More

    ಎಚ್ಚರ ತಪ್ಪಿದರೆ ಅನಾಹುತಕ್ಕೆ ಹಾದಿ; ಸಾರಿಗೆ ಇಲಾಖೆ ನಿರೀಕ್ಷಕ ಜಿ.ಪಿ.ಪ್ರಕಾಶ ಎಚ್ಚರಿಕೆ


    ಕಾನೂನು ಅರಿವು, ನೆರವು ಕಾರ್ಯಾಗಾರ

    ಗಂಗಾವತಿ: ಸಂಚಾರ ನಿಯಮಗಳ ಪಾಲನೆಯೊಂದಿಗೆ ವಾಹನ ಚಲಾಯಿಸಬೇಕು. ಎಚ್ಚರ ತಪ್ಪಿದರೆ ಅನಾಹುತಕ್ಕೆ ಹಾದಿ ಮಾಡಿಕೊಟ್ಟಂತೆ ಎಂದು ಸಾರಿಗೆ ಇಲಾಖೆ ನಿರೀಕ್ಷಕ ಜಿ.ಪಿ.ಪ್ರಕಾಶ ಹೇಳಿದರು.

    ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಮತ್ತು ಎನ್‌ಇಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ಮಂಗಳವಾರ ಮೋಟಾರು ವಾಹನ ಕಾಯ್ದೆ ಕುರಿತು ಆಯೋಜಿಸಿದ್ದ ಕಾನೂನು ಅರಿವು, ನೆರವು ಕಾರ್ಯಾಗಾರದಲ್ಲಿ ಮಾತನಾಡಿದರು. ರಸ್ತೆ ಬದಿಯಲ್ಲಿ ಹಾಕಿರುವ ಸೂಚನಾ ಲಕಗಳನ್ನು ಗಮನದಲ್ಲಿರಿಸಿ ವಾಹನ ಚಲಾಯಿಸಬೇಕು. ವೇಗದಲ್ಲಿ ಮಿತಿಯಿರಬೇಕು. ಸಂಚಾರ ನಿಯಮಗಳ ಪಾಲನೆಗಾಗಿ ಚಾಲನೆ ಪರವಾನಗಿ ನೀಡುವಾಗ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ಪರೀಕ್ಷೆ ಮೂಲಕ ಪರವಾನಗಿ ನೀಡಲಾಗುತ್ತಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಜೆಎಂಎ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ ವಿ.ಮೂಗತಿ ಮಾತನಾಡಿ, ಕಾನೂನಿನ ತಿಳಿವಳಿಕೆಗಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಅಪರಾಧ ಪ್ರಕರಣ ನಿಯಂತ್ರಣಕ್ಕೆ ಕಾನೂನು ತಿಳಿವಳಿಕೆ ಮುಖ್ಯ ಎಂದರು.

    ಮೋಟಾರು ವಾಹನ ಕಾಯ್ದೆ ಕುರಿತ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ತಾಪಂ ಇಒ ಡಿ.ಮೋಹನ್, ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನ ಹಿರೇಮಠ, ಸಂಚಾರ ಠಾಣೆ ಪಿಎಸ್‌ಐ ಪುಂಡಲೀಕಪ್ಪ ಜಾಧವ್, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಉಪಾಧ್ಯಕ್ಷ ಬಿ.ಪ್ರಭು, ಖಜಾಂಚಿ ಟಿ.ಮಂಜುನಾಥ, ಕಾರ್ಯದರ್ಶಿ ವಿರೂಪಾಕ್ಷಪ್ಪ ಬಾವಿಕಟ್ಟಿ, ಡಿಪೋ ಮ್ಯಾನೇಜರ್ ಸಂಜೀವಮೂರ್ತಿ, ವಕೀಲ ಎಚ್.ಎ.ರೋಣದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts