More

    ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಕಾಂಗ್ರೆಸ್ ಮುಖಂಡ ಲೋಕೇಶ್ವರ

    ತಿಪಟೂರು: ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಎಡಿಜಿಪಿ ದರ್ಜೆಯ ಅಧಿಕಾರಿ ಜೈಲಿಗೆ ಹೋಗಿದ್ದಾರೆ. ಹೆಚ್ಚಿನ ತನಿಖೆ ಮಾಡಿದರೆ ಪ್ರಭಾವಿಗಳು ಜೈಲು ಪಾಲಾಗುತ್ತಾರೆ. ಪ್ರಜೆಗಳಿಗೆ ನಿರಾಸೆ ಮೂಡಿಸಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ಕರೆ ನೀಡಿದರು.


    ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕಾಂಗ್ರೆಸ್ ತಾಲೂಕು ಘಟಕದಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಸೋಮವಾರ ಮಾತನಾಡಿದರು.
    ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಹೆಚ್ಚುತ್ತಿರುವ ತೆರಿಗೆಯಿಂದ 30 ರೂ. ಮೂಲ ಬೆಲೆಯ ವಸ್ತುವಿಗೆ 70 ರೂ. ತೆರಿಗೆ ಪಾವತಿಸುವ ದುಸ್ಥಿತಿ ಬಂದಿದೆ ಎಂದರು. ಚುನಾವಣೆಗೆ ನಿಧಿ ಸಂಗ್ರಹಿಸಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರ, ಕೆಪಿಎಸ್‌ಸಿ ಮತ್ತು ಪಿಎಸ್‌ಐ ನೇಮಕಾತಿಯಲ್ಲೂ ಹಣ ಹೊಡೆಯಲು ಮುಂದಾಗಿದೆ. ಮೈಸೂರಿನಲ್ಲಿ 200 ಮತ್ತು ಕಲಬುರಗಿಯಲ್ಲಿ 150 ಮಂದಿಗೆ ತರಬೇತಿಗೆ ಅವಕಾಶವಿದ್ದರೂ, ಪಿಎಸ್‌ಐ ನೇಮಕಾತಿಯನ್ನು 545ಕ್ಕೆ ಹೆಚ್ಚಿಸಿದ್ದಾರೂ ಏಕೆ.? ತರಬೇತಿಗೆ ಅವಕಾಶವೇ ಇಲ್ಲದಿದ್ದಾಗ ಹೆಚ್ಚುವರಿ ನೇಮಕಾತಿ ಮೂಲಕ ಚುನಾವಣೆಗೆ ಹಣ ಸಂಗ್ರಹಿಸಲು ಮುಂದಾಗಿದ್ದಾರೆ. ಒಟ್ಟಾರೆ ಇದರಲ್ಲಿ 380 ಕೋ.ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

    ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಕಾಂಗ್ರೆಸ್ ಮುಖಂಡ ಲೋಕೇಶ್ವರ


    ಪ್ರಧಾನಿ ಮೋದಿ, ಸಿದ್ದರಾಮಯ್ಯವನ್ನು ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದ್ದರು. ಈಗ ಅವರದ್ದೇ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರು ಸ್ವತಃ ಪ್ರಧಾನಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೆಚ್ಚಿನ ಹಣವನ್ನು ರಕ್ಷಣಾ ಸಾಮಗ್ರಿ ಖರೀದಿಗೆ ಮೀಸಲಿಡುವ ಮೂಲಕ ಜನ ಲೆಕ್ಕಕೇಳದಂತೆ ಮಾಡಲಾಗಿದೆ ಎಂದರು. ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ನೆಮ್ಮದಿಯಾಗಿದ್ದ ರಾಜ್ಯವನ್ನು ಅಧೋಗತಿಗೆ ತರಲಾಗಿದೆ. ಸುಮ್ಮನಿರಲಾಗದೇ ಚೇಳು ಬಿಟ್ಟುಕೊಂಡರು ಎಂಬಂತೆ ಪಠ್ಯಪುಸ್ತಕ ಬದಲಾವಣೆಗೆ ಹೊರಟವರು, ಈಗ ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನೇ ಬದಲಿಸಲು ಹೊರಟಿದ್ದಾರೆ. ಸಬ್ಸಿಡಿ ನಿಲ್ಲಿಸಿದ್ದಾರೆ. ಮಕ್ಕಳು ಕುಡಿಯುವ ಹಾಲಿಗೂ ತೆರಿಗೆ, ಪೆನ್ನು, ಪೆನ್ಸಿಲ್‌ಗೂ ತೆರಿಗೆ, ತಿನ್ನುವ ಆಹಾರ ಪದಾರ್ಥಗಳಿಗೂ ತೆರಿಗೆ. ಇದೇನಾ ಜನಪರ ಸರ್ಕಾರ ಎಂದು ಪ್ರಶ್ನಿಸಿದರು.


    ತಿಪಟೂರು ತಾಲೂಕಿನಲ್ಲಿ ಆಡಳಿತ ಪಕ್ಷದೊಂದಿಗೆ ಕಾಂಗ್ರೆಸ್ ಸಹಕಾರ ಉತ್ತಮವಾಗಿದೆ ಎಂದು ಹೇಳಿದ್ದ ಗೃಹ ಸಚಿವವರು, ಶಾಸಕರ ಗೃಹಕಚೇರಿ ಎದುರು ನಡೆದ ಘಟನೆಯಲ್ಲಿ ಕಾಂಗ್ರೆಸ್ ದೌರ್ಜನ್ಯ/ದುರಾಡಳಿತ ಎಸಗಿದೆ, ಸಚಿವರ ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದರು. ಆದರೆ, ಅವರ ಮನೆಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು, ಚಡ್ಡಿ ಹರಿದಿದ್ದರೂ ಬಾಯಿ ಬಿಡುತ್ತಿಲ್ಲ. ಸಚಿವರ ಮನೆಗೆ ಯಾರೂ ಬೆಂಕಿ ಹಚ್ಚಲು ಹೋಗಿರಲಿಲ್ಲ. ಪೊಲೀಸ್ ಅಧಿಕಾರಿಗಳೆ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದರು. ಮಾದಿಹಳ್ಳಿ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯ ಬಳಿ ಶುರುವಾದ ಪಾದಯಾತ್ರೆಯಲ್ಲಿ ಅಧ್ಯಕ್ಷ ಮಡೇನೂರು ಕಾಂತರಾಜು, ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ಎಂ.ಎಸ್. ಯೋಗೀಶ್, ಮೇಘಾ ಭೂಷಣ್, ಆಸಿಫಾ ಭಾನು, ವಿನುತಾ, ತಿಲಕ್, ಭಾಗ್ಯಮ್ಮ ಮಂಜುನಾಥ್, ಕೆಪಿಸಿಸಿ ಸದಸ್ಯ ವಿ.ಯೋಗೀಶ್, ಮಾದಿಹಳ್ಳಿ ರೇಣು, ಮಾದೇವಸ್ವಾಮಿ, ಎನ್.ಎಂ. ಸುರೇಶ್, ಕಾಂತರಾಜು, ಲೋಕನಾಥ್ ಸಿಂಗ್, ಪ್ರಸನ್ನಕುಮಾರ್, ನಿಖಿಲ್ ರಾಜಣ್ಣ ಇದ್ದರು.

    ದೇಶಕ್ಕಾಗಿ ಸ್ವತಂತ್ರೃ ತಂದುಕೊಟ್ಟ ಪಕ್ಷ ಕಾಂಗ್ರೆಸ್ ಸೇವೆ ಜನರು ಎಂದಿಗೂ ಮರೆಯುವುದಿಲ್ಲ, ಸ್ವಾತಂತ್ರೊೃೀತ್ಸವ ಸಂಭ್ರಮದಲ್ಲಿ ತಾಲೂಕಿನಲ್ಲಿ ತ್ರಿವರ್ಣ ಧ್ವಜವಿಡಿದು ನಡೆಸಿದ ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದು ಸ್ವತಂತ್ರೃ ಚಳವಳಿಯ ನೆನಪನ್ನು ಮರುಕಳುಹಿಸಿತ್ತು.
    ಟೂಡಾ ಶಶಿಧರ್ ಕಾಂಗ್ರೆಸ್ ಮುಖಂಡ, ತಿಪಟೂರು


    ಹಿಂದೂ ವಕ್ತಾರ ಚಕ್ರವರ್ತಿ ಸೂಲಿಬೆಲೆ 21 ಅಂಶಗಳನ್ನು ಉಲ್ಲೇಖಿಸಿ, ರಾಜ್ಯ ಬಿಜೆಪಿ ಆಡಳಿತದ ವೈಲ್ಯಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಅಥವಾ ಸಿಪಿಐ ಆಡಳಿತ ಪಕ್ಷವನ್ನು ಟೀಕಿಸಿದರೆ ವಿರೋಧ ಪಕ್ಷ ಎನ್ನುತ್ತಾರೆ. ಆದರೆ ಆಡಳಿತ ಪಕ್ಷದ ಕಾರ್ಯಕರ್ತರೇ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

    ಲೋಕೇಶ್ವರ ಕಾಂಗ್ರೆಸ್ ಮುಖಂಡ

    ಸರ್ಕಾರದಿಂದ ಹಣ ಪಡೆದು ಪ್ರತ್ಯೇಕ ಕಚೇರಿ ತೆರೆಯುವ ಬದಲು ತಮ್ಮ ಮನೆ ಅಂಗಳದಲ್ಲೇ ಶಾಸಕರ ಕಚೇರಿ ತೆರೆದಿರುವುದು ಅವರ ಅನನುಭವ ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈಗಿನ ಸರ್ಕಾರ ಮಾಡಿರುವ ತಿದ್ದುಪಡಿಗಳನ್ನು ವಾಪಸ್ ಪಡೆಯುತ್ತೇವೆ.
    ಕೆ.ಷಡಕ್ಷರಿ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts