More

    ಐಪಿಎಲ್​ಗೆ ಮುನ್ನ ನವೀಕರಣಗೊಂಡ ಶಾರ್ಜಾ ಕ್ರೀಡಾಂಗಣಕ್ಕೆ ಮನಸೋತ ಸೌರವ್ ಗಂಗೂಲಿ

    ಶಾರ್ಜಾ: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಎಡಗೈ ಆರಂಭಿಕರಾಗಿ ಸ್ಪಿನ್ನರ್‌ಗಳ ಎದುರು ಮುನ್ನುಗ್ಗಿ ಬಂದು ಸಿಕ್ಸರ್​ ಸಿಡಿಸುತ್ತಿದ್ದ ಚೆಂಡುಗಳು ಶಾರ್ಜಾ ಕ್ರೀಡಾಂಗಣದ ಮೇಲ್ಛಾವಣಿಗೆ ಹೋಗಿ ಬೀಳುತ್ತಿದ್ದ ಮನಮೋಹಕ ಕ್ಷಣಗಳನ್ನು ಕ್ರಿಕೆಟ್ ಪ್ರೇಮಿಗಳು ಇನ್ನೂ ಮರೆತಿಲ್ಲ. ಇದೀಗ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಐಪಿಎಲ್ ಸಿದ್ಧತೆಗಳ ಪರಿಶೀಲನೆಗಾಗಿ ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು, ನವೀಕೃತ ಮೈದಾನದ ಹೊಸ ಲುಕ್‌ಗೆ ಮನಸೋತಿದ್ದಾರೆ.

    ಈ ಬಾರಿ ಕರೊನಾ ಹಾವಳಿಯಿಂದಾಗಿ ಭಾರತದಿಂದ ಯುಎಇಗೆ ಐಪಿಎಲ್ ಟೂರ್ನಿ ಸ್ಥಳಾಂತರಗೊಂಡಿದ್ದು, ಟೂರ್ನಿಯ ಪಂದ್ಯಗಳನ್ನು ನಡೆಸಲಿರುವ 3 ತಾಣಗಳಲ್ಲಿ ಶಾರ್ಜಾ ಕ್ರೀಡಾಂಗಣವೂ ಒಂದಾಗಿದೆ. ಶಾರ್ಜಾ ಕ್ರೀಡಾಂಗಣದ ಹೊಸ ಲುಕ್‌ಗೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾರತದ ದಿಗ್ಗಜರಾದ ಸುನೀಲ್ ಗಾವಸ್ಕರ್ ಮತ್ತು ಸಚಿನ್ ತೆಂಡುಲ್ಕರ್ ಶಾರ್ಜಾ ಕ್ರೀಡಾಂಗಣದಲ್ಲಿ ಅಪೂರ್ವ ಆಟವಾಡಿದ್ದು, ಯುವ ಆಟಗಾರರು ಇದೀಗ ಅದೇ ಮೈದಾನದಲ್ಲಿ ಆಡುವ ಬಗ್ಗೆ ಉತ್ಸುಕರಾಗಿದ್ದಾರೆ ಎಂದೂ ಗಂಗೂಲಿ ಇದೇ ವೇಳೆ ತಿಳಿಸಿದ್ದಾರೆ.

    ಇದನ್ನೂ ಓದಿ: 120 ದೇಶಗಳಲ್ಲಿ ಐಪಿಎಲ್ ನೇರಪ್ರಸಾರ, ಆದರೆ ಈ ನೆರೆಯ ದೇಶದಲ್ಲೇ ಪ್ರಸಾರ ಕಾಣಲ್ಲ!

    ಶಾರ್ಜಾ ಕ್ರೀಡಾಂಗಣ ಇತ್ತೀಚೆಗಷ್ಟೇ ಸಮಗ್ರ ನವೀಕರಣಗೊಂಡಿದ್ದು, ಕೋವಿಡ್-19 ಮಾರ್ಗಸೂಚಿಗಳ ಪಾಲನೆಗೆ ಸೂಕ್ತವೆನಿಸಿದೆ. ಗಂಗೂಲಿ ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಅಧಿಕಾರಿಗಳ ಜತೆಗೆ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್, ಮಾಜಿ ಚೇರ್ಮನ್ ರಾಜೀವ್ ಶುಕ್ಲಾ ಮತ್ತು ಐಪಿಎಲ್ ಸಿಒಒ ಹೇಮಂಗ್ ಅಮಿನ್ ಜತೆಗಿದ್ದರು. ಶಾರ್ಜಾದಲ್ಲಿ ಟೂರ್ನಿಯ ಲೀಗ್ ಹಂತದಲ್ಲಿ 12 ಪಂದ್ಯಗಳು ನಡೆಯಲಿವೆ.

    ಶಾರ್ಜಾ ಕ್ರೀಡಾಂಗಣದಲ್ಲಿ 1984ರಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು. ಬಳಿಕ 240ಕ್ಕೂ ಅಧಿಕ ಏಕದಿನ ಪಂದ್ಯಗಳು ನಡೆದಿದ್ದು, ಒಂದೇ ಕ್ರೀಡಾಂಗಣದಲ್ಲಿ ಅತ್ಯಧಿಕ ಏಕದಿನ ಪಂದ್ಯಗಳು ನಡೆದ ಗಿನ್ನೆಸ್ ದಾಖಲೆಯೂ ಶಾರ್ಜಾ ಕ್ರೀಡಾಂಗಣದ ಹೆಸರಿನಲ್ಲಿದೆ. ಗಂಗೂಲಿ ಕೂಡ ಇಲ್ಲಿ ಹಲವು ಏಕದಿನ ಪಂದ್ಯಗಳನ್ನು ಆಡಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಗಮನಾರ್ಹ ನಿರ್ವಹಣೆಗಳನ್ನು ತೋರಿದ್ದರು. 1998ರಲ್ಲಿ ಅವರು ಇಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

    ಕ್ರಿಕೆಟಿಗ ಮೊಹಮದ್ ಶಮಿ ಪತ್ನಿಯಿಂದ ಪೊಲೀಸರ ವಿರುದ್ಧವೇ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts