More

    ಹೆಣ್ಣುಮಕ್ಕಳ ರಕ್ಷಣೆಗೆ ನಡೆದ ಏಕೈಕ ಯುದ್ಧ

    ಗಂಗಾವತಿ: ಭೀಮಾ ಕೋರೆಗಾಂವ್ ವಿಜಯೋತ್ಸವ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಭೀಮಮವಾದ ಜಿಲ್ಲಾ ಘಟಕದಿಂದ ನಗರದಲ್ಲಿ ಪಂಜಿನ ಮೆರವಣಿಗೆ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿತ್ತು.

    ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಸಾಗಿದ ಪಂಜಿನ ಮೆರವಣಿಗೆಯುದ್ದಕ್ಕೂ ಕೋರೆಗಾಂವ್ ಹೋರಾಟ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

    ಸಮಿತಿ ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಬರಗೂರ್ ಮಾತನಾಡಿ, ಸ್ವಾಭಿಮಾನ, ಜನತೆಯ ಗೌರವ ಮತ್ತು ಹೆಣ್ಣುಮಕ್ಕಳ ರಕ್ಷಣೆಗೆ ನಡೆದ ಏಕೈಕ ಯುದ್ಧ ಭೀಮಾ ಕೋರೆಗಾಂವ್. ದೇಶದ ಶೋಷಿತ ಸಮುದಾಯ ಎದುರಿಸುತ್ತಿರುವ ಅವಮಾನ, ದೌರ್ಜನ್ಯ, ಅಸ್ಪೃಶ್ಯತೆ ವಿರುದ್ಧ ಮಹರ್ ಸೈನಿಕರು ಹೋರಾಡಿ, ಗೆಲವು ಸಾಧಿಸಿದ್ದಾರೆ. ದಲಿತ, ದಮನಿತರ, ಶೋಷಿತ ಸಮುದಾಯಗಳ ಸ್ವಾಭಿಮಾನದ ಗೆಲುವಾಗಿದ್ದು, ವಿಜಯೋತ್ಸವದ ಮೂಲಕ ಗೌರವ ಸಲ್ಲಿಸಲಾಗಿದೆ ಎಂದರು.

    ಉಪನ್ಯಾಸಕಿ ಡಾ.ಸೋಮಕ್ಕ, ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್, ಸಮಿತಿ ಪದಾಧಿಕಾರಿಗಳಾದ ಎಂ.ಯಲ್ಲಪ್ಪ, ಅತ್ತಾ ಸಂಪಂಗಿ, ಟಿ.ವೆಂಕಟೇಶ, ವೀರೇಶ ಜಂತಕಲ್, ಬಸವರಾಜ ಜಂತಕಲ್, ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts