More

    ಸಂಗೀತದಿಂದ ಮಾನಸಿಕ ನೆಮ್ಮದಿ ಸಾಧ್ಯ

    ಗಂಗಾವತಿ: ಸಂಗೀತದಿಂದ ಮಾನಸಿಕ ನೆಮ್ಮದಿ ಸಾಧ್ಯವಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಬಾಲಕರ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ ಹೇಳಿದರು.

    ನಗರದ ಶ್ರೀ ನೀಲಕಂಠೇಶ್ವರ ವೃತ್ತದ ಬಳಿಯ ಕೃಷ್ಣ ಸಭಾಂಗಣದಲ್ಲಿ ಹಿರೇಜಂತಕಲ್ ಜನನಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಪರಂಪರೆಯಿಂದಲೂ ಸಂಗೀತಕ್ಕೆ ಮಹತ್ವವಿದ್ದು, ಕಲಾವಿದರಿಗೆ ವೇದಿಕೆ ಒದಗಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ ಎಂದರು.

    ಕನ್ನಡ ಹಂಪಿ ವಿವಿ ಅಧ್ಯಾಪಕ ಹಾಗೂ ಕಲಾವಿದ ಡಾ.ತಿಮ್ಮಣ್ಣ ಭೀಮರಾಯ ಮಾತನಾಡಿ, ಜನಸಾಮಾನ್ಯರ ಕಷ್ಟಕಾರ್ಪಣ್ಯ ಮರೆಸುವ ಶಕ್ತಿ ಸಂಗೀತಕ್ಕಿದ್ದು, ಮನಸ್ಸಿನ ನೆಮ್ಮದಿಗೆ ದಿವ್ಯ ಔಷಧ. ಸಂಗೀತ ಆಲಿಸಿ ಮತ್ತು ಗೌರವಿಸಿ ಎಂದರು.

    ಸಂಸ್ಥೆ ಕಾರ್ಯಕ್ರಮಗಳ ಕುರಿತು ಅಧ್ಯಕ್ಷೆ ರಂಜನಿ ಆರ್ತಿ ಮಾತನಾಡಿದರು. ಸಾಹಿತಿ ಲಿಂಗಣ್ಣ ಜಂಗಮರಹಳ್ಳಿ, ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್, ಉಪನ್ಯಾಸಕರಾದ ಡಾ. ಸೋಮಕ್ಕ, ರಮೇಶ ಸುಗ್ಗೇನಹಳ್ಳಿ, ಡಿಎಸ್‌ಎಸ್ (ಭೀಮವಾದ) ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ, ಗ್ರಂಥಪಾಲಕ ರಮೇಶ ಗಬ್ಬೂರ, ಮುಖಂಡರಾದ ಶಿವಲಿಂಗಯ್ಯ ಶಾಸಿ, ರತ್ನಮ್ಮ ಆರ್ತಿ, ಹುಲ್ಲೇಶ, ಕಲಾವಿದರಾದ ರಿಜ್ವಾನ್ ಮುದ್ದಾಬಳ್ಳಿ, ಶರಣಮ್ಮ ಕಾರಟಗಿ ಇತರರಿದ್ದರು. ನಂತರ ವಿವಿಧ ಕಲಾವಿದರಿಂದ ಸಂಗೀತೋತ್ಸವ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts