More

    ಡೆಡ್‌ಲೈನ್ ಮುಗಿಯಿತು…ಆದೇಶಕ್ಕೆ ಕಾಯುತ್ತಿದೆ ಇಸ್ರೇಲ್​ ಸೇನೆ!

    ನವದೆಹಲಿ ​: ಉತ್ತರ ಗಾಜಾದಲ್ಲಿರುವ 1.1 ಮಿಲಿಯನ್ ಜನರಿಗೆ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ನೀಡಿದ್ದ ಗಡುವು ಮುಗಿಯುತ್ತಿದ್ದಂತೆ ಸಾವಿರಾರು ಜನರು ಭಾನುವಾರ ಗೊತ್ತುಪಡಿಸಿದ ಸುರಕ್ಷಿತ ಮಾರ್ಗಗಳನ್ನು ಬಳಸಿ ಕುಟುಂಬ ಸಮೇತ ತೆರಳುತ್ತಿದ್ದಾರೆ.
    ಉತ್ತರ ಗಾಜಾ ಬಿಡಲು ಇಸ್ರೇಲ್​ ನೀಡಿದ್ದ ಮೂರು ಗಂಟೆಗಳ ಗಡುವು ಮುಗಿದಿದೆ, ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಆಕ್ರಮಣಕ್ಕೆ ಆಡಳಿತ ಮುಖ್ಯಸ್ಥರ ಗ್ರೀನ್​ ಸಿಗ್ನಲ್​ಗಾಗಿ ಕಾಯುತ್ತಿವೆ.

    ಇದನ್ನೂ ಓದಿ: ಗಾಜಾದಲ್ಲಿ ಇಸ್ರೇಲ್ ಆತ್ಮ ರಕ್ಷಣೆ ವ್ಯಾಪ್ತಿ ಮೀರಿ ವರ್ತಿಸುತ್ತಿದೆ: ಚೀನಾ

    ಇಸ್ರೇಲ್​ ಮಿಲಿಟರಿ ವಕ್ತಾರರಾದ ಲೆಫ್ಟಿನೆಂಟ್ ರಿಚರ್ಡ್ ಹೆಕ್ಟ್ ಮತ್ತು ಡೇನಿಯಲ್ ಹಗರಿ ಅವರು ಪ್ರತ್ಯೇಕವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಕ್ಟೋಬರ್ 7 ರ ದಾಳಿಯಲ್ಲಿ ಹಮಾಸ್​ ಉಗ್ರರು ಕನಿಷ್ಠ 1,300 ಜನರನ್ನು ಬಲಿತೆಗೆದುಕೊಂಡರು. ಹಮಾಸ್ ನಿರ್ಮೂಲನೆಗೆ ನಾವು ಯಾವುದೇ ಕ್ರಮಕ್ಕೂ ಹಿಂಜರಿಯುವುದಿಲ್ಲ. ಆದರೆ ಮೇಲಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದರು.

    ಇದರ ನಡುವೆ ಇಸ್ರೇಲ್ ಮೇಲೆ ವಿಶ್ವಸಂಸ್ಥೆ ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳಿಂದ ದಾಳಿ ನಡೆಸದಂತೆ ಒತ್ತಡ ಬರುತ್ತಿದೆ. ನಾಗರಿಕರು ಸ್ಥಳಾಂತರಗೊಳ್ಳುವವರೆಗೂ ಯಾವುದೇ ರೀತಿಯ ಆಕ್ರಮಣ ಮಾಡುವುದನ್ನು ತಡೆಹಿಡಿಯಬೇಕು. ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಡ ಹೆಚ್ಚಾಗುತ್ತಿದ್ದು, ಇದರಿಂದಾಗಿಯೇ ಗಾಜಾ ಮೇಲೆ ಸೇನೆ ದಾಳಿಗೆ ಹಿಂದೆ ಮುಂದೆ ನೋಡಲಾಗುತ್ತಿದೆ ಎನ್ನಲಾಗಿದೆ.
    ಜನಸಂಖ್ಯಾ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಗಾಜಾವನ್ನು ಸ್ಥಳಾಂತರಿಸುವುದು ಅಸಾಧ್ಯವೆಂದು ಯುಎನ್ ಪದೇ ಪದೇ ಹೇಳಿದೆ. ಗಂಭೀರವಾಗಿ ಗಾಯಗೊಂಡ ಕೆಲವು ರೋಗಿಗಳನ್ನು ಸ್ಥಳಾಂತರಿಸಿದರೆ ಸಾವು ನಿಶ್ಚಿತ ಎಂಬ ಅಭಿಪ್ರಾಯದ ಮಧ್ಯಯೇ 150 ಒತ್ತೆಯಾಳುಗಳ ಸುರಕ್ಷತೆ ಬಗ್ಗೆ ಇಸ್ರೇಲ್​ ಗೆ ಕಳವಳ ಹುಟ್ಟುಹಾಕಿದೆ.

    ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು US ಸೆನೆಟರ್‌ಗಳೊಂದಿಗೆ ಗಾಜಾ ನಾಗರಿಕರ ಸ್ಥಳಾಂತರಿಸುವಿಕೆ ಮತ್ತು “ಮಾನವೀಯ ಸಮಸ್ಯೆಗಳ” ಕುರಿತು ಚರ್ಚಿಸಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

    ಅಕ್ಟೋಬರ್ 7 ರ ದಾಳಿಯ ನಂತರ — ಇದರಲ್ಲಿ 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು – ಗಾಜಾದಲ್ಲಿ ಸಾವಿರಾರು ವೈಮಾನಿಕ ದಾಳಿಗಳನ್ನು ನಡೆಸಲಾಯಿತು, ಅದು 2,300 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು.(ಏಜನ್ಸೀಸ್​)

    ‘ದೇಶದ ಕುರಿತ ಮೈಂಡ್​ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts