More

    ಆರ್​ಸಿಬಿ ತಂಡದ ಜತೆ ಜರ್ಮನಿಯ ಚಾನ್ಸೆಲರ್​ ಚಿಟ್​-ಚಾಟ್​…

    ಬೆಂಗಳೂರು: ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂಗೆ ಭೇಟಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪುರುಷ ಮತ್ತು ಮಹಿಳಾ ಆಟಗಾರರೊಂದಿಗೆ ಸಂವಾದ ನಡೆಸಿದರು.

    ಸ್ಕೋಲ್ಜ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಪುರುಷ ಮತ್ತು ಮಹಿಳಾ ತಂಡದ ಸದಸ್ಯರೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತನಾಡಿದರು.

    ಕ್ರೀಡೆಗೆ ಸಂಬಂಧಿಸಿದಂತೆ ಕ್ರಿಕೆಟ್ ಭಾರತದ ಮೊದಲ ಉತ್ಸಾಹ ಎಂದು ಚಾನ್ಸೆಲರ್ ಅರ್ಥಮಾಡಿಕೊಂಡಿದ್ದಾರೆ. ಜರ್ಮನಿಯಲ್ಲಿ, ಕ್ರಿಕೆಟ್ ಅಷ್ಟು ಜನಪ್ರಿಯವಾಗಿಲ್ಲ. ಜರ್ಮನಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಭಾರತೀಯರು ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಆದ್ದರಿಂದ, ಸ್ಕೋಲ್ಜ್ ಅವರು ಕ್ರೀಡೆಯ ಬಗ್ಗೆ ಮತ್ತು ಭಾರತಕ್ಕೆ ಕ್ರಿಕೆಟ್ ಬಗ್ಗೆ ಯಾಕಿಷ್ಟು ಪ್ರೀತಿ ಎಂಬುದರ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು ಎಂದು ರಾಯಭಾರ ಅಧಿಕಾರಿ ಹೇಳಿದ್ದಾರೆ.

    “ವಿಶೇಷವಾಗಿ RCB ಮಹಿಳಾ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಋತುವಿನಲ್ಲಿ ಪ್ರಾರಂಭಿಸಿದಾಗ RCB ಪುರುಷರ ಮತ್ತು ಮಹಿಳಾ ತಂಡಗಳ ಮಹತ್ವ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಬಯಸಿದ್ದರು” ಅಧಿಕಾರಿಯು ಮತ್ತಷ್ಟು ಹೇಳಿದರು.

    ಇದಕ್ಕೂ ಮುನ್ನ ಜರ್ಮನ್ ಚಾನ್ಸಲರ್ ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್, ಜರ್ಮನ್ ಕಾನ್ಸುಲೇಟ್ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಬರಮಾಡಿಕೊಂಡರು.

    ನಂತರ, ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ: “ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಜರ್ಮನಿಯ ಚಾನ್ಸೆಲರ್, @OlafScholz ಅವರನ್ನು ಸ್ವಾಗತಿಸಿದರು. ನಮ್ಮ ಎರಡು ದೇಶಗಳ ನಡುವೆ ಅಂತರ-ಸರ್ಕಾರಿ ಸಮಾಲೋಚನೆ (ಐಜಿಸಿ) 2011ರಲ್ಲಿ ಸ್ಥಾಪನೆಯಾಗಿತ್ತು. ಅದಾದ ಮೇಲೆ ಜರ್ಮನಿಯ ಚಾನ್ಸೆಲರ್‌ ಭಾರತಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿದ್ದಾರೆ. ಸ್ಕೋಲ್ಜ್ ಭಾರತದಲ್ಲಿ ಎರಡು ದಿನಗಳ ಪ್ರವಾಸ ಮಾಡಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts