More

    ಕೂಲಿ ವಿತರಣೆಯಲ್ಲಿ ತಾರತಮ್ಯಕ್ಕೆ ಆಕ್ರೋಶ, ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ನರೇಗಾ ಕಾರ್ಮಿಕರು

    ಗಂಗಾವತಿ: ಕೂಲಿ ವಿತರಣೆಯಲ್ಲಿ ತಾರತಮ್ಯ ನೀತಿ ಖಂಡಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದ ಸದಸ್ಯರು ನಗರದ ತಾಪಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ನರೇಗಾ ಯೋಜನೆಯಡಿ ದಿನಕ್ಕೆ 275 ರೂ. ಕೂಲಿ ಮತ್ತು 27 ರೂ. ಪ್ರಯಾಣ ಭತ್ಯೆನೀಡಬೇಕೆಂಬ ನಿಯಮವಿದ್ದರೂ ಕೆಲ ಗ್ರಾಪಂಗಳಲ್ಲಿ 244 ರೂ. ನೀಡುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. 6 ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಏಕಕಾಲಕ್ಕೆ ಕಚೇರಿಗೆ ಬಂದಿದ್ದರಿಂದ ಕೆಲಕಾಲ ಗದ್ದಲ ನಡೆದಿದ್ದು, ಘಟನೆಯಲ್ಲಿ ಹೊಸಳ್ಳಿಯ ದುರುಗಮ್ಮ ಛಲವಾದಿ ಎಂಬಾಕೆ ಅಸ್ವಸ್ಥಗೊಂಡಿದ್ದರಿಂದ ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತು.

    ಸಂಘದ ಜಿಲ್ಲಾ ಸಂಚಾಲಕ ಎ.ಎಲ್.ತಿಮ್ಮಣ್ಣ ಮಾತನಾಡಿ, ತಾಲೂಕಿನ ಯರಡೋಣಾ, ಚಿಕ್ಕಜಂತಕಲ್, ಚಿಕ್ಕಡಂಕನಕಲ್, ಸಣಾಪುರ, ವಡ್ಡರಹಟ್ಟಿ, ಢಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡುತ್ತಿದ್ದು, ವಿಚಾರಿಸಿದರೆ ದೌರ್ಜನ್ಯದಿಂದ ಉತ್ತರಿಸುತ್ತಿದ್ದಾರೆ. ಅವರೊಂದಿಗೆ ನಿರ್ವಹಿಸಿದ ಕೆಲ ಕಾರ್ಮಿಕರಿಗೆ 312ರೂ.ಗಳಂತೆ ಕೂಲಿ ನೀಡುತ್ತಿದ್ದಾರೆ. ತಾರತಮ್ಯ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವರಿಗೂ ಹೋರಾಟ ಮುಂದುವರಿಯಲಿದೆ. ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿರುವ ಕೆಲ ಸಿಬ್ಬಂದಿ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು. ಪದಾಧಿಕಾರಿಗಳಾದ ಎ.ಹುಲುಗಪ್ಪ, ಎಸ್.ಕನಕರಾಯ, ಶೇಖಮ್ಮ, ಮುತ್ತಣ್ಣ, ಈರಮ್ಮ, ನೀಲಮ್ಮ, ಗಂಗಮ್ಮ, ಮರಿಯಮ್ಮ ಯಮನೂರ್ ಇತರರಿದ್ದರು.

    ಕೂಲಿ ವಿತರಣೆಯಲ್ಲಿ ತಾರತಮ್ಯಕ್ಕೆ ಆಕ್ರೋಶ, ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ನರೇಗಾ ಕಾರ್ಮಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts