More

    ಕಸ ಎಸೆಯುವ ಮುನ್ನ ಎಚ್ಚರ! ನಿಮ್ಮ ಕಸ ನಿಮಗೇ ರಿಟರ್ನ್​ ಗಿಫ್ಟ್​ ಆಗಿ ಬರುತ್ತೆ ಹುಷಾರ್​

    ಅಮರಾವತಿ: ಪ್ರತಿದಿನ ಮನೆ ಬಾಗಿಲಿಗೆ ಬರುವ ಕಸದ ಗಾಡಿಗೆ ಕಸ ಕೊಡುವುದು ಬಿಟ್ಟು, ಬೇರೆಲ್ಲೋ ಎಸೆಯುವ ಬುದ್ಧಿ ನಿಮಗಿದ್ದರೆ ಈ ಸುದ್ದಿ ನಿಮಗಾಗಿಯೇ. ನೀವು ಯಾವ ಕಸವನ್ನು ರಸ್ತೆಯ ಮೇಲೆ ಬೇಕಾಬಿಟ್ಟಿ ಎಸೆಯುತ್ತೀರೋ ಆ ಕಸ ಇನ್ನು ಮುಂದೆ ನಿಮ್ಮ ಮನೆಗೆ ರಿಟರ್ನ್​ ಗಿಫ್ಟ್​ ಆಗಿ ಬರಲಿದೆ. ಅಷ್ಟೇ ಅಲ್ಲ ಆ ಗಿಫ್ಟ್​ಗೆ ನೀವು ದಂಡವನ್ನೂ ತೆರಬೇಕಾಗುತ್ತದೆ.

    ಇಂತದ್ದೊಂದು ಕಾನೂನನ್ನು ಆಂಧ್ರ ಪ್ರದೇಶದ ಕಾಕಿನಾಡ ನಗರ ಪಾಲಿಕೆ ಜಾರಿಗೆ ತಂದಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆ ಸಾಕಷ್ಟು ಪ್ರಯತ್ನ ಪಡುತ್ತಿದೆ. ಹಲವು ರೀತಿಯ ಕ್ರಮಗಳನ್ನು ಜಾರಿಗೆ ತಂದಿದೆ. ಹಾಗಿದ್ದರೂ ಜನರು ಪಾಲಿಕೆಗೆ ಸಹಕರಿಸದ ಹಿನ್ನೆಲೆಯಲ್ಲಿ ವಿನೂತನ ರೀತಿಯ ಕ್ರಮವನ್ನು ಅನುಸರಿಸಲಾಗುತ್ತಿದೆ.

    ಇದನ್ನೂ ಓದಿ: ಕೋವಿಡ್​-19 ಒಂಥರ ವರ್ಲ್ಡ್ ವಾರ್-2; ಪ್ರಧಾನಿ ನರೇಂದ್ರ ಮೋದಿ
    ಪಾಲಿಕೆ ಅಧಿಕಾರಿ ಸ್ವಾಪ್ನಿಲ್​ ದಿನಕರ ಅವರು ನಗರ ವೀಕ್ಷಣೆಗೆ ತೆರಳಿದ್ದಾಗ ಮಹಿಳೆಯೊಬ್ಬಳು ರಸ್ತೆ ಮೇಲೆ ಕಸ ಎಸೆಯುವುದು ಕಂಡುಬಂದಿದೆ. ತಕ್ಷಣ ಆಕೆಯ ಬಳಿಗೆ ಹೋದ ಅಧಿಕಾರಿಗಳು ಆಕೆಗೆ ಬೈದು, ಕಸವನ್ನು ವಾಪಾಸು ಅವರ ಮನೆಯ ಕಾಂಪೌಂಡ್​ ಒಳಗೆ ಹಾಕಿದ್ದಾರೆ. ಅಕ್ಕ ಪಕ್ಕದ ಮನೆಯವರೆದುರು ಮರ್ಯಾದೆ ಕಳೆದುಕೊಂಡ ಮಹಿಳೆ ಸುಮ್ಮನೆ ಕಸವನ್ನು ಎತ್ತಿಕೊಂಡು ಒಳನಡೆದಿದ್ದಾರೆ. ಈ ನಿಯಮ ಆ ಒಂದು ಮಹಿಳೆಗೆ ಮಾತ್ರವಲ್ಲ, ನಗರದ ಪ್ರತಿಯೊಬ್ಬ ಸಾರ್ವಜನಿಕರಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀವು ಕಸ ಎಸೆಯುವುದು ಅಧಿಕಾರಿಗಳ, ಪೌರ ಕಾರ್ಮಿಕರ ಕಣ್ಣಿಗೆ ಬಿದ್ದರೆ, ಆ ಕಸವನ್ನು ನಿಮ್ಮ ಮನೆಗೆ ವಾಪಾಸು ತಂದು ಹಾಕಲಾಗುವುದು. ಸೂಕ್ತ ದಂಡವನ್ನೂ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್​ ಗೆದ್ದರೆ ದೇಶ ಬಿಡುತ್ತಾರಾ ಟ್ರಂಪ್​?

    24 ಗಂಟೆ ಬೆಳಗುತ್ತೆ ಈ ಮ್ಯಾಜಿಕ್​ ದೀಪ! ದೀಪದ ಹಿಂದಿದೆ ಯೂಟ್ಯೂಬ್​ ಕೈವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts