More

    ಮಳೆ-ಗಾಳಿಗೆ ನೆಲಕಚ್ಚಿದ ಭತ್ತದ ಬೆಳೆ

    ಗಂಗಾವತಿ: ತಾಲೂಕಿನಾದ್ಯಂತ ಸುರಿದ ಬಿರುಗಾಳಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ತಾಲೂಕಿನ ಹೊಸ್ಕೇರಾ, ಹೊಸ್ಕೇರಾ ಕ್ಯಾಂಪ್, ಜಂಗಮರಕಲ್ಗುಡಿ, ಹೇರೂರು ಬಳಿ 200 ಎಕರೆ ಪ್ರದೇಶದಲ್ಲಿನ ಭತ್ತ ನೆಲಕ್ಕುರುಳಿದೆ.

    ಇನ್ನು 10 ದಿನದಲ್ಲಿ ಕೈ ಸೇರಬೇಕಿದ್ದ ಫಸಲು ಇದೀಗ ವರುಣ ಪಾಲಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ನೆಲ ಕಚ್ಚಿದ ಭತ್ತವನ್ನು ಎತ್ತಿ ಕಟ್ಟದಿದ್ದರೆ ನೆಲದಲ್ಲೇ ಮೊಳಕೆಯೊಡಿಯುವ ಸಾಧ್ಯತೆಗಳಿವೆ. ಕಾವೇರಿ ಸೋನಾ, ಅರ್‌ಎನ್‌ಆರ್ ಸೋನಾಕ್ಕೆ ಹೆಚ್ಚು ಹಾನಿಯಾಗಿದೆ.

    ಬೆಳೆ ರಕ್ಷಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದು, ಗೂಡು ಕಟ್ಟಿದರೂ ಮತ್ತೆ ಮಳೆಯಾದರೆ ಪ್ರಯೋಜನವಿಲ್ಲದಂತಾಗುತ್ತದೆ. ಕ್ವಿಂಟಾಲ್ ಭತ್ತಕ್ಕೆ 2200 ರೂ. ಬೆಲೆ ಇದ್ದು, ಮಳೆಯಿಂದ ತೇವಾಂಶ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಬೆಲೆ ಕುಸಿತವಾಗುವ ಸಾಧ್ಯತೆಗಳಿವೆ. ರಸ್ತೆ ಮೇಲೆ ಒಣಗಲು ಹಾಕಿದ್ದ ಭತ್ತವೂ ಮಳೆಯಿಂದ ತೊಯ್ದಿದ್ದು, ಒಣಗಿಸಿಕೊಳ್ಳಲು ಬಿಸಿಲಿಗಾಗಿ ರೈತರು ಕಾಯುತ್ತಿದ್ದಾರೆ.

    ಪರಿಶೀಲನೆ: ಮಳೆ, ಗಾಳಿಯಿಂದ ಹಾನಿಗೊಳಗಾದ ಹೊಸ್ಕೇರಾ, ಹೊಸ್ಕೇರಾ ಡಗ್ಗಿ ವ್ಯಾಪ್ತಿಯ ಪ್ರದೇಶಗಳಿಗೆ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು. ಮಳೆ ಮತ್ತು ಗಾಳಿಯಿಂದ ಶೇ.30 ಬೆಳೆ ಹಾನಿಯಾಗಿದ್ದು, ಅದರಲ್ಲೂ ಅರ್‌ಎನ್‌ಆರ್ ತಳಿಗೆ ಸಮಸ್ಯೆಯಾಗಿದೆ. ಗೂಡು ಕಟ್ಟಿ ಉಳಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts