More

    ಸರ್ಕಾರದ ನೀತಿಗೆ ಪೌರ ಕಾರ್ಮಿಕರ ಬದುಕು ಅತಂತ್ರ: ಎಐಸಿಸಿಟಿಯು ಅಧ್ಯಕ್ಷ ಕ್ಲ್ಟಿನ್ ಡಿ.ರೊಜೊರಿಯೊ ಆರೋಪ

    ಗಂಗಾವತಿ: ಸರ್ಕಾರದ ತಾರತಮ್ಯ ನೀತಿಯಿಂದ ಪೌರ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಎಐಸಿಸಿಟಿಯು ರಾಜ್ಯ ಅಧ್ಯಕ್ಷ ಕ್ಲ್ಟಿನ್ ಡಿ.ರೊಜೊರಿಯೊ ಟೀಕಿಸಿದರು.
    ನಗರದ ಬಾಬು ಜಗಜೀವನರಾಮ್ ವೃತ್ತದಲ್ಲಿ ಎಐಸಿಸಿಟಿಯು, ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘ, ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರಿದ್ದರೂ, ಸರ್ಕಾರ 11 ಸಾವಿರ ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲು ನಿರ್ಧರಿಸಿದೆ. ಇವರ ಸ್ಥಿತಿಗತಿ ಅಧ್ಯಯನಕ್ಕಾಗಿ ರೂಪಿಸಿದ್ದ ಸಮಿತಿ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಇದರಲ್ಲಿ ಗಂಗಾವತಿ ಸಂಘಟನೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

    ಬೆಂಗಳೂರಿನ ಬಿಬಿಎಂಪಿ ಪೌರ ಕಾರ್ಮಿಕ ಸಂಘಟನೆ ಅಧ್ಯಕ್ಷೆ ರತ್ನಮ್ಮ ಮಾತನಾಡಿ, ಪೌರ ಕಾರ್ಮಿಕರನ್ನು ಕೀಳಾಗಿ ನೋಡಲಾಗುತ್ತಿದ್ದು, ಕನಿಷ್ಠ ಸೌಲಭ್ಯ ಒದಗಿಸುತ್ತಿಲ್ಲ. ಹೋರಾಟದ ಮೂಲಕವೇ ಸರ್ಕಾರಕ್ಕೆ ಉತ್ತರ ನೀಡಬೇಕಿದೆ ಎಂದರು. ಕಾರ್ಮಿಕರ ಸಂಘದ ಅಧ್ಯಕ್ಷ ಜೆ.ಭಾರದ್ವಾಜ್, ಸಿಪಿಎಂಎಲ್ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಎಸ್.ಮಣಿ, ಪ್ರಗತಿಪರ ಮಹಿಳಾ ಸಂಘದ ರಾಜ್ಯ ಸಮಿತಿ ಸದಸ್ಯೆ ಗಾಂಧಿಮತಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ವಿಜಯ್, ಆನಂದ ಭಂಡಾರಿ, ಶಿವಯ್ಯ, ನಾಗಲಕ್ಷ್ಮೀ, ಮರಿಯಮ್ಮ, ಮಾಯಮ್ಮ, ಹುಬ್ಬಳ್ಳಿ ಚಂದ್ರಶೇಖರ್, ಗಿಡ್ಡಪ್ಪ, ಪರಶುರಾಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts