More

    ಗ್ರಾಪಂ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳಿ

    ಗಂಗಾವತಿ: ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಅಂಜನಾದ್ರಿ ಬೆಟ್ಟದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯರು ಆನೆಗೊಂದಿ ಗ್ರಾಪಂ ಕಚೇರಿಯಲ್ಲಿ ತಾಪಂ ಇಒ ಲಕ್ಷ್ಮೀದೇವಿ ಯಾದವ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆಯಲ್ಲಿ ಗ್ರಾಪಂ ಸದಸ್ಯರನ್ನು ಕಡೆಗಣಿಸಿದ್ದು, ಸಂವಿಧಾನ ಬದ್ಧ ಹಕ್ಕು ಮೊಟಕುಗೊಳಿಸಲಾಗಿದೆ ಎಂದು ಸದಸ್ಯರು ಆರೋಪಿಸಿದರು. ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಹಾಗೂ ಗ್ರಾಪಂ ಸದಸ್ಯ ಡಾ.ವೆಂಕಟೇಶಬಾಬು ಮಾತನಾಡಿ, ಅಂಜನಾದ್ರಿ ಬೆಟ್ಟ ಸಣಾಪುರ, ಆನೆಗೊಂದಿ ಮತ್ತು ಸಂಗಾಪುರ ಸೇರಿ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಪ್ರತಿ ಸೌಲಭ್ಯವೂ ಪಂಚಾಯಿತಿ ಇಂದಲೇ ನಿರ್ವಹಿಸಬೇಕಿದೆ.

    ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಸ್ಥಳೀಯ ಗ್ರಾಪಂ ಸದಸ್ಯರ ಆಹ್ವಾನಿಸದೇ ನಡೆಸಲಾಗುತ್ತಿದ್ದು, ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ನೀರು, ವಿದ್ಯುತ್, ನೈರ್ಮಲೀಕರಣ ಸೇರಿ ಯಾವುದೇ ಸಮಸ್ಯೆ ಕಂಡು ಬಂದರೆ, ಗ್ರಾಮಸ್ಥರು ಗ್ರಾಪಂ ಸಿಬ್ಬಂದಿಗೆ ಕರೆ ಮಾಡುತ್ತಾರೆ ಹೊರತು ತಾಲೂಕುಮಟ್ಟದ ಅಧಿಕಾರಿಗಳಿಗಲ್ಲ. ಇದನ್ನು ಜಿಲ್ಲಾಡಳಿತ ಗಂಭೀರ ಪರಿಗಣಿಸಬೇಕಿದ್ದು, ಚುನಾಯಿತ ಸದಸ್ಯರ ಹಕ್ಕು ಮೊಟಕುಗೊಳಿಸದಂತೆ ಒತ್ತಾಯಿಸಿದರು.

    ಒಕ್ಕೂಟದ ಜಿಲ್ಲಾಧ್ಯಕ್ಷ ಬಳ್ಳಾರಿ ರಾಮಣ್ಣ ನಾಯಕ, ಪದಾಧಿಕಾರಿಗಳಾದ ಪ್ರಿಯಾಂಕ ಪವಾರ್, ಕೃಷ್ಣಾ ಆಲೂರ್, ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಈ.ಪೂರ್ಣಿಮಾ, ಸದಸ್ಯರಾದ ತಿಮ್ಮಪ್ಪ ಬಾಳಿಕಾಯಿ, ಮಲ್ಲಿಕಾರ್ಜುಸ್ವಾಮಿ, ರಾಜಶೇಖರ್, ಹುಲಿಗೆಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts