More

    ದೂರ ದೃಷ್ಟಿ ರಾಜಕಾರಣದ ಅಗತ್ಯವಿದೆ

    ಗಂಗಾವತಿ:ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಆಹಾರ ಭದ್ರತೆ ಒದಗಿಸಿದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರ ದೂರ ದೃಷ್ಟಿಯ ರಾಜಕಾರಣ ಪ್ರಸ್ತುತ ಅಗತ್ಯವಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ಹೇಳಿದರು.

    ನಗರದ ಬಾಬು ಜಗಜೀವನ ರಾಮ್ ವೃತ್ತದಲ್ಲಿ ದಲಿತಪರ ಸಂಘಟನೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸಮಾನತೆಯ ತತ್ವದ ಮೇಲೆ ಆಡಳಿತ ನಡೆಸಿದ ಧೀಮಂತ ನಾಯಕರಾಗಿದ್ದು, ಶೋಷಿತ ವರ್ಗದ ಏಳಿಗೆಗಾಗಿ ಶ್ರಮಿಸಿದ್ದರು. ಶೀಘ್ರವೇ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

    ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಹಂಪೇಶ ಹರಿಗೋಲು, ಹುಸೇನಪ್ಪಸ್ವಾಮಿ ಮಾದಿಗ, ಮರಿಯಪ್ಪ ಕುಂಟೋಜಿ, ಬಸವರಾಜ ಛಲವಾದಿ, ಕೆ.ಪಾಮಣ್ಣ, ಹನುಮಂತಪ್ಪ ಡಗ್ಗಿ, ಜೆ.ಭಾರದ್ವಾಜ್, ದುರುಗೇಶ ಐಹೊಳೆ ಇತರರಿದ್ದರು.

    ಬಿಜೆಪಿ ಕಚೇರಿ: ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಜಯಂತಿ ಅಚರಿಸಲಾಯಿತು. ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಸವರಾಜ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ಪ್ರಮುಖರಾದ ಯು.ಲಕ್ಷ್ಮಣ, ಸಂಗಮೇಶ ಅಯೋಧ್ಯಾ, ಡಣಾಪುರ ಭೀಮಪ್ಪ, ಮಂಜುನಾಥ, ವಿಠ್ಠಪ್ಪ ತಳಕಲ್, ಹನುಮಂತಪ್ಪ ಡಗ್ಗಿ, ಹುಲ್ಲೇಶ, ಬಸವರಾಜ ಭೋವಿ, ಮಹೇಶ ಜವಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts