More

    ಬಾರ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ: ಮಾಲೀಕರಿಗೆ 10 ಸಾವಿರ ರೂ. ದಂಡ

    ಗಂಗಾವತಿ: ಏಕಬಳಕೆ ಪ್ಲಾಸ್ಟಿಕ್ ಬಳಕೆ ಹಿನ್ನೆಲೆಯಲ್ಲಿ ನಗರದ ವಿವಿಧ ಮದ್ಯದ ಅಂಗಡಿಗಳ ಮೇಲೆ ನಗರಸಭೆ ಮತ್ತು ಅಬಕಾರಿ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ, ಪರಿಶೀಲಿಸಿತು.

    ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ನಿಷೇಧಿತ ಗ್ಲಾಸ್ ಮತ್ತು ನೀರಿನ ಪ್ಯಾಕೇಟ್ ಬಳಸಲಾಗುತ್ತಿದೆ. ಅಲ್ಲದೆ ಸಮರ್ಪಕ ವಿಲೇವಾರಿ ಮಾಡದೆ ಚರಂಡಿಯಲ್ಲಿ ಹಾಕಿದ್ದು, ಕೊಳಚೆ ನೀರು ರಸ್ತೆಗೆ ಹರಿದಿದೆ. ಆಕ್ರೋಶಗೊಂಡ ಕಾಲನಿ ಜನರು ದೂರು ನೀಡಿದ ಹಿನ್ನೆಲೆಯಲ್ಲಿ ಕನಕಗಿರಿ ರಸ್ತೆಯ ಅಶ್ವಮೇಧ ಬಾರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದರು. ಅಬಕಾರಿ ಮತ್ತು ನಗರಸಭೆ ಉದ್ಯಮ ಪರವಾನಗಿ ಕಾಯ್ದೆ ಉಲ್ಲಂಸಿರುವುದು ಕಂಡು ಬಂದಿದ್ದು, ಕೆಲಕಾಲ ಬಾರ್ ಬಂದ್ ಮಾಡಿದರು. ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಿ, ಎಚ್ಚರಿಕೆ ನೋಟಿಸ್ ಜಾರಿ ಮಾಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಬಹುತೇಕ ಬಾರ್‌ಗಳು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬೇರೆಡೆ ಸಾಗಿಸಿದ್ದು, ಕೆಲವರು ವಹಿವಾಟು ಬಂದ್ ಮಾಡಿದ್ದರು.

    ಅಬಕಾರಿ ನಿರೀಕ್ಷಕ ವಿಜಯರೆಡ್ಡಿ ಮಾತನಾಡಿ, ಮದ್ಯದ ಟೆಟ್ರಾ ಪ್ಯಾಕ್, ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಸಮರ್ಪಕ ವಿಲೇವಾರಿಗೆ ಸೂಚನೆ ನೀಡಿದ್ದು, ಉಲ್ಲಂಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಿಎಲ್2, ಸಿಎಲ್ 7 ಪರವಾನಗಿ ಪಡೆದ ಮಾಲೀಕರು ಅಬಕಾರಿ ಕಾಯ್ದೆ ಪಾಲಿಸದಿರುವುದು ಗಮನಕ್ಕೆ ಬಂದಿದ್ದು, ಪ್ರಕರಣ ದಾಖಲಿಸಲಾಗುವುದು. ಮೂರು ಬಾರಿ ನೋಟಿಸ್ ಪಡೆದವರ ಪರವಾನಗಿ ರದ್ದುಪಡಿಸಲಾಗುವುದು ಎಂದರು.

    ಏಕಬಳಕೆ ಪ್ಲಾಸ್ಟಿಕ್ ಬಳಸುವಂತಿಲ್ಲ. ಹಲವು ಬಾರಿ ತಿಳಿಸಿದರೂ ಮಾಲೀಕರು ಸರಿಯಾಗುತ್ತಿಲ್ಲ. ತ್ಯಾಜ್ಯ ವಿಲೇವಾರಿ ಕಾಯ್ದೆ ಉಲ್ಲಂಸಿದ್ದು, ಮೊದಲ ಬಾರಿಗೆ ದಂಡ ಹಾಕಿ, ನೋಟಿಸ್ ನೀಡಲಾಗುವುದು. ಮತ್ತೆ ಕಂಡು ಬಂದರೆ ಪರವಾನಗಿ ರದ್ದತಿಗೆ ಶಿಾರಸು ಮಾಡಲಾಗುವುದು.
    | ಆರ್.ವಿರೂಪಾಕ್ಷಮೂರ್ತಿ, ಪೌರಾಯುಕ್ತ, ನಗರಸಭೆ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts