More

    ಮೀನು, ವಾನರಗಳಿಗೆ ನಾಮುಂದು ತಾಮುಂದು ಎನ್ನುವ ಜನ

    ಗಂಗಾವತಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಕೋತಿ ಮತ್ತು ಮೀನುಗಳಿಗೆ ದೈನಂದಿನ ಆಹಾರ ಒದಗಿಸಲು ಜನರಲ್ಲಿ ಪೈಪೋಟಿ ಹೆಚ್ಚಿದೆ.

    ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಚ, ಮಧುವನ, ಚಿಕ್ಕರಾಂಪುರದ ಸಂಸ್ಕೃತ ಪಾಠ ಶಾಲೆ ವ್ಯಾಪ್ತಿಯಲ್ಲಿ ಕರಿ ಮತ್ತು ಕೆಂಪು ಸೇರಿ ಅಂದಾಜು 2000 ಕೋತಿಗಳಿವೆ. ಪಂಪಾಸರೋವರದಲ್ಲಿ ಮೀನುಗಳು ಅಧಿಕವಾಗಿವೆ. ಭಕ್ತರು ನೀಡುವ ಹಣ್ಣು, ಬಿಸ್ಕತ್ ಮತ್ತಿತರ ತಿನ್ನುವ ವಸ್ತುಗಳೇ ಇವುಗಳ ಆಹಾರ. ಹೀಗಾಗಿ ಇವಕ್ಕೆ ಆಹಾರ ಹುಡುಕಿಕೊಂಡು ಹೋಗುವ ಅಭ್ಯಾಸವಿಲ್ಲ. ಲಾಕ್‌ಡೌನ್‌ನಿಂದ ಜನ ಬರದಂತಾಗಿ ಸಮಸ್ಯೆ ಎದುರಾಗಿತ್ತು. ಇದರಿಂದ ಕೋತಿಗಳು ಕಂಗಾಲಾಗಿದ್ದವು. ನಂತರ ತಾಲೂಕಾಡಳಿತ ಆಹಾರದ ವ್ಯವಸ್ಥೆ ಮಾಡಿತ್ತು. ಈಗ ಜನಪ್ರತಿನಿಧಿಗಳು, ಉದ್ಯಮಿಗಳು, ಯುವಕರು ಆಹಾರ ನೀಡಲು ಮುಂದೆ ಬರುತ್ತಿದ್ದಾರೆ. ಹಸಿ ಕಡಲೆ, ಸೇಂಗಾ, ಬಾಳೆ ಇತರೆ ಹಣ್ಣುಗಳನ್ನು ನೀಡುತ್ತಿದ್ದಾರೆ. 5ರಿಂದ 6 ಬಾಳೆ ಗೊನೆ, 50 ಕೆಜಿಗೂ ಹೆಚ್ಚು ಧಾನ್ಯ ನಿತ್ಯ ನೀಡಲಾಗುತ್ತಿದೆ.

    ಮೀನು, ವಾನರಗಳಿಗೆ ನಾಮುಂದು ತಾಮುಂದು ಎನ್ನುವ ಜನ



    ಕೋತಿ ಮತ್ತು ಮೀನುಗಳಿಗೆ ಆಹಾರ ನೀಡುವುದರಿಂದ ಖುಷಿಯಾಗಿದೆ. ಕುಟುಂಬ ಸಮೇತ ತೆರಳಿ ಆಹಾರ ಪೂರೈಸಲಾಗುತ್ತಿದೆ. ಮೂಕ ಪ್ರಾಣಿಗಳಿಗೆ ನಾವೇ ಅಸರೆಯಾಗಬೇಕು.
    | ಸಂತೋಷ ಕೆಲೋಜಿ ಉದ್ಯಮಿ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts