More

    ಧೋನಿ 7ನೇ ಕ್ರಮಾಂಕಕ್ಕೆ ಹಿಂಬಡ್ತಿ, ಗೌತಮ್ ಗಂಭೀರ್ ಟೀಕೆ

    ನವದೆಹಲಿ: ರಾಜಸ್ಥಾನದ 217 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವ ಕಠಿಣ ಗುರಿ ಎದುರಿದ್ದರೂ, ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ 7ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದು ಆಡಿದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧೋನಿ ಈ ರೀತಿ ಹಿಂಬಡ್ತಿ ಪಡೆದು ಆಡಿದುದರ ಔಚಿತ್ಯವೇನು ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

    ಸ್ಯಾಮ್ ಕರ‌್ರನ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂಥ ಅನನುಭವಿಗಳ ಬಳಿಕ ಧೋನಿ ಕಣಕ್ಕಿಳಿದಿದ್ದರು. ಆಗ ಸಿಎಸ್‌ಕೆ ಎದುರು 38 ಎಸೆತಗಳಲ್ಲಿ 103 ರನ್ ಗಳಿಸುವ ಕಠಿಣ ಸವಾಲು ಇತ್ತು. ಧೋನಿ ಕೊನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರೂ ಸಿಎಸ್‌ಕೆ 16 ರನ್‌ಗಳಿಂದ ಸೋಲು ಕಂಡಿತು.

    ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅಚ್ಚರಿಯಾಗಿದೆ. ಧೋನಿ ಅವರೇಕೆ 7ನೇ ಕ್ರಮಾಂಕದಲ್ಲಿ ಆಡಿದರು? ಋತುರಾಜ್, ಸ್ಯಾಮ್ ಕರ‌್ರನ್‌ರನ್ನು ತಮಗಿಂತ ಮೇಲೇಕೆ ಕಳುಹಿಸಿದರು. ಇದರಲ್ಲಿ ಯಾವುದೇ ಔಚಿತ್ಯ ನನಗೆ ಕಾಣಿಸುತ್ತಿಲ್ಲ. ನಾಯಕನಾಗಿ ಅವರು ಮುಂದೆ ನಿಂತು ಆಡಬೇಕಾಗಿತ್ತು. ಆದರೆ ಈ ಪಂದ್ಯದಲ್ಲಿನ ಆಟ ಹಾಗಿರಲಿಲ್ಲ’ ಎಂದು ಕೆಕೆಆರ್ ಮತ್ತು ಡೆಲ್ಲಿ ತಂಡಗಳ ಮಾಜಿ ನಾಯಕ ಗಂಭೀರ್ ಹೇಳಿದ್ದಾರೆ.

    ಇದನ್ನೂ ಓದಿ: ಧೋನಿಗೆ ಕೈಮುಗಿದು ಗಮನ ಸೆಳೆದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್

    ‘217 ರನ್ ಸವಾಲನ್ನು ಬೆನ್ನಟ್ಟುವಾಗ 7ನೇ ಕ್ರಮಾಂಕದಲ್ಲಿ ಆಡಿದರೆ ಏನು ಪ್ರಯೋಜನ? ಆಗ ಪಂದ್ಯ ಬಹುತೇಕ ಮುಕ್ತಾಯಗೊಂಡಿರುತ್ತದೆ. ಫಾಫ್​ ಡು ಪ್ಲೆಸಿಸ್ ಅವರದು ಏಕಾಂಗಿ ಹೋರಾಟವಾಗಿತ್ತು. ಬೇರೆ ಯಾವುದಾದರೂ ತಂಡದ ನಾಯಕ ಈ ರೀತಿಯ ಕೆಟ್ಟ ನಿರ್ಧಾರ ಕೈಗೊಂಡಿದ್ದರೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಆದರೆ ಧೋನಿ ಬಗ್ಗೆ ಜನರು ಆ ರೀತಿ ಚರ್ಚೆ ಮಾಡುವುದಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.

    ಆಡಿದ ಮೊದಲ 13 ಎಸೆತಗಳಲ್ಲಿ 10 ರನ್ ಗಳಿಸಿದ್ದ ಧೋನಿ, ಕೊನೇ 4 ಎಸೆತಗಳಲ್ಲಿ 19 ರನ್ ಕಸಿದರು. ಆದರೆ ಇದರ ಪ್ರಯೋಜನವೇನು ಎಂದೂ ಪ್ರಶ್ನಿಸಿರುವ ಗಂಭೀರ್, ‘ಧೋನಿ ಕೊನೇ ಓವರ್‌ನಲ್ಲಿ 3 ಸಿಕ್ಸರ್ ಸಿಡಿಸಿದರು ನಿಜ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಅವು ಕೇವಲ ವೈಯಕ್ತಿಕ ರನ್‌ಗಳಾಗಿದ್ದವು’ ಎಂದು ಹೇಳಿದ್ದಾರೆ.

    VIDEO | ಬುರ್ಜ್ ಖಲೀಫಾ ಮೇಲೆ ಮಿಂಚಿದ ಕೋಲ್ಕತ ನೈಟ್‌ರೈಡರ್ಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts