More

    ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ರೈಲ್ವೆ ಟಾನಿಕ್​, ಊರಿಗೆ ಹೊರಟ ಕಾರ್ಮಿಕರ ಮಕ್ಕಳಿಗೆ ಗಿಫ್ಟ್​!

    ಚನ್ನಪಟ್ಟಣ: ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುತ್ತಿರುವ ಕೂಲಿಕಾರ್ಮಿಕರ ಮಕ್ಕಳಿಗೆ ನೈರುತ್ಯ ರೈಲ್ವೆ ಅಧಿಕಾರಿಗಳು ಚನ್ನಪಟ್ಟಣದ ಬೊಂಬೆಗಳನ್ನು ನೀಡುವ ಮೂಲಕ ಕರೊನಾ ಲಾಕ್‍ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬೊಂಬೆ ಉದ್ಯಮಕ್ಕೆ ಹೊಸ ಚೈತನ್ಯ ತುಂಬುತ್ತಿದ್ದಾರೆ.

    ಮಕ್ಕಳ ಆಟಿಕೆಗಳ ತಯಾರಿಕೆಗೆ ಹೆಸರಾದ ಇಲ್ಲಿನ ಬೊಂಬೆ ಉದ್ಯಮಕ್ಕೆ ಎರಡು ತಿಂಗಳಿಂದ ಹೊಡೆತ ಬಿದ್ದಿತ್ತು. ನೂರಾರು ಬೊಂಬೆ ತಯಾರಿಕಾ ಘಟಕಗಳು ಸ್ಥಗಿತಗೊಂಡು ಸಾವಿರಾರು ಕಾರ್ಮಿಕರ ಜೀವನ ನಿರ್ವಹಣೆಗೆ ದುಸ್ಥರವಾಗಿತ್ತು. ಬೊಂಬೆ ಮಾರಾಟವಾಗದ ಹಿನ್ನೆಲೆಯಲ್ಲಿ ಮುಂದೇನು? ಎಂಬ ಆತಂಕ ಕರಕುಶಲ ಕರ್ಮಿಗಳಲ್ಲಿ ಮನೆ ಮಾಡಿತ್ತು.

    ಇದನ್ನೂ ಓದಿರಿ ರಾತ್ರೋರಾತ್ರಿ ಕಾರ್ಮಿಕರನ್ನು ಕರೆತಂದು ಅವ್ಯವಸ್ಥೆ ಕೂಪಕ್ಕೆ ದೂಡಿದ್ರು!

    ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ರೈಲ್ವೆ ಟಾನಿಕ್​, ಊರಿಗೆ ಹೊರಟ ಕಾರ್ಮಿಕರ ಮಕ್ಕಳಿಗೆ ಗಿಫ್ಟ್​!ಇದೀಗ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಓಗೊಟ್ಟು, ಶ್ರಮಿಕ್​ ರೈಲಿನಲ್ಲಿ ಸಂಚರಿಸುವ ಕೂಲಿಕಾರ್ಮಿಕರ ಮಕ್ಕಳ ಕೈಗೆ ಚನ್ನಪಟ್ಟಣದ ಬೊಂಬೆ ನೀಡುವ ಕಾರ್ಯಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬೊಂಬೆ ಉದ್ಯಮಕ್ಕೆ ಸೂಕ್ತ ಮಾರುಕಟ್ಟೆ ದೊರೆಯುವ ನಿರೀಕ್ಷೆ ಮೂಡಿದೆ. ಇದೇ ರೀತಿ ಇತರ ರೈಲ್ವೆ ವಿಭಾಗ ಹಾಗೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಇಲ್ಲಿನ ಆಟಿಕೆಗಳನ್ನು ಖರೀದಿಸಿ ಉಡುಗೊರೆ ನೀಡಲು ಮುಂದಾದಲ್ಲಿ ಬೊಂಬೆ ಉದ್ಯಮ ಚೇತರಿಕೆಗೆ ಟಾನಿಕ್ ನೀಡಿದಂತಾಗುತ್ತದೆ.

    ನಗು ಮರಳಿಸಿದ ಬೊಂಬೆ: ಲಾಕ್‍ಡೌನ್​ನಿಂದಾಗಿ ಕೆಲಸವಿಲ್ಲದೆ ಪರದಾಡುತ್ತಿದ್ದ ರಾಜ್ಯ ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರು ಇದೀಗ ಸ್ವಗ್ರಾಮಗಳಿಗೆ ಮರಳುತ್ತಿದ್ದಾರೆ. ಈ ಸಮಯದಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಕೈಗೆ ಬೊಂಬೆ ಇಡುತ್ತಿದ್ದಂತೆ ಅವರ ಮೊಗದಲ್ಲಿ ನಗು ಮೂಡುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿರಿ ಕೆಂಪೇಗೌಡರ ಸಮಾಧಿಗೆ ಕಾಯಕಲ್ಪ; ವಿಮಾನ ನಿಲ್ದಾಣದಲ್ಲಿ ಪ್ರತಿಮೆ

    ಭೌಗೋಳಿಕ ವಿಶಿಷ್ಟತೆ ಗುರುತು ಹೊಂದಿರುವ ಚನ್ನಪಟ್ಟಣದ ಬೊಂಬೆಗಳನ್ನು ವಿಶಿಷ್ಟವಾದ ಆಲೆಮರದಿಂದ ತಯಾರಿಸಲಾಗುತ್ತದೆ. ಬೊಂಬೆಗಳಿಗೆ ನೈಸರ್ಗಿಕ ವಿಧಾನದಿಂದ ತಯಾರಿಸಿದ ಬಣ್ಣ ಬಳಸಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾರಣದಿಂದಾಗಿ ಇಲ್ಲಿನ ಬೊಂಬೆಗಳಿಗೆ ವಿಶೇಷ ಆದ್ಯತೆ.

    ಡಿಸಿಎಂ ಮೆಚ್ಚುಗೆ: ನೈರುತ್ಯ ರೈಲ್ವೆ ಇಲಾಖೆಯ ಈ ಕಾರ್ಯಕ್ಕೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಸಿಎಂ ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರೈಲ್ವೆ ಇಲಾಖೆಯ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಡಿಸಿಎಂ, ‘ಚನ್ನಪಟ್ಟಣದ ಬೊಂಬೆಗಳು ಕರ್ನಾಟಕ ಹಾಗೂ ದೇಶದ ಹೆಮ್ಮೆ. ರೈಲ್ವೆ ಇಲಾಖೆಯ ಈ ಕ್ರಮ ಪ್ರಧಾನಮಂತ್ರಿಯ ಮನವಿಗೆ ಪೂರಕವಾಗಿದೆ’ ಎಂದಿದ್ದಾರೆ.

    ಇದನ್ನೂ ಓದಿರಿ ರಾಕ್ಷಸರಿಗೆ ಕರೊನಾ ಬರಲ್ಲ, ನನ್ನ ಬಳಿಯೂ ಸೋಂಕು ಸುಳಿಯಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts