More

    ಜು.3ರಂದು ಕಾಂಗ್ರೆಸ್ ಸೇರ್ಪಡೆ ಖಚಿತ ಎಂದ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ

    ಗಂಗಾವತಿ: ಕಾಂಗ್ರೆಸ್ ಸೇರ್ಪಡೆಗೆ ಬೆಂಬಲಿಗರು ಮತ್ತು ಕಾರ್ಯಕರ್ತರು ಸ್ಪಂದಿಸಿದ್ದು, ಜು.3ರಂದು ಬೆಂಗಳೂರಿನಲ್ಲಿ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ ಖಚಿತ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.

    ನಗರದ ಎಚ್‌ಆರ್‌ಎಸ್ ಆವರಣದಲ್ಲಿ ಕಾಂಗ್ರೆಸ್ ಸೇರ್ಪಡೆ ಕುರಿತು ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿಗನಾಗಿದ್ದು, ಕೆಲ ವಿದ್ಯಾಮಾನಗಳಿಂದ ಪಕ್ಷ ತೊರೆಯಬೇಕಾಯಿತು. ಕ್ಷೇತ್ರದ ಸಮಗ್ರ ಅಭಿವೃದ್ಧಿ, ಶಾಂತಿ ಸುವ್ಯವಸ್ಥೆಗಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಸ್ಥಾನಮಾನ ಮತ್ತು ಅಧಿಕಾರಕ್ಕಾಗಿ ಅಲ್ಲ ಎಂದರು.

    ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಮಾತನಾಡಿ, ಎಚ್‌ಆರ್‌ಜಿ ಕುಟುಂಬ ಇಲ್ಲದಿದ್ದರಿಂದ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಈ ಕುಟುಂಬ ಮರಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ನಗರಸಭೆ ಸದಸ್ಯ ಎಂ.ಡಿ.ಉಸ್ಮಾನ್, ಮಾಜಿ ಅಧ್ಯಕ್ಷರಾದ ಕೆ.ಕೃಷ್ಣಪ್ಪ ನಾಯಕ, ಪುತ್ತೂರು ಶ್ರೀನಿವಾಸರಾಜು, ಮಾಜಿ ಸದಸ್ಯ ಈ.ರಾಮಕೃಷ್ಣ ವಿವಿಧ ಸಮುದಾಯದ ಮುಖಂಡರಾದ ಗೌಳಿ ರಮೇಶ, ಸೈಯ್ಯದ್ ನಾಜನೀನ್, ಆಯುಬ್‌ಅಲಿ, ಅನ್ನಪೂರ್ಣ ಸಿಂಗ್, ಹನುಮಂತರಾಯ, ವೀರನಗೌಡ, ರಜಿಯಾ ಮನಿಯಾರ್, ಸುರೇಶ ಗೌರಪ್ಪ, ಸಿ.ಎಚ್.ರಾಮಕೃಷ್ಣ, ಆರ್.ಪಿ.ರೆಡ್ಡಿ ಇತರರಿದ್ದರು.

    ಶಾಂತಿ ನೆಮ್ಮದಿಗೆ ಮುಂದಾದರೆ ದೋಸ್ತಿ
    ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿಯಿಲ್ಲದಂತಾಗಿದ್ದು, ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಒಪ್ಪಿದರೆ, ಅವರೊಂದಿಗೆ ದೋಸ್ತಿ ಮಾಡಲು ಸಿದ್ದ ಎಂದು ಮಾಜಿ ಎಂಎಲ್ಸಿ ಎಚ್. ಅರ್. ಶ್ರೀನಾಥ ಹೇಳಿದರು. ಅನ್ಸಾರಿ ಹೊರತುಪಡಿಸಿ ಎಲ್ಲ ಮುಖಂಡರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬರಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅನ್ಸಾರಿಯವರೊಂದಿಗೆ ರಾಜೀಸಂಧಾನಕ್ಕೆ ಕೆಪಿಸಿಸಿ ಹೈಕಮಾಂಡ್ ನಿರ್ಧರಿಸಿದ್ದು, ಶೀಘ್ರವೇ ಅಂತಿಮವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts