More

    ‘8 ವರ್ಷದಿಂದ ಕಪ್​ ಗೆಲ್ಲದಿದ್ದರೂ ಕ್ಯಾಪ್ಟನ್​ ಆಗಿದ್ದು ಹೇಗೆ?’ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ ಕಾಲೆಳೆದ ಗಂಭೀರ್​

    ನವದೆಹಲಿ: 2021ರ ಐಪಿಎಲ್​ಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈಗಾಗಲೇ ಎಲ್ಲ ತಂಡಗಳು ತಮ್ಮ ಪ್ಲೇಯರ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಆರ್​ಸಿಬಿಗೆ ಎಂದಿನಂತೆ ಈ ಬಾರಿಯೂ ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಆಗಿರಲಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವಾಗಲೇ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್​ ಗಂಭೀರ್​ ಕೊಹ್ಲಿ ಬಗ್ಗೆ ಒಂದು ಹೇಳಿಕೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸದ್ಯಕ್ಕಿಲ್ಲ ಎಲೆಕ್ಷನ್​! ಇನ್ನೂ ನಾಲ್ಕು ತಿಂಗಳು ಸೋನಿಯಾ ಗಾಂಧಿಯೇ ಅಧ್ಯಕ್ಷೆ

    ಎಂಟು ವರ್ಷಗಳಿಂದ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಈಗಾಗಲೇ ಸಾಕಷ್ಟು ಸಮಯವಾಗಿದೆ. ಅಂತಹ ಕ್ಯಾಪ್ಟನ್​ ಯಾರಿದ್ದಾರೆ ಹೇಳಿ. ಕ್ಯಾಪ್ಟನ್​ ಬದಿಗಿರಲಿ, ಎಂಟು ವರ್ಷಗಳಿಂದ ಆಡಿದರೂ ಒಂದೇ ಒಂದು ಸಲವೂ ಟ್ರೋಫಿ ಗೆಲ್ಲದ ಆಟಗಾರರಿದ್ದಾರೆಯೇ? ತಂಡದ ಸೋಲಿಗೆ ಕ್ಯಾಪ್ಟನ್​ ಜವಾಬ್ದಾರನಾಗಬೇಕು. ಎಂಟು ವರ್ಷದಿಂದ ಆರ್​ಸಿಬಿ ಸೋಲು ಕಾಣುತ್ತಿರುವುದರ ಜವಾಬ್ದಾರಿಯನ್ನು ಕೊಹ್ಲಿ ಹೊತ್ತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    ಆರ್​ಸಿಬಿ ಫ್ಯಾಂಚೈಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಳೆದ ವರ್ಷ ಆಡಿದ್ದ ಬಹುತೇಕರನ್ನು ಉಳಿಸಿಕೊಳ್ಳಲಾಗಿದ್ದು, ಕೆಲವರನ್ನು ಕೈ ಬಿಡಲಾಗಿದೆ. 360 ಡಿಗ್ರಿ ಖ್ಯಾತಿಯ ಎಬಿ ಡೆ ವಿಲಿಯರ್ಸ್, ಸ್ಪಿನ್ನರ್​ ಯಜುವೆಂದರ್ ಚಹಲ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ನವದೀಪ್ ಸೈನಿ, ಅಡಮ್ ಜಾಂಪ, ಶಾಬಾಜ್ ಅಹಮದ್, ಜೋಷ್ ಫಿಲಿಪಿ, ಕೇನ್ ರಿಚರ್ಡಸನ್, ಕರ್ನಾಟಕದ ದೇವದತ್ ಪಡಿಕಲ್ ಮತ್ತು ಪವನ್ ದೇಶಪಾಂಡೆ ಆರ್​ಸಿಬಿಯ ಪಟ್ಟಿಯಲ್ಲಿದ್ದಾರೆ. ಕ್ರಿಸ್ ಮೋರಿಸ್ ಮತ್ತು ಆರನ್ ಫಿಂಚ್​ರನ್ನು ತಂಡ ಈ ಬಾರಿ ಬಿಟ್ಟುಕೊಟ್ಟಿದೆ. ಅವರ ಜತೆ ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್ ಕೂಡ ತಂಡದ ಪಟ್ಟಿಯಿಂದ ಹೊರಗುಳಿದಿದ್ದಾರೆ. (ಏಜೆನ್ಸೀಸ್​)

    ಈ ವರ್ಷದ ಆರ್​ಸಿಬಿ ಪ್ಲೇಯರ್ಸ್ ಇವರೇ.. ಹೇಗಿದೆ ನೋಡಿ ಟೀಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts