More

    ಅತಿಥಿ ಶಿಕ್ಷಕರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿ

    ಗಂಗಾವತಿ: ಅತಿಥಿ ಶಿಕ್ಷಕರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ನಗರದ ಎಂಎನ್‌ಎಂ ಬಾಲಕಿಯರ ಪಿಯು ಕಾಲೇಜಿನಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ವಿವಿಧ ಶಾಲೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಬಿಇಒ ವೆಂಕಟೇಶ ರಾಮಚಂದ್ರಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.

    ತಾಲೂಕು ಸಮಿತಿ ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಕ್ಷರ ಮಿತ್ರ ಯೋಜನೆಯಡಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಶಾಲೆಗೆ ಅವಕಾಶ ನೀಡಲಾಗಿತ್ತು.

    ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಕಳೆದ ವರ್ಷದ ಅವಧಿಯಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳದೇ ಗೌರವಧನ ಎತ್ತುವಳಿ ಮಾಡಿಕೊಂಡಿದ್ದು, ಪಾಠ ಮಾಡಲು ಶಾಲೆಗೆ ಬಂದ ಬಿಇಡಿ ಪ್ರಶಿಕ್ಷಣಾರ್ಥಿಗಳ ಹೆಸರಿನಲ್ಲಿ ಬಿಲ್ ರೂಪಿಸಲಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದರೂ, ಬಿಇಡಿ ಪದವಿ ಪಡೆದವರನ್ನು ನಿಯೋಜಿಸಿಕೊಳ್ಳದೆ ಪ್ರಶಿಕ್ಷಣಾರ್ಥಿಗಳನ್ನು ಬಳಸಿಕೊಂಡಿದ್ದು ಸರಿಯಲ್ಲ.

    ಬಿಇಡಿ ಪದವಿ ಪಡೆಯದ ಪ್ರಶಿಕ್ಷಣಾರ್ಥಿಗಳ ಹೆಸರಿನಲ್ಲಿ ಗೌರವ ಧನ ದಾಖಲೆ ಸೃಷ್ಟಿಸಿದ್ದರೂ, ಅಧಿಕಾರಿಗಳು ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಉಪಪ್ರಾಚಾರ್ಯ ಸೇರಿ ಹಲವರು ಶಾಮೀಲಾಗಿದ್ದಾರೆ. ಮೇಲ್ನೋಟಕ್ಕೆ 1983ರ ಶಿಕ್ಷಣ ಕಾಯ್ದೆ ಉಲ್ಲಂಘನೆಯಾಗಿದ್ದು, ತಪ್ಪಿಸ್ಥರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವಂತೆ ಒತ್ತಾಯಿಸಿದರು.

    ರಾಜ್ಯಾಧ್ಯಕ್ಷ ಅಧ್ಯಕ್ಷ ಅಮರೇಶ ಕಡಗದ್, ತಾಲೂಕು ಸಮಿತಿ ಕಾರ್ಯದರ್ಶಿ ಶಿವಕುಮಾರ, ಉಪಾಧ್ಯಕ್ಷ ನಾಗರಾಜ್ ಉತ್ತನೂರ್, ಪದಾಧಿಕಾರಿಗಳಾದ ಬಾಲಾಜಿ, ಶರ್ೀ, ನಾಗರಾಜ, ಪ್ರಶಾಂತ, ಬಸಯ್ಯ ಹಿರೇಮಠ, ಶಂಕರ, ಬಾಳಪ್ಪ ಹುಲಿಹೈದರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts