಿಕ್ಷಣ ಮುಖ್ಯ… ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಓದು ಮುಂದುವರಿಸು. ನೀನು 18 ವರ್ಷ ದಾಟುತ್ತಿದ್ದಂತೆ ನಿನ್ನಿಷ್ಟದ ಹುಡುಗನೊಂದಿಗೆ ಮದುವೆ ಮಾಡ್ತೇವೆ…’’ ಇದು ಮನೆ ಬಿಟ್ಟು ಹೋಗಿರುವ ಅಪ್ತಾಪ್ತ ವಯಸ್ಕಳ ಭವಿಷ್ಯದ ಬಗ್ಗೆ ತಂದೆ ಇಟ್ಟುಕೊಂಡಿರುವ ಕಾಳಜಿ ಮತ್ತು ನೋವು.

    ಕಳಸ ಸಮೀಪದ ಹಳ್ಳಿಯೊಂದರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಏಪ್ರಿಲ್ 6ರಂದು ಮನೆ ಬಿಟ್ಟು ಹೋಗಿದ್ದಾಳೆ. ಮಗಳು ಯಾರೊಂದಿಗೆ ಹೋಗಿದ್ದಾಳೆ ಎಂಬುದು ತಂದೆಗೆ ಗೊತ್ತಿದೆ. ಈಗ ಅವರು ಮಗಳು ಇಷ್ಟಪಟ್ಟವನೊಂದಿಗೆ ಮದುವೆ ಮಾಡಲು ಸಿದ್ಧರಿದ್ದಾರೆ. ಅವರ ಏಕೈಕ ಕಳಕಳಿ ಎಂದರೆ ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕು. ಓದು ಮುಂದುವರಿಸಬೇಕು. ಮದುವೆಯನ್ನು ಅವಳು ಇಷ್ಟಪಟ್ಟ ಹುಡುಗನೊಂದಿಗೆ ಮಾಡಲು ಸಿದ್ಧರಿದ್ದಾರೆ. ಆದರೆ 18 ವರ್ಷ ಆಗುವವರೆಗೆ ಆಕೆ ಕಾಯಬೇಕು.

    ಇದನ್ನೂ ಓದಿ ಫೇಸ್​ಬುಕ್ ಪಾಸ್​ವರ್ಡ್ ಕೊಟ್ಟು ಕೆಟ್ಟ ಪ್ರಿಯಕರ: ಬ್ಲ್ಯಾಕ್​ಮೇಲ್​ ಶುರುಮಾಡಿದ್ಳು ಪ್ರೇಯಸಿ

    ಮಗಳು ನಾಪತ್ತೆಯಾಗಿದ್ದಾಳೆ ಎಂದು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕರೊನಾ ಕಾರಣದಿಂದ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ ಮಾಧ್ಯಮಗಳ ಮೂಲಕ ಮಗಳಿಗೆ ವಿಷಯ ತಿಳಿದು ಮನೆಗೆ ಬರಲಿ, ಅವಳ ಇಷ್ಟದಂತೆ ಮದುವೆ ಮಾಡಲು ಸಿದ್ಧರಿದ್ದೇವೆ ಎಂದು ತಂದೆ ಹೇಳುತ್ತಿದ್ದಾರೆ. ತಮಿಳುನಾಡು ಮೂಲದ ಈ ಕುಟುಂಬ ಜೀವನೋಪಾಯಕ್ಕೆ ಇಲ್ಲಿಗೆ ಬಂದು ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದೆ. ಪತ್ನಿ ಮತ್ತು ಮಕ್ಕಳನ್ನು ಇಲ್ಲಿ ಬಿಟ್ಟು ಬೆಂಗಳೂರಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಈ ವ್ಯಕ್ತಿ ಲಾಕ್‌ಡೌನ್ ಸಮಯದಲ್ಲಿ ವಾಪಸ್ ಇಲ್ಲಿಗೆ ಬಂದಿದ್ದಾರೆ.

    ಹುಡುಗ ಯಾರು?: ಹಾವೇರಿ ಜಿಲ್ಲೆಯ ಯುವಕ ಇಲ್ಲಿರುವ ಅಕ್ಕನ ಮನೆಗೆ ಬಂದಿದ್ದು, ಇಲ್ಲಿಯೇ ಆಟೋ ಓಡಿಸಿಕೊಂಡು ಇದ್ದ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದ್ದು, ಪದೇಪದೆ ಸಂಪರ್ಕ ಮಾಡಲು ಅನುಕೂಲವಾಗಲಿ ಎಂದು ಮೊಬೈಲ್ ಕೂಡ ಕೊಡಿಸಿದ್ದ. ವಿಷಯ ತಿಳಿದ ನಂತರ ತಂದೆ ಮೊಬೈಲ್ ಕಿತ್ತುಕೊಂಡು ಎಚ್ಚರಿಕೆ ನೀಡಿದ್ದರು. ಮನೆಯಲ್ಲಿ ವಿಷಯ ತಿಳಿದ ನಂತರ ಇಬ್ಬರೂ ಮನೆ ಬಿಟ್ಟು ಹೋಗಿದ್ದಾರೆ. ಎಲ್ಲಿದ್ದಾರೆ ಎಂಬ ಸುಳಿವು ಇಲ್ಲ.

    ಇದನ್ನೂ ಓದಿ ಪ್ರಿಯಕರನ ಜತೆ ಪತ್ನಿ ಪರಾರಿ; ಬೇಸರದಲ್ಲಿ ಪಾನಮತ್ತ ಪತಿ ಮಾಡಿಕೊಂಡ ಅನಾಹುತ ನೋಡಿ…!

    ಏಪ್ರಿಲ್ 6ರಂದು ವಿದ್ಯಾರ್ಥಿನಿ ಮನೆ ಬಿಟ್ಟು ಹೋಗಿದ್ದು, ಅಂದೇ ಕುದರೆಮುಖ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಪತ್ತೆ ಕಾರ್ಯ ನಡೆದಿಲ್ಲ. ಆಟೋ ಡ್ರೈವರ್ ಕೊಡಿಸಿದ್ದ ಮೊಬೈಲ್ ಈಗ ಕುದುರೆಮುಖ ಪೊಲೀಸರ ವಶದಲ್ಲಿದೆ. ಪ್ರಯತ್ನ ಮಾಡಿದ್ದರೆ ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡುವುದು ಕಷ್ಟವೇನಲ್ಲ. ಇಲ್ಲಿರುವ ಆಟೋ ಚಾಲಕನ ಅಕ್ಕನ ಮನೆಯಲ್ಲಿ ವಿಚಾರಣೆ ಮಾಡಿದರೂ ಅವರು ಎಲ್ಲಿದ್ದಾರೆ ಎಂಬ ಸುಳಿವು ಸಿಗುತ್ತಿತ್ತು. ಆದರೆ ಪೊಲೀಸರು ಇದುವರೆಗೆ ಪತ್ತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಪ್ರಿಯಕರನ ಜತೆ ಮನೆ ಬಿಟ್ಟು ಬಂದಿದ್ದ ಯುವತಿ; ಪಾಲಕರಿಗೆ ಹೆದರಿ ಆತ್ಮಹತ್ಯೆಗೆ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts