More

    ನಾಯಕನಾಗಿ ಕೊಹ್ಲಿ ಏನು ಸಾಧಿಸಿಲ್ಲ ಎಂದ ಗೌತಮ್ ಗಂಭೀರ್

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಆಟಗಾರ ಗೌತಮ್ ಗಂಭೀರ್ ನಡುವಿನ ಸಂಬಂಧ ಅಷ್ಟಕಷ್ಟೇ. ಐಪಿಎಲ್ ಪಂದ್ಯವೊಂದರಲ್ಲಿ ಮೈದಾನದಲ್ಲೇ ಇಬ್ಬರು ಪರಸ್ಪರ ಬೈದಾಡಿಕೊಂಡಿದ್ದು ಇದೆ. ಕೊಹ್ಲಿ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡರೂ ಅವರ ನಾಯಕತ್ವಕ್ಕೆ ಗಂಭೀರ್ ಕೊಡುವ ಮಾರ್ಕ್ಸ್ ಮಾತ್ರ ಶೂನ್ಯವೇ. ಕೊಹ್ಲಿ ಇದುವರೆಗೂ ಏನು ಸಾಧಿಸಿಲ್ಲ. ಕೊಹ್ಲಿಗೆ ಇನ್ನು 31 ವರ್ಷ, ಸಾಧಿಸಬೇಕಾಗಿರುವುದು ಸಾಕಷ್ಟಿದೆ ಎಂದು ಗಂಭೀರ್ ಪುನರುಚ್ಚರಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಸಾವಿಗೆ ವಿದೇಶಿ ಕ್ರಿಕೆಟಿಗರಿಂದಲೂ ಕಂಬನಿ

    ಮೂರು ಮಾದರಿ ಕ್ರಿಕೆಟ್‌ನಲ್ಲಿ ರನ್‌ಹೊಳೆಯನ್ನೇ ಹರಿಸುತ್ತಿರುವ ಕೊಹ್ಲಿ ನಾಯಕತ್ವ ವಹಿಸಿಕೊಂಡು ಸುಮಾರು 5 ವರ್ಷಗಳಾದರೂ ಇದುವರೆಗೂ ಒಂದೇ ಒಂದು ಐಸಿಸಿ ಹಾಗೂ ಐಪಿಎಲ್ ಟ್ರೋಫಿ ಜಯಿಸಿಲ್ಲ. ವೈಯಕ್ತಿಕ ನಿರ್ವಹಣೆಯೇ ಅವರ ಆಸ್ತಿ, ಆದರೆ ನಾಯಕನಾಗಿ ಅವರು ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ಗಂಭೀರ್ ಪದೆ ಪದೆ ಹೇಳುವುದುಂಟು. 90ರ ದಶಕದಲ್ಲಿ ಬ್ರಿಯಾನ್ ಲಾರಾ, ಬಳಿಕ ಜಾಕ್ಸ್ ಕಾಲಿಸ್ ಇದೀಗ ಕೊಹ್ಲಿ ಅವರ ಸಾಲಿಗೆ ಸೇರ್ಪಡೆಯಾಗುತ್ತಾರೆ ಎನ್ನುತ್ತಾರೆ ಗಂಭೀರ್. ಲಾರಾ, ಕಾಲಿಸ್ ರನ್ ಹೊಳೆಯನ್ನೇ ಹರಿಸಿದರೂ ಪ್ರಮುಖ ಟ್ರೋಫಿ ಜಯಿಸಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ರನ್‌ಗಳಿಸಿರಬಹುದು, ಆದರೆ ಅವರು ಮಾಡಬೇಕಿರುವ ಸಾಧನೆ ಸಾಕಷ್ಟಿದೆ ಎಂದು ಹಾಲಿ ಬಿಜೆಪಿ ಸಂಸದರೂ ಆಗಿರುವ ಗೌತಮ್ ಗಂಭೀರ್ ಹೇಳಿದ್ದಾರೆ. ಒಬ್ಬ ಬಲಿಷ್ಠ ಕ್ರಿಕೆಟಿಗನಾಗಿ ವೈಯಕ್ತಿಕವಾಗಿ ರನ್ ಪೇರಿಸುತ್ತಿದ್ದರೂ ತಂಡಕ್ಕಾಗಿ ಅವರಿಂದ ಇದುವರೆಗೂ ಯಾವುದೇ ಕೊಡುಗೆ ಬಂದಿಲ್ಲ. ಕೊಹ್ಲಿ ಇತರ ಆಟಗಾರನ್ನು ಅರ್ಥೈಸಿಕೊಳ್ಳಬೇಕಿದೆ. ಬಳಿಕವಷ್ಟೇ ಆಟಗಾರರಿಂದ ನಿರ್ವಹಣೆ ತೆಗೆಯಲು ಸಾಧ್ಯ ಎಂದು ಗಂಭೀರ್ ಹೇಳಿದ್ದಾರೆ.

    ಇದನ್ನೂ ಓದಿ: ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!

    ಕೊಹ್ಲಿ ನಾಯಕತ್ವದಡಿಯಲ್ಲಿ ಭಾರತ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಾಗೂ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ‌ನಲ್ಲಿ ಭಾರತ ಮುಗ್ಗರಿಸಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ ಸ್ಥಿರ ನಿರ್ವಹಣೆ ತೋರುತ್ತಿದ್ದರೂ ಐಸಿಸಿ ಟೂರ್ನಿಗಳಲ್ಲಿ ವಿಫಲವಾಗಿದೆ. ಜತೆಗೆ ಕೊಹ್ಲಿ ನಾಯಕತ್ವದ ಆರ್‌ಸಿಬಿ ಇದುವರೆಗೂ ಐಪಿಎಲ್‌ನಲ್ಲಿ ಟ್ರೋಫಿ ಜಯಿಸಿಲ್ಲ.

    ಪ್ರಕೃತಿಯ ರಮಣೀಯ ತಾಣ ಧೋನಿ ಫಾರ್ಮ್ ಹೌಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts