More

    ತಂತ್ರಜ್ಞಾನದಲ್ಲಿ ಭಾರತ ವಿಶ್ವಗುರು

    ಶಿಕ್ಷಣ ತಜ್ಞ ಪ್ರೊ. ಅನಿಲಸಹಸ್ರಬುದ್ಧೆ ಅಭಿಮತ ವಿಶೇಷ ಉಪನ್ಯಾಸ ಕಾರ್ಯಕ್ರಮ


    ಗಂಗಾವತಿ: ದೇಶದ ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳಾಗಿದ್ದು, ಪ್ರಾಚೀನ ಕಾಲದಿಂದಲೂ ವಿಜ್ಞಾನ ವಿಕಾಸಗೊಳ್ಳುತ್ತಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಪ್ರೊ. ಅನಿಲಸಹಸ್ರಬುದ್ಧೆ ಹೇಳಿದರು.

    ತಾಲೂಕಿನ ವಡ್ಡರಹಟ್ಟಿ ಶ್ರೀವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ಸಮುತ್ಕರ್ಷ, ಬಳ್ಳಾರಿ ವಿಭಾಗದ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಪಾತ್ರ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಂತ್ರಜ್ಞಾನದಲ್ಲಿ ಭಾರತ ವಿಶ್ವಗುರುವಾಗಿದ್ದು, ಜಗತ್ತೇ ತಿರುಗಿ ನೋಡುವಂತ ಹೊಸ ಅವಿಷ್ಕಾರಗಳು ಇತ್ತೀಚಿನ ದಿನಗಳಲ್ಲಾಗಿವೆ. ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ತಂತ್ರಜ್ಞಾನ ಪಾತ್ರ ಪ್ರಮುಖವಾಗಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುತ್ತಿದೆ. ತಂತ್ರಜ್ಞಾನ ಬಳಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

    ನಂತರ ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ ಸಂವಾದ ನಡೆಸಿ, ಪ್ರಶೋತ್ತರಗಳಿಗೆ ಪರಿಹಾರ ತಿಳಿಸಿದರು. ಎನ್‌ಇಪಿ ಪರ್ಯಾಯವಾಗಿ ಎಸ್‌ಇಪಿ ಜಾರಿಗೊಳಿಸಿದರೂ ಶಿಕ್ಷಕರು ಕೌಶಲ ಬೋಧನೆ ಕ್ರಮ ಅನುಸರಿಸಬೇಕೆಂದರು.

    ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಮಾತನಾಡಿ, ಸುಧಾರಿತ ಕಲಿಕೆಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ ಎಂದರು.

    ಕಾಲೇಜಿನ ಪ್ರಾಧ್ಯಾಪಕ ಅಭಿಷೇಕ, ವಿವಿಧ ಕಾಲೇಜಿನ ಉಪನ್ಯಾಸಕರಾದ ಶಿವಾನಂದ ಮೇಟಿ, ಪವನಕುಮಾರ ಗುಂಡೂರ, ಹನುಮಂತಪ್ಪ, ಸುಂಕೇಶ್ವರ ಕರಿಗೂಳಿ, ಪಂಚಾಕ್ಷರಯ್ಯ, ಮಹೇಶ ಕುಮಾರ, ಬಸವರಾಜ, ಸಾಯಿಕುಮಾರ, ಆನಂದ ಪುರೋಹಿತ, ಬಸವರಾಜ ಸಿರಿಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts