More

    ಕಾರ್ಯಕರ್ತರು ಪಕ್ಷ ಬಲಪಡಿಸಲು ಮುಂದಾಗಲಿ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ ಸಲಹೆ

    ಗಂಗಾವತಿ: ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕಿದ್ದು, ಎಸ್ಟಿ ಮೋರ್ಚಾ ರಾಜ್ಯ ಸಮಾವೇಶಕ್ಕೆ ಜನರನ್ನು ಕರೆತರುವುದರ ಜತೆಗೆ ಪಕ್ಷ ಬಲಪಡಿಸಬೇಕಿದೆ ಎಂದು ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ವಿಜಯನಗರ ನಗರ ಪ್ರಭಾರ ಎಚ್.ಎಸ್.ಗಿರೇಗೌಡ ಹೇಳಿದರು.

    ಬಳ್ಳಾರಿಯಲ್ಲಿ ಜರುಗಲಿರುವ ಎಸ್ಟಿ ಮೋರ್ಚಾ ರಾಜ್ಯ ಸಮಾವೇಶದ ನಿಮಿತ್ತ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ ಸಮುದಾಯದ ಮೀಸಲು ಪ್ರಮಾಣ ಹೆಚ್ಚಳ ಮೂಲಕ ಸರ್ಕಾರ ಸಮುದಾಯಕ್ಕೆ ನ್ಯಾಯ ಒದಗಿಸಿದೆ. ಪ್ರತಿಬೂತ್‌ನಲ್ಲೂ ಸಮುದಾಯದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಬೇಕು. ವಿಧಾನಸಭೆ ಕ್ಷೇತ್ರದಿಂದ ಅತಿ ಹೆಚ್ಚು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆದೊಯ್ಯುವಂತೆ ಸಲಹೆ ನೀಡಿದರು.

    ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಎಸ್ಟಿ ಸಮುದಾಯ ಬಿಜೆಪಿಯೊಂದಿಗಿದ್ದು, ಸರ್ಕಾರವೂ ಅತಿ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿದೆ. ಸಮಾವೇಶದಲ್ಲಿ ಕ್ಷೇತ್ರದಿಂದ 25ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಸಮಾವೇಶ ರೂಪುರೇಷೆ, ವಾಹನ ವ್ಯವಸ್ಥೆ ಮತ್ತು ಕಾರ್ಯಕರ್ತರ ಕಾಳಜಿ ಕುರಿತು ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ್ ಮಾತನಾಡಿದರು.

    ಬಳ್ಳಾರಿ ಜಿಲ್ಲೆ ಪ್ರಭಾರ ವಿರೂಪಾಕ್ಷಪ್ಪ ಸಿಂಗನಾಳ್, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಕೆ.ಆಗೋಲಿ, ಜಿಲ್ಲಾಧ್ಯಕ್ಷ ಚನ್ನವೀನರಗೌಡ ಆರಾಳ್, ಜಿಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ನಯೋಪ್ರಾ ಮಾಜಿ ಅಧ್ಯಕ್ಷ ಹೊಸ್ಮಲಿ ಮಲ್ಲೇಶಪ್ಪ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಚನ್ನಪ್ಪ ಮಳಗಿ, ವೆಂಕಟೇಶ ಅಮರಜ್ಯೋತಿ, ಕಾಶೀನಾಥ ಚಿತ್ರಗಾರ, ರಾಧಾ ಉಮೇಶ, ರೇಖಾರಾಯಭಾಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts