More

    ಮಹಿಳಾ ಟಿ20 ಪಂದ್ಯದಲ್ಲಿ 20 ಓವರ್ ಪೂರ್ತಿ ಆಡಿ 32 ರನ್ ಗಳಿಸಿದ ಜರ್ಮನಿ!

    ಕಾರ್ಟಗೆನಾ (ಸ್ಪೇನ್): ಟಿ20 ಕ್ರಿಕೆಟ್​ ಎಂದರೆ ರನ್​ಮಳೆಯ ಪಂದ್ಯ ಎಂಬುದು ಸಾಮಾನ್ಯ ಲೆಕ್ಕಾಚಾರ. ಆದರೆ ಟಿ20 ಪಂದ್ಯದಲ್ಲೂ ಟೆಸ್ಟ್​ ಕ್ರಿಕೆಟ್​ ಮಾದರಿಯ ಜಿಗುಟಿನ ಬ್ಯಾಟಿಂಗ್​ ನಿರ್ವಹಣೆ ಕ್ರಿಕೆಟ್​ ಶಿಶು ಜರ್ಮನಿ ತಂಡದಿಂದ ಕಂಡುಬಂದಿದೆ. ಕನ್ನಡತಿ ಅನುರಾಧ ದೊಡ್ಡಬಳ್ಳಾಪುರ ಸಾರಥ್ಯದ ಜರ್ಮನಿ ಕ್ರಿಕೆಟ್ ತಂಡ ಮಹಿಳೆಯರ ಟಿ20 ವಿಶ್ವಕಪ್‌ನ ಯುರೋಪ್ ಖಂಡದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 20 ಓವರ್ ಸಂಪೂರ್ಣವಾಗಿ ಆಡಿದರೂ 32 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಐರ್ಲೆಂಡ್ 164 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿತು.

    ಗ್ಯಾಬಿ ಲೆವಿಸ್ (105*) ಶತಕದ ಬಲದಿಂದ ಐರ್ಲೆಂಡ್ 2 ವಿಕೆಟ್‌ಗೆ 196 ರನ್ ಪೇರಿಸಿತು. ಪ್ರತಿಯಾಗಿ ಜರ್ಮನಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 32 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ತಂಡವೊಂದು 20 ಓವರ್ ಪೂರ್ತಿ ಆಡಿದಾಗ ಗಳಿಸಿದ 3ನೇ ಕನಿಷ್ಠ ಮೊತ್ತವಾಗಿದೆ. 2019ರಲ್ಲಿ ಮಾಲಿ 30 ಮತ್ತು 2018ರಲ್ಲಿ ಲೆಸೊಥೊ 31 ರನ್ ಗಳಿಸಿತ್ತು.

    ಇದನ್ನೂ ಓದಿ: ಹ್ಯಾಟ್ರಿಕ್ ಶತಕ ಸಿಡಿಸಿದ ರೂಟ್, ಲೀಡ್ಸ್‌ನಲ್ಲಿ ಭಾರತಕ್ಕೆ ಭಾರಿ ಹಿನ್ನಡೆ

    ಆರಂಭಿಕ ಆಟಗಾರ್ತಿ ಕ್ರಿಸ್ಟಿನಾ ಗವ್ 58 ಎಸೆತ ಎದುರಿಸಿ 14 ರನ್ ಗಳಿಸಿದರೆ, ನಾಯಕಿ ಅರುಂಧತಿ 29 ಎಸೆತಗಳಲ್ಲಿ 5 ರನ್ ಗಳಿಸಿದರು. ಜರ್ಮನಿ ತಂಡದಲ್ಲಿರುವ ಕರ್ನಾಟಕ ಮೂಲದ ಮತ್ತೋರ್ವ ಆಟಗಾರ್ತಿ ಶರಣ್ಯ ಸದರಂಗನಿ ಬೌಲಿಂಗ್‌ನಲ್ಲಿ 1 ವಿಕೆಟ್ ಕಬಳಿಸಿದ್ದರು.

    VIDEO | ಸ್ಕೋರ್ ಕೇಳಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ನೀಡಿದ ಉತ್ತರ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts