More

    ಕೊಪಣ ನಾಡಲ್ಲಿ ಅನುರಣಿಸಿದ ಕೋಟಿ ಕಂಠ ಗಾಯನ: ನಾಡಗೀತೆ ಸೇರಿ ಆರು ಹಾಡುಗಳ ಡಿಂಡಿಮ

    ಗಂಗಾವತಿ: ನಾಡಿನ ನೆಲ, ಜಲ ಮತ್ತು ಸಂಸ್ಕೃತಿ ರಕ್ಷಣೆ ವಿಚಾರದಲ್ಲಿ ಸರ್ಕಾರ ಕ್ರಿಯಾಶೀಲ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

    ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದ ಬಾಬು ಜಗಜೀವನರಾಮ್ ವೃತ್ತದಲ್ಲಿ ಬಿಜೆಪಿ ನಗರ ಘಟಕ ಶುಕ್ರವಾರ ಏರ್ಪಡಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಡಿನ ಹಿರಿಮೆ ವಿಶ್ವದಾದ್ಯಂತ ಪಸರಿಸಿದ್ದು, ಸಾಹಿತಿಗಳು, ಸಾಧಕರು ಮತ್ತು ಕಲಾವಿದರ ಸಾರ್ಥಕ ಸೇವೆ ಸ್ಮರಣೀಯ. ನಾಡು, ನುಡಿ ಬಿಂಬಿಸುವ ಹಾಡುಗಳನ್ನು ಜನಸಮೂಹ ಹಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ ಎಂದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಮಾತನಾಡಿದರು. ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಚನ್ನಪ್ಪ ಮಳಗಿ, ಶ್ರೀನಿವಾಸ ಧೂಳಾ, ರಾಧಾ ಉಮೇಶ, ಸಂಗಯ್ಯಸ್ವಾಮಿ ಸಂಶಿಮಠ ಇತರರಿದ್ದರು.

    ಬಾಲಕರ ಪಪೂ ಕಾಲೇಜು: ತಾಲೂಕಾಡಳಿತದಿಂದ ಸಮೂಹ ಗಾಯನ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸಾಹಿತಿಗಳು ರಚಿಸಿದ 6 ಹಾಡುಗಳನ್ನು 20 ಶಾಲೆಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಡುವ ಮೂಲಕ ಗಮನಸೆಳೆದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಶಾಸಕ ಪರಣ್ಣ ಮುನವಳ್ಳಿ ಸೇರಿ ಅಧಿಕಾರಿಗಳು ಮತ್ತು ಗಣ್ಯರು ಹೆಜ್ಜೆ ಹಾಕಿದರು. ಮಕ್ಕಳಿಗೆ ಕನ್ನಡಾಭಿಮಾನ ಸಂಕಲ್ಪದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಹಸೀಲ್ದಾರ್ ಯು.ನಾಗರಾಜ್, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ತಾಪಂ ಇಒ ಮಹಾಂತಗೌಡ ಪಾಟೀಲ್, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಕನ್ನಡ ಪರ ಸಂಘಟನೆ ಪದಾಧಿಕಾರಿಗಳಾದ ಪಂಪಣ್ಣ ನಾಯಕ, ಬಳ್ಳಾರಿ ರಾಮಣ್ಣ ನಾಯಕ, ರಾಜೇಶ ಅಂಗಡಿ, ಮನೋಹರಗೌಡ ಹೇರೂರು, ವಿರೂಪಾಕ್ಷಗೌಡ ನಾಯಕ ಇತರರಿದ್ದರು.

    ಜೆಸ್ಕಾಂ ಕಚೇರಿ ಆವರಣ: ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಸಾಮೂಹಿಕ ಗಾಯನ ಆಯೋಜಿಸಲಾಗಿತ್ತು. ಲೈನ್‌ಮನ್‌ಗಳು ಹೆಲ್ಮೆಟ್ ಮತ್ತು ಸಮವಸದೊಂದಿಗೆ ಭಾಗವಹಿಸಿದ್ದು ವಿಶೇಷ. ಇಇ ರಿಯಾಜ್ ಅಹ್ಮದ್, ಎಇಇಗಳಾದ ಎಂ.ವೀರೇಶ, ಎಸ್.ಐ.ಹಿರೇಮನಿ, ಯಮನಪ್ಪ, ಎಇ ಶ್ರೀಧರ್ ಗೌಡರ್, ಸಂಘಟನೆ ಪದಾಧಿಕಾರಿಗಳಾದ ಜಗನ್ನಾಥ ರಾಠೋಡ, ಶಂಕರ್ ಇತರರಿದ್ದರು.

    ತಲೆ ತಿರುಗಿ ಬಿದ್ದ ಮಕ್ಕಳು: ತಾಲೂಕು ಆಡಳಿತ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ನಿಗದಿಗಿಂತ ಒಂದು ಗಂಟೆ ಮುಂಚೆ ಮಕ್ಕಳನ್ನು ಕರೆತಂದಿದ್ದರಿಂದ ಸುಸ್ತಾಗಿ ಕೆಲವರು ಗಾಯನದ ವೇಳೆ ತಲೆ ತಿರುಗಿ ಬಿದ್ದ ಪ್ರಸಂಗ ಜರುಗಿತು. ಕುಡಿವ ನೀರಿನ ವ್ಯವಸ್ಥೆ ಮಾಡದ್ದರಿಂದ ಮಕ್ಕಳು ಪರದಾಡಿದರು. ಸಾವಿರಕ್ಕೂ ಹೆಚ್ಚು ಮಕ್ಕಳು ರಸ್ತೆಗಿಳಿದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಪೂರ್ವಯೋಜಿತ ಕಾರ್ಯಕ್ರಮವಾಗಿದ್ದರೂ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದ್ದರಿಂದ ಅವ್ಯವಸ್ಥೆಗೆ ಕಾರಣವಾಗಿದ್ದು, ಶಿಕ್ಷಕರು ಮತ್ತು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.

    ಕೊಪಣ ನಾಡಲ್ಲಿ ಅನುರಣಿಸಿದ ಕೋಟಿ ಕಂಠ ಗಾಯನ: ನಾಡಗೀತೆ ಸೇರಿ ಆರು ಹಾಡುಗಳ ಡಿಂಡಿಮ
    ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಮಕ್ಕಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts