More

    ಬೆಂಗಳೂರಿನಲ್ಲಿ ಕೋವಿಡ್​-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ…

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜುಲೈ ತಿಂಗಳಲ್ಲಿ ಕೋವಿಡ್​-19 ಸೋಂಕಿನಿಂದ ಸತ್ತವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ ಜು.1ರಿಂದ ಜು.28ರ ನಡುವೆ ಸೋಂಕಿನಿಂದ ಚಿಕಿತ್ಸೆಗಾಗಿ ದಾಖಲಾದ ಶೇ.65ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಮಾಹಿತಿಯ ವಿಶ್ಲೇಷಣೆ ಬಳಿಕ ಇದಕ್ಕೆ ಕಾರಣ ಏನೆಂಬುದು ಸ್ಪಷ್ಟವಾಗಿದೆ.

    ಅಂದರೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ತೀವ್ರ ಸಮಸ್ಯೆ ಉಂಟಾದ ನಂತರದಲ್ಲಿ ಅಂದರೆ ಕೊನೇಕ್ಷಣದಲ್ಲಿ ಜನರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂಬುದು ಈ ಅಂಕಿಅಂಶದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಕೆಲವರು ಆಸ್ಪತ್ರೆಗೆ ದಾಖಲಾಗಿ ಒಂದು ಗಂಟೆಯೊಳಗೆ ಮೃತಪಡುತ್ತಿದ್ದರೆ, ಇನ್ನು ಹಲವರು ಕೆಲವು ಗಂಟೆಗಳ ಬಳಿಕ ಇಹಲೋಕ ತ್ಯಜಿಸುತ್ತಿದ್ದಾರೆ.

    ಜು.1ರಿಂದ ಜು.28ರ ನಡುವೆ 860 ಕೋವಿಡ್​-19 ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ ಶೇ.55 ಅಥವಾ 479 ಮಂದಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗಾಗಿ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.10 ಅಂದರೆ 94 ಜನರು ಆಸ್ಪತ್ರೆಗೆ ಬರುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುವ ಹಂತದಲ್ಲಿ ಆಸ್ಪತ್ರೆಗೆ ದಾಖಲಾದವರಲ್ಲಿ 24 ಗಂಟೆಗಳಲ್ಲಿ ಮೃತಪಟ್ಟಿದ್ದೇ ಹೆಚ್ಚು ಎಂದು ಅಂಕಿಅಂಶಗಳು ತಿಳಿಸುತ್ತವೆ.
    ಈ ತಿಂಗಳಲ್ಲಿ ಮೃತಪಟ್ಟ ಸೋಂಕಿತರ ಪೈಕಿ ಹೆಚ್ಚಿನವರು ಕೊನೇ ಕ್ಷಣದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದವರಾಗಿದ್ದರು. ಹಾಗಾಗಿ ಅವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರೂ, ಅದಕ್ಕೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾಗಿ ಶ್ವಾಸಕೋಶ ತಜ್ಞ ಹಾಗೂ ಕೋವಿಡ್​-19ರಿಂದ ರಾಜ್ಯದಲ್ಲಿ ಸತ್ತವರ ಅಂಕಿಅಂಶ ವಿಶ್ಲೇಷಣೆ ಮಾಡುವ ವಿಭಾಗದಲ್ಲಿರುವ ಡಾ. ಕೆ.ಎಸ್​. ಸತೀಶ್​ ಹೇಳಿದ್ದಾರೆ.

    ಇದನ್ನೂ ಓದಿ: ಪರೀಕ್ಷೆಯೇ ಮಾಡದೆ ಕರೊನಾವೈರಾಣು ಸೋಂಕು ಪತ್ತೆ ಮಾಡಬಹುದು, ಹೇಗಂತೀರಾ?

    ರಾಜೀವ್​ ಗಾಂಧಿ ಎದೆರೋಗಗಳ ಸಂಸ್ಥೆಗೆ ದಾಖಲಾಗಿದ್ದ 50 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 21 ಜನರು ಆಸ್ಪತ್ರೆಗೆ ದಾಖಲಾಗಿ 12 ಗಂಟೆ ಕಳೆಯುವಷ್ಟರಲ್ಲೇ ಅಸುನೀಗಿದ್ದಾರೆ. ಇನ್ನು ಕೆಲವರು ಮೂರು ಗಂಟೆಗಳಲ್ಲೇ ಮೃತಪಟ್ಟಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ. ನಾಗರಾಜ ಮಾಹಿತಿ ನೀಡಿದ್ದಾರೆ. 5ರಿಂದ 6 ಜನರು ಆಸ್ಪತ್ರೆಗೆ ಬರುವ ಮಾರ್ಗಮಧ್ಯೆ ಅಸುನೀಗಿದ್ದರೆ, ವೆಂಟಿಲೇಟರ್​ನಲ್ಲಿ ಇರಿಸಿದರೂ ಮೂರು ದಿನಗಳ ಬಳಿಕ ಶೇ.70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

    ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಸಂಸ್ಥೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜು.15ರವರೆಗೆ ಒಟ್ಟು 91 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 39 ಜನರು ಆಸ್ಪತ್ರೆಗೆ ದಾಖಲಾಗಿ 24 ಗಂಟೆಗಳೊಳಗಾಗಿ ಸತ್ತಿದ್ದರೆ, ಸಾಕಷ್ಟು ಜನರು ಆಸ್ಪತ್ರೆಗೆ ದಾಖಲಾಗಿ 10 ಗಂಟೆ ಕಳೆಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕೋವಿಡ್​-19 ಕೋರ್​ ಕಮಿಟಿಯ ನೋಡಲ್​ ಅಧಿಕಾರಿ ಡಾ. ಸ್ಮಿತಾ ಸೆಗು ತಿಳಿಸಿದ್ದಾರೆ.
    ಸಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಪೈಕಿ ಬೆರಳೆಣಿಕೆಯಷ್ಟು ಜನರನ್ನು ಮಾತ್ರವೇ ಐಸಿಯುಗೆ ದಾಖಳಿಸುವ ಪ್ರಮೇಯ ಒದಗಿ ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಬೆಂಗಳೂರು ನಗರದಲ್ಲಿ ಮಾರ್ಚ್​ನಿಂದ ಆರಂಭವಾಗಿ ಜುಲೈ 28ರವರೆಗೆ ಒಟ್ಟು 957 ಜನರು ಮೃತಪಟ್ಟಿದ್ದಾರೆ. ಇವುಗಳ ಪೈಕಿ 860 ಜನರು ಜುಲೈವೊಂದರಲ್ಲೇ ಪ್ರಾಣಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಕೋವಿಡ್​-19ರಿಂದ ಸತ್ತವರ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ವಯಸ್ಸು ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳ ಹೊರತಾಗಿ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದೇ ಸಾವಿಗೆ ಕಾರಣ ಎಂಬುದು ಸ್ಪಷ್ಟವಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ.

    ಸುಶಾಂತ್ ನನ್ನು ಕೊಲೆಗೈಯಲಾಗಿದೆ ಎಂದ ಸುಬ್ರಮಣಿಯನ್ ಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts