More

    ಪಿಯುಸಿ ಪರೀಕ್ಷೆಗೆ ಹಾಜರಾದ 51ರ ಬಿಜೆಪಿ ಮಾಜಿ ಶಾಸಕ!

    ಉತ್ತರಪ್ರದೇಶ: 12ನೇ ತರಗತಿಯ ಉತ್ತರ ಪ್ರದೇಶದ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಬರೇಲಿ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ದೃಶ್ಯವೊಂದು ಕಂಡುಬಂದಿದೆ. ಪರೀಕ್ಷೆಗೆ ಹಾಜರಾಗುವ ಹೆಚ್ಚಿನ ವಿದ್ಯಾರ್ಥಿಗಳು ಹರೆಯದ ವಯಸ್ಸಿನಲ್ಲಿರುತ್ತಾರೆ. ಆದರೆ ಇಲ್ಲಿ ಮಾತ್ರ 51 ವರ್ಷದ ಬಿಜೆಪಿ ಶಾಸಕರು ರೈಟಿಂಗ್​ ಪ್ಯಾಡ್, ಕೈಯಲ್ಲಿ ಲ್ಯಾಮಿನೇಟ್ ಮಾಡಿರುವ ಹಾಲ್​ ಟಿಕೆಟ್​ ಮತ್ತು ನೀರಿನ ಬಾಟಲಿ ಹಿಡಿದುಕಂಡು ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಾರೆ.

    ಇದನ್ನೂ ಓದಿ: ಪರೀಕ್ಷೆ ಬರೆಯಲು ಹೆಚ್ಚಿನ ಸಮಯ ಬೇಡಿದ ಮಕ್ಕಳಿಂದ ಕಲ್ಲು ತೂರಾಟ!

    ಫೆ.16 ರಂದು ಪರೀಕ್ಷೆಗೆ ಹಾಜರಾಗಿ, ಕೇಂದ್ರದ ಹೊರಗೆ ಕಾಯುತ್ತಿದ್ದ ವ್ಯಕ್ತಿ ಮಾಜಿ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರ್ತಾಲ. “ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಮೊದಲು ನನ್ನನ್ನು ನೋಡಿ ಆಶ್ಚರ್ಯಪಟ್ಟರು. ಆದರೆ ಅವರ ಜೊತೆಗೆ ತಮ್ಮ ಪ್ರದೇಶದ ರಾಜಕಾರಣಿಯೊಬ್ಬರು ಪರೀಕ್ಷೆಗೆ ಹಾಜರಾಗುತ್ತಿರುವುದನ್ನು ನೋಡಿ ಅವರು ಸಂತೋಷಪಟ್ಟಿದ್ದರು”ಎಂದು ರಾಜಕಾರಣಿ ಹೇಳಿದರು.

    2017ರ ವಿಧಾನಸಭಾ ಚುನಾವಣೆಯಲ್ಲಿ ಮಿಶ್ರಾ ಬಿಜೆಪಿಯಿಂದ ಟಿಕೆಟ್ ಪಡೆದು ಬರೇಲಿಯ ಬಿತ್ರಿ ಚೈನ್‌ಪುರ್ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.

    ರಾಜಕಾರಣಿಯಾಗಿ ಬಿಡುವಿಲ್ಲದ ದಿನಗಳ ಹೊರತಾಗಿಯೂ, ಪಪ್ಪು ಮಿಶ್ರಾ ತಮ್ಮ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದರು. “ನಾನು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ಪ್ರಾರಂಭಿಸಬೇಕು ಎಂದುಕೊಂಡೆ” ಎಂದಿರುವ ಮಿಶ್ರಾ, ತಮ್ಮ ಅಧ್ಯಯನವನ್ನು ಮುಂದುವರಿಸುವುದು ತನ್ನ ಕಿರಿಯ ಘಟಕಗಳೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಿದ್ದಾರೆ. ಆದರೆ ಅವರೇ ಹೇಳಿಕೊಂಡಿರುವಂತೆ ಇದರ ಹಿಂದೆಇನ್ನೂ ದೊಡ್ಡ ಉದ್ದೇಶವಿದೆ.

    “ಒಬ್ಬ ಶಾಸಕನಾಗಿ ಹೆಚ್ಚಿನ ಸಂಖ್ಯೆಯ ಜನರು, ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾಗಿರುವವರು ಉತ್ತಮ ವಕೀಲರನ್ನು ಪಡೆಯಲು ಸಾಧ್ಯವಾಗದ ಕಾರಣ ಅವರಿಗೆ ನ್ಯಾಯ ಸಿಗದೇ ಇರುವುದನ್ನು ನೋಡಿದ್ದೇನೆ. ಅಂತಹ ಜನರಿಗೆ ಸಹಾಯ ಮಾಡಲು ನಾನು ಕಾನೂನು ಅಧ್ಯಯನ ಮಾಡಲು ಬಯಸುತ್ತೇನೆ. ಹಾಗೆ ಮಾಡಲು, 12 ನೇ ತರಗತಿ ಪಾಸ್​ ಆಗುವುದು ಅಗತ್ಯವಾಗಿತ್ತು”ಎಂದು ಮಿಶ್ರಾ ಹೇಳಿದರು.

    ಇದನ್ನೂ ಓದಿ: ನಾಳೆ ಬೆಳಗಾವಿಗೆ ಪ್ರಧಾನಿ ಮೋದಿ; ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಂದೂಡಿಕೆ

    “ನಾನು ಬೋರ್ಡ್ ಪರೀಕ್ಷೆಗೆ ಹಿಂದಿ, ಆರ್ಟ್ಸ್​, ಸಿವಿಲ್​ ಹಾಗೂ ಸಮಾಜಶಾಸ್ತ್ರವನ್ನು ಆರಿಸಿಕೊಂಡಿದ್ದೇನೆ. ಈ ವಿಷಯಗಳು ನನಗೆ ಕಾನೂನು ಅಧ್ಯಯನಕ್ಕೂ ಸಹಾಯ ಮಾಡುತ್ತವೆ, ”ಎಂದು ಅವರು ಹೇಳಿದರು. ವಿಜ್ಞಾನದಲ್ಲಿ ಆಸಕ್ತಿಯುಳ್ಳ ಅವರು, ಕಲಾ ವಿಷಯಗಳ ಬಗ್ಗೆ ಅವರಿಗೆ ಒಂದೆ ತೊಂದರೆ. ಅವರ ಪ್ರಕಾರ ಆರ್ಟ್ಸ್​ ತೆಗೆದುಕೊಂಡವರು ಬಹಳಷ್ಟು ಬರೆಯಬೇಕು. “ನಾನು ರಾತ್ರಿ 11 ಗಂಟೆಯಿಂದ ಮತ್ತು 1 ಗಂಟೆಯವರೆಗೆ ಓದುತ್ತೇನೆ. ಹಗಲಿನಲ್ಲಿಯೂ ಸಹ ನಾನು ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸ್ವಲ್ಪ ಸಮಯವನ್ನು ಮಾಡಿಕೊಂಡಿದ್ದೇನೆ”ಎಂದು ಮೂರು ಮಕ್ಕಳ ತಂದೆಯಾಗಿರುವ ಮಿಶ್ರಾ ಹೇಳಿದರು. ಅವರ ಎಲ್ಲಾ ಮಕ್ಕಳು ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts