More

    ದೇಶದ ಕರೊನಾ ಸೋಂಕಿತರ ಸಂಖ್ಯೆ 7 ಲಕ್ಷಕ್ಕೆ ಏರಿದ್ದರೂ ಸಕ್ರಿಯ ಪ್ರಕರಣಗಳು ತುಂಬ ಕಡಿಮೆ…

    ನವದೆಹಲಿ: ಭಾರತದಲ್ಲಿ ಕರೊನಾ ಕೇಸ್​ 7 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ.

    ಇದೀಗ ಆರೋಗ್ಯ ಇಲಾಖೆ ದೇಶದಲ್ಲಿ ಸಕ್ರಿಯ ಕರೊನಾ ಕೇಸ್​ಗಳ ಸಂಖ್ಯೆ ಹಾಗೂ ಸೋಂಕಿನಿಂತ ಚೇತರಿಸಿಕೊಂಡವರ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಹಾಗೇ, ಸಕ್ರಿಯ ಪ್ರಕರಣಗಳು ಮತ್ತು ಚೇತರಿಸಿಕೊಳ್ಳುವವರ ಸಂಖ್ಯೆಯ ನಡುವಿನ ಅಂತರ ಹೆಚ್ಚುತ್ತಲೇ ಇದೆ ತಿಳಿಸಿದೆ.

    ಆರೋಗ್ಯ ಇಲಾಖೆಯ ಸ್ಪೆಶಲ್ ಡ್ಯೂಟಿ ಆಫೀಸರ್​ ಆಗಿರುವ ರಾಜೇಶ್​ ಭೂಷಣ್​ ಅವರು ಸುದ್ದಿಗೋಷ್ಠಿ ನಡೆಸಿದ್ದು, ದೇಶದಲ್ಲಿ ಒಟ್ಟು 269,789 ಕೊವಿಡ್​-19ಸಕ್ರಿಯ ಕೇಸ್​​ಗಳಿವೆ. ಹಾಗೇ 4,76, 378 ಕೊವಿಡ್​-19 ವೈರಸ್​ನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಸಕ್ರಿಯ ಪ್ರಕರಣದ ಸಂಖ್ಯೆ ಹಾಗೂ ಗುಣಮುಖರಾದವರ ಸಂಖ್ಯೆಯ ನಡುವೆ ಅಂತರ ಜಾಸ್ತಿಯಾಗುತ್ತಲೇ ಇದೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಇದನ್ನೂ ಓದಿ: ನಟ ಪ್ರಭಾಸ್​ ತೆಗೆದುಕೊಂಡ ಈ ನಿರ್ಧಾರ ಕನ್ನಡಿಗರನ್ನು ಕೆಣಕುವಂತಿದೆ!

    ಹಾಗೇ, ದೇಶದಲ್ಲಿ ಕೊವಿಡ್​-19ನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಶೇ.62.09ರಷ್ಟಾಗಿದೆ. ಈ ದರ ಗಣನೀಯವಾಗಿ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳಿಗಿಂತ, ರಿಕವರಿ ರೇಟ್​ ಸುಮಾರು 2 ಪಟ್ಟು ಹೆಚ್ಚಿದೆ ಎಂದು ರಾಜೇಶ್​ ಭೂಷಣ್​ ತಿಳಿಸಿದ್ದಾರೆ.
    ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.8ರಷ್ಟು 60 ರಿಂದ 74 ವರ್ಷದವರು ಇದ್ದಾರೆ. ಕೊವಿಡ್​-19ನಿಂದ ಈ ವಯಸ್ಸಿನವರೇ ಶೇ.39ರಷ್ಟು ಮೃತರಾಗುತ್ತಿದ್ದಾರೆ. ಇನ್ನು ಶೇ.14ರಷ್ಟು 75ವರ್ಷಕ್ಕಿಂತ ಮೇಲ್ಪಟ್ಟವರು ಕೊವಿಡ್​-19ನಿಂದ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಪೊಲೀಸರ ಶವ ಸುಟ್ಟು ಸಾಕ್ಷ್ಯ ನಾಶ ಮಾಡಬೇಕೆಂದಿದ್ದೆ, ಸಾಧ್ಯವಾಗಲಿಲ್ಲ ಪರಾರಿಯಾದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts