More

    ಶಿಕ್ಷಣ ಮತ್ತು ದಾಸೋಹಕ್ಕೆ ಮಠಗಳ ಆದ್ಯತೆ: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಹೇಳಿಕೆ

    ಗಂಗಾವತಿ: ಶಿಕ್ಷಣ ಮತ್ತು ದಾಸೋಹಕ್ಕೆ ಮಠಗಳು ಆದ್ಯತೆ ನೀಡಿದ್ದು, ಭಕ್ತರು ಬೆಂಬಲವಾಗಿ ನಿಂತರೆ ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆ ದೊರೆಯಲಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಗಡ್ಡಿ ಸದ್ಧರ್ಮ ಶ್ರೀ ಅಜಾತ ಅಪ್ಪಾಜಿ ಪುಣ್ಯಾಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಭಕ್ತರ ಅನುಕೂಲಕ್ಕಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅವರ ನೆರವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಧಾರ್ಮಿಕ ಚಟುವಟಿಕೆಗಳು ಹೆಚ್ಚಾದಂತೆ ಸುಭಿಕ್ಷೆ ನಿರೀಕ್ಷಿಸಲು ಸಾಧ್ಯವಿದ್ದು, ಮಠದ ಶಿಕ್ಷಣ ಮತ್ತು ದಾಸೋಹ ಕೈಂಕರ್ಯ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಆಶ್ರಮದ ಪೀಠಾಧಿಪತಿ ಅಜಾತ ಅಪ್ಪಾಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಠ ಮಾನ್ಯಗಳು ಜನರಿಗೆ ಹತ್ತಿರವಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿವೆ ಎಂದರು. ಭಕ್ತರಿಂದ ಶ್ರೀಗಳ ಪಾದಪೂಜೆ ಮತ್ತು ಸನ್ಮಾನ ನಡೆಯಿತು. ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ, ಮೈನಳ್ಳಿ ಹಿರೇಮಠ ಸಿದ್ಧೇಶ್ವರ ಶಿವಾಚಾರ್ಯರು, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಮುಖಂಡರಾದ ಶರಣಯ್ಯಸ್ವಾಮಿ ಮರಳೀಮಠ, ರೇವಣಸಿದ್ದಯ್ಯಸ್ವಾಮಿ, ಸೋಮೇಶ್ವರಸ್ವಾಮಿ ಕುಲ್ಕರ್ಣಿ, ಶಾಂತಮಲ್ಲಯ್ಯಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts