More

    ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸಿ

    ಗಂಗಾವತಿ: ಜಾತಿ ನಿಂದನೆ ಕಾಯ್ದೆ ಜಾರಿಗೆ ಆಗ್ರಹಿಸಿ ಸವಿತಾ ಸಮಾಜ ಸಂಘದ ತಾಲೂಕು ಸಮಿತಿ ಸದಸ್ಯರು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಕೃಷ್ಣವೇಣಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಸಮಿತಿ ಅಧ್ಯಕ್ಷ ಎಚ್.ಗೋಪಾಲ ಮಾತನಾಡಿ, ಸವಿತಾ ಸಮುದಾಯ ಪರಂಪರೆಯಿಂದಲೂ ವೈದ್ಯ, ಕ್ಷೌರ, ಡೋಲು ಮತ್ತು ನಾದಸ್ವರ ನುಡಿಸುವ ವೃತ್ತಿಯಲ್ಲಿದ್ದು, ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸಮುದಾಯದ ಪಾರಂಪರಿಕ ವತ್ತಿಗಳ ಮೇಲೆ ಯಾವುದೇ ನಿಯಮಗಳಿಲ್ಲ.

    ಇದರಿಂದ ಜಾತಿ ಆಧಾರಿತ 12 ವತ್ತಿಗಳು ಸಮುದಾಯದಿಂದ ದೂರವಾಗಿವೆ. ಕ್ಷೌರಿಕ ಹಾಗೂ ಮಂಗಳವಾದ್ಯ ಪಾರಂಪರಿಕ ವೈದ್ಯ ಪದ್ಧತಿಯೂ ಧಾರ್ಮಿಕ ವತ್ತಿಯಾಗಿದ್ದು, ಇದನ್ನು ತಮಿಳುನಾಡು ಹೈಕೋರ್ಟ್ ಪುರಸ್ಕರಿಸಿದೆ.

    ಕಾಯ್ದೆ ಮತ್ತು ನಿಯಮ ರೂಪಿಸದಿದ್ದರಿಂದ ಸಮುದಾಯಕ್ಕೆ ಶೋಷಣೆಯಾಗುತ್ತಿದ್ದು, ಜಾತಿ ನಿಂದನೆ ಪ್ರಕರಣ ಹೆಚ್ಚುತ್ತಿವೆ. ಜಾತಿನಿಂದನೆ ಪ್ರಕರಣ ಅನ್ವಯವಾಗುವಂತೆ ಕಾಯ್ದೆ ರೂಪಿಸಬೇಕಿದ್ದು, ಸಮುದಾಯದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

    ಸಂಘದ ಗೌರವಾಧ್ಯಕ್ಷ ಎನ್.ವೈ. ಮಹಾಬಲೇಶ್ವರ, ಪದಾಧಿಕಾರಿಗಳಾದ ಈ. ತಾಯಪ್ಪ, ಎನ್. ಭೀಮೇಶ, ಈ. ಶ್ರೀನಿವಾಸ, ಆಂಜನೇಯಲು, ಕುಮಾರ, ಶ್ರೀನಿವಾಸ, ದೇವೇಂದ್ರ, ಕೃಷ್ಣ, ಪಿ. ಸಂತೋಷ, ಎನ್.ಎಂ. ಚಂದ್ರಶೇಖರ, ಎನ್.ಎಲ್ ನಾಗೇಶ, ವಿಶ್ವನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts