ಅಭಿಮಾನಿಗಳಿಗೆ ಉಪ್ಪಿ ಉಡುಗೊರೆ; ಹೋಮ್ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭರವಸೆ

Upendra
Published on

ಬೆಂಗಳೂರು: ‘ಕರೊನಾ ಮುಂಚೆಯೇ ಈ ಚಿತ್ರ ಪ್ರಾರಂಭವಾಯಿತು. ಕಥೆ ಕೇಳಿದಾಗ ನನಗೆ ಇಷ್ಟವಾಯಿತು. ಇನ್ನೊಂದು ಕಡೆ ಭಯವೂ ಆಯಿತು. ಜನ ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ? ಎಂಬ ಭಯವಿತ್ತು. ಆದರೆ, ನಿರ್ಮಾಪಕ ಪೂರ್ಣಚಂದ್ರ ನಾಯ್ಡು, ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭರವಸೆ ನೀಡಿದರು. ಆಗ ಈ ಚಿತ್ರ ಒಪ್ಪಿಕೊಂಡೆ. ಜನ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ...’

ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಇದೇ ಏಪ್ರಿಲ್ 01ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಬರೀ ಚಿತ್ರತಂಡದವರಷ್ಟೇ ಅಲ್ಲ, ಪ್ರಿಯಾಂಕಾ ಉಪೇಂದ್ರ, ಸಚಿವ ಮುನಿರತ್ನ, ಗಣೇಶ್, ಪ್ರಜ್ವಲ್, ನಿರಂಜನ್, ಸಾಯಿ ಗೋಲ್ಡ್ ಪ್ಯಾಲೇಸ್​ನ ಶರವಣ ಅತಿಥಿಗಳಾಗಿ ಬಂದಿದ್ದರು. ಇನ್ನು, ಉಪೇಂದ್ರ ಜತೆಗೆ ವೇದಿಕಾ ಕುಮಾರ್, ತಾನ್ಯಾ ಹೋಪ್ ಮುಂತಾದವರು ಇದ್ದರು. ಅವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳ ಅಭಿಮಾನ ಕಂಡ ಉಪೇಂದ್ರ ಹೊಸ ಭರವಸೆಯನ್ನು ನೀಡಿದರು.

‘ಇದುವರೆಗೂ ನಾವು ಏನೆಲ್ಲಾ ಆಗಿದ್ದೇವೋ, ಅದೆಲ್ಲಕ್ಕೂ ಅಭಿಮಾನಿಗಳೇ ಕಾರಣ. ಹಾಗಾಗಿ, ನನ್ನ ಮುಂದಿನ ಚಿತ್ರದಲ್ಲಿ ಅವರಿಗಾಗಿಯೇ ಒಂದು ದೃಶ್ಯ ಬರೆಯುತ್ತೇನೆ. ಅಭಿಮಾನಿಗಳಿಂದ ತುಂಬಾ ಪಡೆದುಕೊಂಡಿದ್ದೇನೆ. ಅದನ್ನು ಮರಳಿಸುವ ಶಕ್ತಿ ನನಗಿಲ್ಲ. ನನ್ನದೊಂದು ಪಕ್ಷವನ್ನು ನಿಮ್ಮಮಡಲಿಗೆ ಹಾಕಿದ್ದೇನೆ. ನಿಮ್ಮಿಂದ ಮಾತ್ರ ಬದಲಾವಣೆ ಸಾಧ್ಯ’ ಎಂದರು. ಎಸ್.ಪೂರ್ಣಚಂದ್ರ ನಾಯ್ಡು, ಶ್ರೀಕಾಂತ್ ವೀರಮಾಬಿನೇನಿ ನಿರ್ವಿುಸಿರುವ ಚಿತ್ರವನ್ನು ಸುಜಯ್ ಶ್ರೀಹರಿ ನಿರ್ದೇಸಿದ್ದಾರೆ. ವೇದಿಕಾ ಕುಮಾರ್, ಉಪೇಂದ್ರಗೆ ಜೋಡಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net