More

    ವೈಜಾಗ್​ ವಿಷಾನಿಲ ದುರಂತ: ಸದ್ಯ ತಮ್ಮ ಮನೆಗಳಿಗೆ ಹೋಗುವಂತಿಲ್ಲ ಕಾರ್ಖಾನೆ ಸಮೀಪದ ಗ್ರಾಮಸ್ಥರು!

    ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಆರ್​.ಆರ್​. ವೆಂಕಟಪುರಂನಲ್ಲಿರುವ ಎಲ್​.ಜಿ. ಪಾಲಿಮರ್ಸ್​ ಕೆಮಿಕಲ್​ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ನಡೆದ ವಿಷಾನಿಲ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಗ್ಯಾಸ್​ ಇಡೀ ಊರಿಗೆ ಹರಡಿದ್ದರಿಂದ ಅಲ್ಲಿದ್ದವರನ್ನು ಗುರುವಾರ ಬೆಳಗ್ಗೆಯೇ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

    ಸದ್ಯ ಅಧಿಕಾರಿಗಳು ಹೇಳುವ ಪ್ರಕಾರ ಗ್ರಾಮಸ್ಥರು ಇನ್ನು ಎರಡು ದಿನ ಇರುವಲ್ಲಿಯೇ ಆಶ್ರಯ ಪಡೆಯಬೇಕಾಗಿದೆ. ಆ ಬಳಿಕ ತಮ್ಮ ಊರಿಗೆ ತೆರಳುವುದು ಸೂಕ್ತವೆಂದಿದ್ದಾರೆ. ಪುಣೆಯ ವಿಶೇಷ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದು, ಅದರೊಂದಿಗೆ ಗ್ಯಾಸ್​ ಲೀಕ್​ ಆಗಲು ಕಾರಣ ಏನಿರಬಹುದೆಂಬ ತನಿಖೆಯನ್ನು ನಡೆಸುತ್ತಿದೆ.

    ಇದನ್ನೂ ಓದಿ: VIDEO| ನಮಗೆ ಇಲ್ಲಿರಲು ಆಗುತ್ತಿಲ್ಲ, ದಯಮಾಡಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿಯರ ಅಳಲು

    ಇನ್ನು ಕಾರ್ಖಾನೆಯ ಎರಡು ಕಿ.ಮೀ ವ್ಯಾಪ್ತಿಯ ಹೊರಗಿರುವ ಜನರು ಯಾವುದೇ ಭಯಪಡಬೇಕಾಗಿಲ್ಲ. ಅವರಿಗೆ ಸ್ಥಳಾಂತರದ ಅವಶ್ಯಕತೆ ಇಲ್ಲವೆಂದು ವಿಶಾಖಪಟ್ಟಣಂ ಪೊಲೀಸ್​ ಆಯುಕ್ತರಾದ ಆರ್​.ಕೆ. ಮೀನಾ ಅವರು ಭರವಸೆ ನೀಡಿದ್ದಾರೆ.

    ಕಾರ್ಖಾನೆಯಲ್ಲಿ ಗ್ಯಾಸ್​ ಈಗಲೂ ಲೀಕ್​ ಆಗುತ್ತಿದೆ, ಅನಿಲ ಆವಿಗಳು ಹೊರ ಸೂಸುತ್ತಿದ್ದು, ಸ್ಥಳೀಯ ಜನರಿಗೆ ಆತಂಕವನ್ನುಂಟುಮಾಡಿದೆ. ಕಾರ್ಖಾನೆಯ 5 ಕಿ.ಮೀ ವ್ಯಾಪ್ತಿಯಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕೆಂದು ವಿಶಾಖಪಟ್ಟಣಂ ಅಗ್ನಿಶಾಮಕ ಅಧಿಕಾರಿ ಸುರೇಂದ್ರ ಆನಂದ್​ ಅವರು ಗುರುವಾರ-ಶಕ್ರವಾರದ ಮಧ್ಯರಾತ್ರಿಯ ಕಾರ್ಯಾಚರಣೆ ವೇಳೆ ಹೇಳಿದ್ದರು.

    ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಗ್ಯಾಸ್​ ಲೀಕ್​ ಆಗುವುದನ್ನು ತಡೆಯಲು ಗುಜರಾತಿನಿಂದ ವಿಶೇಷ ಇಂಡಿಯಾ ಕಾರ್ಗೋ ವಿಮಾನಿಂದ ವಿಶಾಖಪಟ್ಟಣಂಗೆ ಪ್ಯಾರಾ ಟೆರ್ಟಿಯರಿ ಬ್ಯುಟೈಲ್ ಕ್ಯಾಟೆಕೋಲ್ (ಪಿಟಿಬಿಸಿ) ಅನ್ನು ತರಲಾಗಿದೆ.

    ಇದನ್ನೂ ಓದಿ: VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ

    ಇದರೊಂದಿಗೆ ಹೆಚ್ಚುವರಿಯಾಗಿ 10 ಅಗ್ನಿಶಾಮಕ ವಾಹನ ಸ್ಥಳದಲ್ಲೇ ಬೀಡುಬಿಟ್ಟಿದೆ. ಅಲ್ಲದೆ, ವೈದ್ಯಕೀಯ ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್​ ಕೂಡ ಸ್ಥಳದಲ್ಲಿವೆ. ವಿಷಾನಿಲದಿಂದ ಜನರು ಒದ್ದಾಡಿ ಪ್ರಾಣಬಿಟ್ಟಿದ್ದು, ಭೋಪಾಲ್​ ಅನಿಲ ದುರಂತವನ್ನು ನೆನಪಿಸುವಂತಿತ್ತು. (ಏಜೆನ್ಸೀಸ್​)

    ಗಂಡನ ಕೊಂದಳು, ಸಾವಿಗೆ ಕೋವಿಡ್​ ಕಾರಣ ಎಂದಳು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts