More

    ಗ್ರಾಮಾಂತರದಲ್ಲೂ ಗಾಂಜಾ ಅಮಲು?

    ಉಡುಪಿ: ಬೆಂಗಳೂರು ಡ್ರಗ್ಸ್ ದಂಧೆ ವಿಚಾರ ಬಹಿರಂಗಗೊಂಡ ಬಳಿಕ ಜಿಲ್ಲೆಯಾದ್ಯಂತ ಕಾರ್ಯಾಚರಣೆ ತೀವ್ರ ಚುರುಕುಗೊಂಡಿದ್ದು, ಕಳೆದ 29 ದಿನಗಳಲ್ಲಿ 103 ಗಾಂಜಾ ಪ್ರಕರಣಗಳು ವರದಿಯಾಗಿದೆ.

    ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಗಾಂಜಾ ಪ್ರಕರಣ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಹೆಚ್ಚುತ್ತಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭ ಮಾರಾಟ ಹಾಗೂ ಸೇವನೆ ಅತಿ ಹೆಚ್ಚಾಗಿದ್ದು, ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಹೆಚ್ಚು ಗಾಂಜಾ ಕೇಸು ದಾಖಲಾಗಿದೆ.

    2020ರ ಜನವರಿಯಿಂದ ಸೆಪ್ಟೆಂಬರ್ 25ರವರೆಗೆ ಜಿಲ್ಲೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿ 27 ಪ್ರಕರಣ ದಾಖಲಿಸಿರುವ ಪೊಲೀಸರು, ಒಟ್ಟು 54 ಮಂದಿಯನ್ನು ಬಂಧಿಸಿದ್ದಾರೆ. ಗಾಂಜಾ ಸೇವನೆಗೆ ಸಂಬಂಧಿಸಿ 201 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಂಟು ತಿಂಗಳಲ್ಲಿ ಒಟ್ಟು 228 ಪ್ರಕರಣಗಳನ್ನು ದಾಖಲಿಸಿ 256 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳೆದ ವರ್ಷ 203 ಪ್ರಕರಣಗಳಲ್ಲಿ 221 ಮಂದಿಯನ್ನು ಬಂಧಿಸಿ 46.704 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.

    8 ಮಂದಿ ಬಂಧನ: ಈ ಹಿಂದಿನ ವರ್ಷಗಳಲ್ಲಿ ಮಲ್ಪೆ, ಮಣಿಪಾಲ ಉಡುಪಿ ನಗರ ಠಾಣೆಗಳಲ್ಲಿ ಮಾತ್ರ ಸೀಮಿತವಾಗಿದ್ದ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಗಳು ಪ್ರಸಕ್ತ ಗ್ರಾಮೀಣ ಪ್ರದೇಶದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಪತ್ತೆಯಾಗುತ್ತಿದೆ. ಸೆಪ್ಟಂಬರ್‌ನಲ್ಲಿ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 103 ಪ್ರಕರಣಗಳಲ್ಲಿ, 27 ಪ್ರಕರಣಗಳು ಕುಂದಾಪುರ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾಗಿವೆ. ಈ ವ್ಯಾಪ್ತಿಯಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಿ 3.5ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ತಿಂಗಳ 29 ದಿನಗಳಲ್ಲಿ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 103 ಪ್ರಕರಣಗಳಲ್ಲಿ, 27 ಪ್ರಕರಣಗಳು ಕುಂದಾಪುರ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾಗಿವೆ. ಈ ವ್ಯಾಪ್ತಿಯಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಿ 3.5ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಶಿರ್ವ, ಕಾಪು, ಪಡುಬಿದ್ರೆ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಹೆಚ್ಚಿನ ಗಾಂಜಾ ಪ್ರಕರಣ ದಾಖಲಾಗಿದೆ.

    ಗಾಂಜಾ ಪೂರೈಕೆ ಸಂಬಂಧಿಸಿ ಬಂಧಿತರಿಂದ ಮಾಹಿತಿ ಪಡೆದು ನೆಟ್‌ವರ್ಕ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಗಾಂಜಾ ಪೂರೈಕೆ ಮೂಲ ಮಟ್ಟಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ಸಾಗುತ್ತಿದೆ. ಉಪ ವಿಭಾಗ ವ್ಯಾಪ್ತಿಯಲ್ಲಿ ಸೇವನೆ ಜತೆಗೆ ಪೂರೈಕೆ ಪ್ರಕರಣವನ್ನು ದಾಖಲಿಸಲಾಗಿದೆ.
    -ಹರಿರಾಮ್ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕ, ಕುಂದಾಪುರ ಉಪ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts