More

    ಯೋಜನೆಗಳ ಅನುದಾನ ಕಡಿತಕ್ಕೆ ಆಕ್ರೋಶ

    ಗಂಗಾವತಿ: ಅಂಗನವಾಡಿ ಯೋಜನೆಗಳಿಗೆ (ಐಸಿಡಿಎಸ್) ಅನುದಾನ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸದಸ್ಯರು ಸಿಐಟಿಯು ಸಹಯೋಗದಲ್ಲಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಮನವಿ ಸಲ್ಲಿಸಿದರು.

    ಸಂಘದ ತಾಲೂಕು ಕಾರ್ಯದರ್ಶಿ ದುರುಗಮ್ಮ ಹೊಸ್ಕೇರಾ ಮಾತನಾಡಿ, ತಾಯಂದಿರುವ ಮತ್ತು ಮಕ್ಕಳ ಯೋಗಕ್ಷೇಮದಲ್ಲಿ ಪಾಲ್ಗೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಕೇಂದ್ರ ಸರ್ಕಾರದ ಉದಾಸೀನತೆ ಹೆಚ್ಚುತ್ತಿದ್ದು, ಯೋಜನೆಗಳಿಗೆ 300 ಕೋಟಿ ರೂ. ಕಡಿತಗೊಳಿಸುವ ಮೂಲಕ ಅನ್ಯಾಯ ಮಾಡಿದೆ.

    ಕಳೆದೆರೆಡು ವರ್ಷಗಳಿಂದ ಅನುದಾನ ಹೆಚ್ಚಿಸದೇ ಇರುವುದರಿಂದ ವೇತನ, ಬಾಡಿಗೆ ಮತ್ತು ಪೌಷ್ಟಿಕ ಆಹಾರ ವಿತರಣೆಗೆ ಅನುದಾನದ ಕೊರತೆಯಾಗಿದೆ. ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಲವು ವರ್ಷಗಳ ಬೇಡಿಕೆಯೂ ಈಡೇರುತ್ತಿಲ್ಲ. ಸಮುದಾಯಧಾರಿತ ಯೋಜನೆಗಳ ಅನುದಾನ ಕಡಿತಗೊಳಿಸುವುದರಿಂದ ಸಮರ್ಪಕ ಅನುಷ್ಠಾನದ ಮೇಲೆ ಪರಿಣಾಮ ಬೀರಲಿದೆ ಎಂದರು.

    ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಸಂಘದ ಉಪಾಧ್ಯಕ್ಷೆ ಮೇರಿ, ಪದಾಧಿಕಾರಿಗಳಾದ ಶಿವಬಸಮ್ಮ, ಮುಮ್ತಾಜ್, ಮೈಮುದಾಬೇಗಂ, ಗುರುಲಿಂಗಮ್ಮ, ಸಂಗೀತಾ, ಲಲಿತಾ, ಕವಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts