More

    ಹಲವು ವರ್ಷಗಳ ಹೋರಾಟಕ್ಕೆ ಸಂದ ಜಯ

    ಗಂಗಾವತಿ: ಜಗಜ್ಯೋತಿ ಬಸವಣ್ಣರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ರಾಷ್ಟ್ರೀಯ ಬಸವದಳದ ಸದಸ್ಯರು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.

    ಬಸವದಳ ತಾಲೂಕು ಅಧ್ಯಕ್ಷ ದಿಲೀಪ್‌ಕುಮಾರ ವಂದಾಲ್ ಮಾತನಾಡಿ, ಸಮಾನತೆ ತಳಹದಿ ಮೇಲೆ ಸಮ ಸಮಾಜವನ್ನು ನಿರ್ಮಿಸಿದ ಬಸವಣ್ಣನ ವಚನಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಹಲವು ವರ್ಷಗಳ ಹೋರಾಟದ ನಂತರ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ೋಷಿಸಿರುವುದು ಸ್ವಾಗತಾರ್ಹ ಎಂದರು.

    ಕ್ರಾಂತಿ ಚಕ್ರ ಬಳದ ಅಧ್ಯಕ್ಷ ಜೆ.ಭಾರದ್ವಾಜ್, ಪಿಎಸ್ಸೆಸ್ಸೆನ್ ಸದಸ್ಯ ವಿಶ್ವನಾಥ ಮಾಲಿ ಪಾಟೀಲ್, ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳಾದ ಎಚ್.ಮಲ್ಲಿಕಾರ್ಜುನ, ಕೆ.ವೀರೇಶಪ್ಪ, ವಿನಯಕುಮಾರ ಅಂಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ಮಂಜುನಾಥ ದೇವರಮನಿ, ಚನ್ನಬಸಮ್ಮ ಕಂಪ್ಲಿ, ಬಸವ ಜ್ಯೋತಿ, ತಿಪ್ಪಮ್ಮ ರಾಮಸಾಗರ, ಶಾಂತಮ್ಮ, ನಾಗರಾಜ್ ಅಂಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts