More

    ಸ್ಟಿಕ್ಕರ್- ಕ್ಯೂಆರ್ ಕೋಡ್‌ಗೆ ವಿರೋಧ: ವಾಹನ ಮಾಲೀಕರಿಂದ ಅಧಿಕಾರಿಗೆ ತರಾಟೆ

    ಗಂಗಾವತಿ: ಸ್ಟಿಕ್ಕರ್ ಮತ್ತು ಕ್ಯೂಆರ್ ಕೋಡ್‌ಗೆ ವಾಹನ ಮಾಲೀಕರು ವಿರೋಧಿಸಿ, ನಗರದ ಸಿಬಿಎಸ್ ಗಂಜ್ ಆವರಣದಲ್ಲಿ ಗುರುವಾರ ಆರ್‌ಟಿಒ ನಿರೀಕ್ಷ ಟಿ.ಎ.ಸತೀಶ್‌ಬಾಬುಗೆ ತರಾಟೆಗೆ ತೆಗೆದುಕೊಂಡರು.
    ರಾತ್ರಿ ವೇಳೆ ಅಪಘಾತ ನಿಯಂತ್ರಣಕ್ಕಾಗಿ ಯೆಲ್ಲೋ ಬೋರ್ಡ್‌ನ ಲಘು ಮತ್ತು ಭಾರಿ ವಾಹನಗಳಿಗೆ ರ್ಲಿೆಕ್ಟರ್ ಸ್ಟಿಕ್ಕರ್ ಮತ್ತು ಕ್ಯೂಆರ್ ಕೋಡ್ ಅಳವಡಿಕೆಗೆ ೆ.22ರಂದು ಸಾರಿಗೆ ಇಲಾಖೆ ಆದೇಶಿಸಿದೆ. ಅಲ್ಲದೆ ೆ.28ರಿಂದ ಕಡ್ಡಾಯಗೊಳಿಸುವಂತೆ ಸೂಚಿಸಿದೆ. ಆದರೆ ಕೇಂದ್ರ ಕಚೇರಿ ಆದೇಶ ೆ.27ರಂದು ಕೊಪ್ಪಳ ಕಚೇರಿಗೆ ಬಂದಿದೆ. ಸ್ಟಿಕ್ಕರ್ ಹಚ್ಚಲು ವಿಶ್ವನಾಥ ಎಂಬುವವರಿಗೆ ಗುತ್ತಿಗೆ ನೀಡಿದ್ದು, ಅಳವಡಿಕೆಗೆ ಸಲಕರಣೆಗಳು ತಂದಿಲ್ಲ. ನೋಂದಣಿ ನವೀಕರಣಕ್ಕೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸಾರಿಗೆ ನಿರೀಕ್ಷಕ ಟಿ.ಎ.ಸತೀಶಬಾಬು ಪಟ್ಟು ಹಿಡಿದಿದ್ದರಿಂದ, ವಾಹನ ಮಾಲೀಕರು ಮತ್ತು ಚಾಲಕರು ತರಾಟೆಗೆ ತೆಗೆದುಕೊಂಡರು. ವಾರದ ಗಡವು ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ಟಿಕ್ಕರ್ ಮತ್ತು ಕ್ಯೂಆರ್ ಕೋಡ್ ಅಳವಡಿಕೆಯಿಂದ ವಾಹನ ಮಾಲೀಕರಿಗೆ ಲಾಭವಿಲ್ಲ, ದುಬಾರಿ ವೆಚ್ಚದಲ್ಲಿ ಕಳಪೆ ಮಟ್ಟದ ಸಲಕರಣೆ ವಿತರಿಸಲಾಗುತ್ತಿದೆಂದು ಹರಿಹಾಯ್ದರು.
    ಲಾರಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಸಿಂಗನಾಳ ಸುರೇಶ ಮಾತನಾಡಿ, ಸಾರಿಗೆ ಇಲಾಖೆ ಜಿಲ್ಲಾ ಮತ್ತು ಜಂಟಿ ಆಯುಕ್ತರಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಅನಗತ್ಯ ಕಿರುಕುಳ ನೀಡಿದರೆ ವಾಹನ ಸಂಚಾರ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸಮಸ್ಯೆ ಇತ್ಯರ್ಥ ಆಗುವವರೆಗೂ ಯಾವುದೇ ನೋಂದಣಿ ಮಾಡದಂತೆ ಒತ್ತಾಯಿಸಿದರು.
    ಸಾರಿಗೆ ನಿರೀಕ್ಷಕ ಟಿ.ಎ.ಸತೀಶಬಾಬು ಮಾತನಾಡಿ, ಗುತ್ತಿಗೆ ಕಂಪನಿ ಬಳಿ ಸಲಕರಣೆಗಳಿಲ್ಲದಿರುವುದು ಗಮನಕ್ಕೆ ಬಂದಿದ್ದು, ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. ಲಾರಿ ಮಾಲೀಕರಾದ ಕೆ.ಪ್ರಾಣೇಶ, ವೀರೇಶ ಮೈಲಿ, ಕೈಸರ ಸಾಬ್, ಸದಾಶಿವ ಗೌಡ, ಶಿವಕುಮಾರ, ರವಿಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts