VIDEO| ವೆಡ್ಡಿಂಗ್​ ಫೋಟೋಶೂಟ್​ ವೇಳೆ ನವದಂಪತಿಗೆ ಶಾಕ್​ ನೀಡಿದ ಜಿರಾಫೆ: ವಿಡಿಯೋ ವೈರಲ್​!

blank

ನವದೆಹಲಿ: ನವದಂಪತಿಯು ತಮ್ಮ ವಿವಾಹ ಸಮಾರಂಭವನ್ನು ಮತ್ತಷ್ಟು ವರ್ಣಮಯವಾಗಿಸಲು ಫೋಟೋಶೂಟ್​ ಮೊರೆ ಹೋಗುವುದು ಸಹಜ. ಅದರಲ್ಲೂ ಕ್ರಿಯೆಟಿವ್ ಫೋಟೋ ಹಾಗೂ ವಿಡಿಯೋಗಾಗಿ ಫೋಟೋಗ್ರಾಫರ್​ ಇನ್ನಿಲ್ಲದ ಕಸರತ್ತು ಮಾಡುವುದು ಕೆಲವೊಮ್ಮೆ ವಿನೂತನ ಕ್ಷಣಕ್ಕೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.​

ಭಾರತೀಯ ಮೂಲದ ಅಮರಿಕನ್​ ದಂಪತಿಯ ವೆಡ್ಡಿಂಗ್​ ಫೋಟೋಶೂಟ್​ ವೇಳೆ ಅನಿರೀಕ್ಷಿತ ಅತಿಥಿಯೊಬ್ಬರ ಮಧ್ಯಪ್ರವೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ಅತಿಥಿ ಬೇರೆ ಯಾರು ಅಲ್ಲ ಜಿರಾಫೆ ಎಂಬುದೇ ಒಂದು ವಿಶೇಷ.

ಅಂದಹಾಗೆ ಈ ವಿಶೇಷ ಕ್ಷಣ ಸೆರೆಯಾಗಿದ್ದು ಕ್ಯಾಲಿಫೋರ್ನಿಯಾದ ಮಲಿಬು ಏರಿಯಾದಲ್ಲಿರುವ ಸ್ಯಾಡಲ್​ರಾಕ್​ ರಾಂಚ್​ ಎಂಬ ಫಿಲ್ಮಿಂಗ್​ ಮತ್ತು ಫೋಟೋಗ್ರಫಿ ಸ್ಥಳದಲ್ಲಿ.

ವಿಡಿಯೋದಲ್ಲಿ ಏನಿದೆ:? ನವದಂಪತಿ ಅಮೀಶ್​ ಮತ್ತು ಮೇಘನಾ ಜಿರಾಫೆ ಬೇಲಿಯ ಮುಂದೆ ನಿಂತು ಫೋಟೋಗಾಗಿ ತಯಾರಿ ನಡೆಸುವಾಗ ಹಿಂದೆ ಇದ್ದ ಜಿರಾಫೆ ಅಮೀಶ್​ ತಲೆಯ ಮೇಲಿದ್ದ ಪೇಟವನ್ನು ತಿನ್ನಲು ಯತ್ನಿಸುತ್ತದೆ. ಇನ್ನೇನು ಪೇಟವನ್ನು ಬಾಯಿಯಲ್ಲಿ ಕಚ್ಚಿಕೊಂಡು ಮೇಲೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ಮೇಘನಾ ಬಿಡಿಸಲು ಪ್ರಯತ್ನಿಸುತ್ತಾರೆ. ಸಾಧ್ಯವಾಗದಿದ್ದಾಗ ಫೋಟೋಗ್ರಾಫರ್ ಜಿಗಿದು​ ಪೇಟವನ್ನು ಕಿತ್ತುಕೊಳ್ಳುತ್ತಾರೆ. ಬಳಿಕ ಅನಿರೀಕ್ಷಿತ ಕ್ಷಣವನ್ನು ನೆನೆದು ನವದಂಪತಿ ನಗೆಗಡಲಲ್ಲಿ ತೇಲುತ್ತಾರೆ.

ಅಪೆರಿನಾ ಸ್ಟುಡಿಯೋಸ್​ ವಿಡಿಯೋವನ್ನು ಸೆರೆಹಿಡಿದಿದ್ದು, ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಈಗಾಗಲೇ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಕಮೆಂಟ್​ಗಳು ಕೂಡ ಹರಿದುಬರುತ್ತಿದೆ. (ಏಜೆನ್ಸೀಸ್​)

ಬಾಲಿವುಡ್​ ನಟಿಯ ಅತ್ತೆಯಿಂದ ಫ್ಲಿಪ್​ ದಿ ಸ್ವಿಚ್​ ಹಾಡಿಗೆ ಹೆಜ್ಜೆ: ವೈರಲ್​ ಆಯ್ತು ಈ ಜೋಡಿಯ ಡ್ಯಾನ್ಸ್​

VIDEO| ಮಂಗಗಳ ಹಾವಳಿಗೆ ಬ್ರೇಕ್​ ಹಾಕಲು ಕರಡಿ ವೇಷದಲ್ಲಿ ಅವುಗಳ ಮುಂದೆ ಹೋದ ಐಟಿಬಿಪಿ ಸಿಬ್ಬಂದಿ: ಮುಂದೇನಾಯಿತು?

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…