ಕೋಚಿಂಗ್ ಕೇಂದ್ರಗಳಿಗೆ ಲಾಭ ಮಾಡಿಕೊಡಲು ಯತ್ನ

1 Min Read
ಕೋಚಿಂಗ್ ಕೇಂದ್ರಗಳಿಗೆ ಲಾಭ ಮಾಡಿಕೊಡಲು ಯತ್ನ

ರಾಯಚೂರು: ನೀಟ್ ಅನೇಕ ವಿದ್ಯಾರ್ಥಿಗಳ ಜೀವ ಬಲಿ ಪಡೆಯುತ್ತಿದೆ. 2024ರಲ್ಲಿ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರಗೆ ಅಖಿಲಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಸೋಮವಾರ ಮನವಿ ಸಲ್ಲಿಸಿತು.

ಕೋಚಿಂಗ್ ಸೆಂಟರ್ ಮಾಫಿಯಾದ ಅಣತಿಯಂತೆ ನಡೆಯುವ ಪರೀಕ್ಷೆಗಳ ಬಗ್ಗೆ ಸರ್ಕಾರ ಗಂಭೀರತೆ ಪ್ರದರ್ಶಿಸುತ್ತಿಲ್ಲ. ಪರೀಕ್ಷೆಯಲ್ಲಿ ಒಂದೇ ಕೇಂದ್ರದ ಅನೇಕರು ಮೊದಲ ಸ್ಥಾನ ಗಳಿಸಿರುವುದು ಅನುಮಾನಾಸ್ಪದವಾಗಿದೆ. ಗ್ರೇಸ್ ಅಂಕ ನೀಡುವುದು ಸೇರಿ ಅನೇಕ ರೀತಿಯಲ್ಲಿ ಪರೀಕ್ಷೆಯಲ್ಲಿ ಸಮಸ್ಯೆಗಳಿವೆ. ಕೋಚಿಂಗ್ ಮಾಫಿಯಾಗಳಿಗೆ ಲಾಭ ಮಾಡಿಕೊಡಲು ಸಂಬಂಧಿಸಿದ ಇಲಾಖೆಯವರು ಶಾಮೀಲಾಗಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಶಿಕ್ಷಣ ವ್ಯವಸ್ಥೆಯ ವಾಣಿಜ್ಯೀಕರಣ ಮತ್ತು ಪ್ರವೇಶ ಪರೀಕ್ಷೆಗಳ ಕೇಂದ್ರೀಕರಣದಂತಹ ವಿವಿಧ ಕಾರಣಗಳಿಂದಾಗಿ ಅನೇಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್‌ಗಳ ಕೊರತೆ ಮತ್ತು ಕೋಚಿಂಗ್‌ನ ಅಲಭ್ಯತೆಯಿಂದಾಗಿ ದಲಿತ ಮತ್ತು ಬಡ-ಮಧ್ಯಮ ವರ್ಗದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

See also  ಇಂತಹ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ: ಯತ್ನಾಳ್​ ವಾಗ್ದಾಳಿ
Share This Article