More

    ಹಳೇ ಶುಲ್ಕವನ್ನೇ ಮುಂದುವರಿಸಿ

    ಗಂಗಾವತಿ: ಪದವಿ ಪ್ರವೇಶ ಇತರ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಮುಂದೆ ಸೋಮವಾರ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಪ್ರಾಚಾರ್ಯ ಡಾ.ಜಾಜಿದೇವೇಂದ್ರಪ್ಪಗೆ ಮನವಿ ಸಲ್ಲಿಸಿದರು.

    ಸಮಿತಿ ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಬಳ್ಳಾರಿ ವಿವಿ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿನ ವಿವಿಧ ಶುಲ್ಕ ಹೆಚ್ಚಳಕ್ಕೆ ಕಡಿವಾಣವಿಲ್ಲದಂತಾಗಿದ್ದು, 1200 ರೂ.ಗಳಿಗೆ ಹೆಚ್ಚಿಸಿರುವುದು ಖಂಡನೀಯವಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ದಲಿತ ಮತ್ತು ಬಡ ಮಕ್ಕಳೇ ಪ್ರವೇಶ ಪಡೆಯುತ್ತಿದ್ದು, ದುಬಾರಿ ಶುಲ್ಕದಿಂದ ಉನ್ನತ ಶಿಕ್ಷಣದಿಂದ ಹೊರಗುಳಿಯುವ ಸ್ಥಿತಿ ಬಂದಿದೆ. ಕೊಪ್ಪಳ ಜಿಲ್ಲೆ ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ೋಷಿಸಿದ್ದು, ದುಡಿಯುವ ಕೈಗಳಿಗೆ ಕೆಲಸವಿಲ್ಲ. ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ. ಸಮಸ್ಯೆಗಳ ಪರಿಹಾರಕ್ಕೆ ವಿವಿಗೆ ಹೋದರೂ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಿದರು.

    ಶುಲ್ಕ ಕಡಿತಗೊಳಿಸಿ, ಹಳೇ ಶುಲ್ಕವನ್ನೇ ಮುಂದುವರಿಸಬೇಕು. ಅಂಕಪಟ್ಟಿ ಕೂಡಲೇ ವಿತರಿಸಬೇಕು. ಆನ್‌ಲೈನ್ ದಾಖಲಾತಿಯೊಂದಿಗೆ ಆ್ಲೈನ್ ಪದ್ಧತಿ ಮುಂದುವರಿಸಬೇಕು. ಲಿತಾಂಶ ವಿಳಂಬಕ್ಕೆ ಕಡಿವಾಣ ಹಾಕಬೇಕಿದ್ದು, ಅವೈಜ್ಞಾನಿಕ ಶುಲ್ಕ ನಿಗದಿ ಪದ್ಧತಿ ಕೈಬಿಡುವಂತೆ ಒತ್ತಾಯಿಸಿದರು.

    ಉಪಾಧ್ಯಕ್ಷ ನಾಗರಾಜ, ಸದಸ್ಯರಾದ ಬಸಯ್ಯ, ರಾಜಾಭಕ್ಷಿ, ಬಾಲಪ್ಪ, ಶಂಕ್ರಪ್ಪ, ಶಿವರಾಜ್, ಶಂಕರ, ಸಮೀರ್, ಬಸವರಾಜ, ರೇಖಾ, ಪ್ರಕಾಶ, ದೇವರಾಜ, ಮಾರುತಿ, ಬಾಲರಾಜ್, ಕರಿಯಪ್ಪ, ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts