More

    ಕಡಿಮೆ ಕೂಲಿ ಪಾವತಿಗೆ ಆಕ್ರೋಶ


    ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕಡಿಮೆ ಕೂಲಿ ಪಾವತಿಸಿದ ತಾಲೂಕಿನ ವೆಂಕಟಗಿರಿ ಗ್ರಾಪಂ ಸಿಬ್ಬಂದಿ ಕ್ರಮ ಖಂಡಿಸಿ ಪ್ರಾಂತ ರೈತ ಸಂಘದ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

    ವೆಂಕಟಗಿರಿ ಮತ್ತು ದಾಸನಾಳ ವ್ಯಾಪ್ತಿಯ ಕೂಲಿಕಾರರೊಂದಿಗೆ ಪ್ರತಿಭಟನೆ ನಡೆಸಿದ ತಾಲೂಕು ಸಮಿತಿ ಸದಸ್ಯರು ಬೇಡಿಕೆ ಮನವಿಯನ್ನು ತಾಪಂ ಇಒ ಡಾ.ಮೋಹನ್ ಅವರಿಗೆ ಸಲ್ಲಿಸಿದರು. ನೇತೃತ್ವ ವಹಿಸಿದ್ದ ತಾಲೂಕು ಸಮಿತಿ ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ವೆಂಕಟಗಿರಿ ಗ್ರಾಪಂ ವ್ಯಾಪ್ತಿಯ ಜಿನುಗು ಕೆರೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ನರೇಗಾ ಯೋಜನೆಯ ಕೂಲಿಯನ್ನು ಕಡಿಮೆ ವಿತರಿಸಲಾಗಿದೆ. ಕೂಲಿ ಮತ್ತು ಪ್ರಯಾಣ ಭತ್ಯೆ ಸೇರಿ ಪ್ರತಿ ಕೂಲಿಕಾರರಿಗೆ 97 ರೂ. ವಿತರಿಸಲಾಗಿದೆ. ಇದರಿಂದ ಕೂಲಿಕಾರರಿಗೆ ತೊಂದರೆಯಾಗಿದೆ. ಕೃಷಿ ಚಟುವಟಿಕೆಗಳು ಯಂತ್ರದ ಮೇಲೆ ಅವಲಂಬಿತವಾಗಿದ್ದು, ಕೂಲಿಕಾರರು ಗುಳೇ ಹೋಗುವ ಸ್ಥಿತಿ ಬಂದಿದೆ. ಇಂತಹ ಸ್ಥಿತಿಯಲ್ಲಿ ಕೆಲಸ ಮಾಡಿದ ಕೂಲಿಕಾರಿಗೆ ಕಡಿಮೆ ಕೂಲಿ ವಿತರಿಸಿದ್ದು ಸರಿಯಲ್ಲ. ಕೂಡಲೇ ವ್ಯತ್ಯಾಸದ ಕೂಲಿ ಪಾವತಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

    ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಮುತ್ತಣ್ಣ, ದುರ್ಗಪ್ಪ, ದ್ಯಾವಣ್ಣ, ಈರಮ್ಮ,ಗಂಗಮ್ಮ,ಯಂಕಮ್ಮ,ಹುಲುಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts